ಎರಡನೇ ಜನರೇಷನ್ ಜಿಎಸ್‌ಟಿ ಸುಧಾರಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸುಳಿವು ಕೊಟ್ಟಿದ್ದರು. ಆ ಮೂಲಕ ದೇಶದ ಜನರು ದೀಪಾವಳಿಗೆ ಡಬಲ್ ಧಮಾಕಾ ನಿರೀಕ್ಷಿಸಬಹುದು ಎಂದಿದ್ದರು. ಈಗ ಧಮಾಕಾ, ದಸರಾಗೂ ಮುನ್ನವೇ ಘೋಷಣೆ ಆಗಿದೆ.
ಹಾಲಿ ಇರುವ ಶೇ. 5, ಶೇ. 12, ಶೇ. 18 ಮತ್ತು ಶೇ .28 ತೆರಿಗೆಯ ನಾಲ್ಕು ಶ್ರೇಣಿ ಬದಲು ಶೇ. 5 ಮತ್ತು ಶೇ. 18 ಎರಡೇ ಶ್ರೇಣಿಗೆ ಇಳಿಸಲಾಗಿದೆ. ಬಹುತೇಕ ದಿನಬಳಕೆ ವಸ್ತುಗಳನ್ನು ಕನಿಷ್ಠ ತೆರಿಗೆ ವ್ಯಾಪ್ತಿಗೆ ತರುವ ತೀರ್ಮಾನ ಹೊರಬಿದ್ದಿದೆ. ಇನ್ಮೇಲೆ ಕೇವಲ ಎರಡು ಜಿಎಸ್‌ಟಿ ಸ್ಲ್ಯಾಬ್‌ಗಳು ಮಾತ್ರ ಇರಲಿವೆ. ಶೇಕಡಾ 5 ಮತ್ತು ಶೇ 18 ಸ್ಲ್ಯಾಬ್‌ಗಳು ಮಾತ್ರ ಇರಲಿವೆ. 12 ಪ್ರತಿಶತ ಮತ್ತು 28 ಪ್ರತಿಶತದ ಸ್ಲ್ಯಾಬ್‌ಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 22 ರಿಂದ ಹೊಸ ಜಿಎಸ್‌ಟಿ ಜಾರಿಗೆ ಬರಲಿದೆ. ವಿಶೇಷವಾಗಿ ಈಗಲೂ ಕೆಳ ಮಧ್ಯಮ ವರ್ಗದವರಿಗೆ ಲಕ್ಷುರಿಯೇ ಆಗಿರುವ ಬೈಕು, ದೊಡ್ಡ ಟಿವಿ, ಎಸಿ ಮೊದಲಾದವುಗಳೂ ಅಗ್ಗವಾಗಿರುವುದು.
28 ರಿಂದ 18% ತೆರಿಗೆ ಸ್ಲ್ಯಾಬ್‌ನ ಪಟ್ಟಿ
ಎಸಿಗಳು
32 ಇಂಚುಗಳಿಗಿಂತ ದೊಡ್ಡ ಟಿವಿಗಳು
ಪಾತ್ರೆ ತೊಳೆಯುವ ಯಂತ್ರಗಳು
ಸಣ್ಣ ಕಾರುಗಳು
350 ಸಿಸಿ ಅಥವಾ ಅದಕ್ಕಿಂತ ಕಡಿಮೆ ಇರುವ ಬೈಕ್‌ಗಳು
ಬಸ್‌ಗಳು, ಟ್ರಕ್‌ಗಳು, ಆಂಬ್ಯುಲೆನ್ಸ್‌ಗಳು
ಎಲ್ಲಾ ಆಟೋ ಬಿಡಿಭಾಗಗಳು
ತ್ರಿಚಕ್ರ ವಾಹನಗಳು
ಜಿಎಸ್‌ಟಿ 5% ಕ್ಕೆ ಇಳಿಸಲಾದ ವಸ್ತುಗಳು
ಉಪ್ಪು
ಭುಜಿಯಾ
ಸಾಸ್
ಪಾಸ್ತಾ
ಇನ್‌ಸ್ಟಂಟ್ ನೂಡಲ್ಸ್
ಚಾಕೊಲೇಟ್
ಕಾಫಿ
ಸಂರಕ್ಷಿತ ಮಾಂಸ
ಕಾರ್ನ್‌ಫ್ಲೇಕ್‌ಗಳು
ಬೆಣ್ಣೆ
ತುಪ್ಪ
ಶೂನ್ಯ ತೆರಿಗೆ ೦% ಟ್ಯಾಕ್ಸ್
ವೈಯಕ್ತಿಕ ಆರೋಗ್ಯ ವಿಮೆ ಮತ್ತು ಜೀವ ವಿಮೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಜೊತೆಗೆ ಕಾನ್ಸರ್ ಔಷಧಿಗಳು ಸೇರಿದಂತೆ 33 ಜೀವರಕ್ಷಕ ಔಷಧಿಗಳಿಗೂ ಇನ್ನು ಮುಂದೆ ತೆರಿಗೆ ಇರುವುದಿಲ್ಲ. ಎಲ್ಲಾ ರೀತಿಯ ಬ್ರೆಡ್, ಹಾಲಿನ ಉತ್ಪನ್ನಗಳಿಗೂ ಶೂನ್ಯ ತೆರಿಗೆ ವಿಧಿಸಲಾಗಿದೆ. ಅದೇ ರೀತಿ ಸಾದಾ ಚಪಾತಿಗಳು, ಪರೋಟ, ಕಾಕ್ರಾ, ರೋಟಿಗಳನ್ನೂ ಶೂನ್ಯ ತೆರಿಗೆ ವ್ಯಾಪ್ತಿಗೆ ತರಲಾಗಿದೆ.
ಇವು ಇನ್ಮುಂದೆ ದುಬಾರಿ :
ತಂಬಾಕು, ಪಾನ್‌ಮಸಾಲಾ (ಪಾಪದ ತೆರಿಗೆ), ಐಷಾರಾಮಿ ಕಾರುಗಳು ಶೇ. 40ರ ತೆರಿಗೆ ವ್ಯಾಪ್ತಿಯಲ್ಲಿ ಮುಂದುವರಿಯಲಿವೆ. ಖಾಸಗಿ ವಿಮಾನಗಳನ್ನೂ ಇದೇ ವ್ಯಾಪ್ತಿಯಲ್ಲಿ ಇರಿಸಲಾಗಿದೆ. ಯಾಚ್‌ಗಳು, ಖಾಸಗಿ ಐಷಾರಾಮಿ ಬೋಟ್‌ಗಳನ್ನೂ ಈ ವ್ಯಾಪ್ತಿಗೆ ತರಲಾಗಿದೆ. ಕೂಲ್ ಡ್ರಿಂಕ್ಸ್‌ಗಳನ್ನೂ ಶೇ. 40ರ ತೆರಿಗೆ ವ್ಯಾಪ್ತಿಯಲ್ಲಿ ಇರಿಸಲಾಗಿದೆ.
1.ದೈನಂದಿನ ಅಗತ್ಯ ವಸ್ತುಗಳು
| ವಸ್ತುಗಳು | ಹಳೆಯ ದರ | ಹೊಸ ದರ |
| ಹೇರ್ ಆಯಿಲ್, ಶಾಂಪೂ, ಟೂತ್‌ಪೇಸ್ಟ್, ಸೋಪ್, ಟೂತ್ ಬ್ರಷ್, ಶೇವಿಂಗ್ ಕ್ರೀಮ್ | 18% | 5% |
| ಬೆಣ್ಣೆ, ತುಪ್ಪ, ಚೀಸ್ ಮತ್ತು ಡೈರಿ ಸ್ಪ್ರೆಡ್‌ಗಳು | 12% | 5% |
| ಪ್ಯಾಕೇಜ್ ಮಾಡಿದ ಕುರುಕಲು ತಿಂಡಿಗಳು | 12% | 5% |
| ಪಾತ್ರೆಗಳು | 12% | 5% |
| ಹಾಲುಣಿಸುವ ಬಾಟಲ್‌ಗಳು, ಮಕ್ಕಳಿಗಾಗಿ ನ್ಯಾಪ್‌ಕಿನ್‌ಗಳು ಮತ್ತು ಕ್ಲಿನಿಕಲ್ ಡೈಪರ್‌ಗಳು | 12% | 5% |
| ಹೊಲಿಗೆ ಯಂತ್ರಗಳು ಮತ್ತು ಬಿಡಿ ಭಾಗಗಳು | 12% | 5% |
- ರೈತರು ಮತ್ತು ಕೃಷಿಗೆ ಸಂಬಂಧಿಸಿದ ಉತ್ಪನ್ನಗಳು
| ವಸ್ತುಗಳು | ಹಳೆಯ ದರ | ಹೊಸ ದರ |
| ಟ್ರ್ಯಾಕ್ಟರ್ ಟೈರ್‌ಗಳು ಮತ್ತು ಬಿಡಿಭಾಗಗಳು | 18% | 5% |
| ಟ್ರ್ಯಾಕ್ಟರ್‌ಗಳು | 12% | 5% |
| ನಿರ್ದಿಷ್ಟ ಜೈವಿಕ-ಕೀಟನಾಶಕಗಳು, ಸೂಕ್ಷ್ಮ-ಪೋಷಕಾಂಶಗಳು | 12% | 5% |
| ಹನಿ ನೀರಾವರಿ ವ್ಯವಸ್ಥೆ ಮತ್ತು ಸ್ಪ್ರಿಂಕ್ಲರ್‌ಗಳು | 12% | 5% |
| ಕೃಷಿ, ತೋಟಗಾರಿಕೆ ಅಥವಾ ಅರಣ್ಯ ಯಂತ್ರಗಳು | 12% | 5% |
- ಆರೋಗ್ಯ ವಲಯದ ಉತ್ಪನ್ನಗಳು
| ವಸ್ತುಗಳು | ಹಳೆಯ ದರ | ಹೊಸ ದರ |
| ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆ | 18% | ಇಲ್ಲ (Nil) |
| ಥರ್ಮಾಮೀಟರ್ | 18% | 5% |
| ವೈದ್ಯಕೀಯ ದರ್ಜೆಯ ಆಮ್ಲಜನಕ | 12% | 5% |
| ಎಲ್ಲಾ ಡಯಾಗ್ನೋಸ್ಟಿಕ್ ಕಿಟ್‌ಗಳು ಮತ್ತು ರೀಏಜೆಂಟ್ಸ್ | 12% | 5% |
| ಗ್ಲುಕೋಮೀಟರ್ ಮತ್ತು ಟೆಸ್ಟ್ ಸ್ಟ್ರಿಪ್‌ಗಳು | 12% | 5% |
| ದೃಷ್ಟಿ ಸರಿಪಡಿಸುವ ಕನ್ನಡಕಗಳು | 12% | 5% |
- ಕೈಗೆಟುಕುವ ದರದಲ್ಲಿ ಆಟೋಮೊಬೈಲ್‌ಗಳು
| ವಸ್ತುಗಳು | ಹಳೆಯ ದರ | ಹೊಸ ದರ |
| ಪೆಟ್ರೋಲ್ ಮತ್ತು ಹೈಬ್ರಿಡ್, ಎಲ್‌ಪಿಜಿ, ಸಿಎನ್‌ಜಿ ಕಾರುಗಳು (1200ಸಿಸಿ & 4 ಮೀಟರ್ ಮೀರದಂತೆ) | 28% | 18% |
| ಡೀಸೆಲ್ ಮತ್ತು ಹೈಬ್ರಿಡ್ ಕಾರುಗಳು (1500ಸಿಸಿ & 4 ಮೀಟರ್ ಮೀರದಂತೆ) | 28% | 18% |
| ತ್ರಿಚಕ್ರ ವಾಹನಗಳು | 28% | 18% |
| ಮೋಟಾರ್ ಸೈಕಲ್‌ಗಳು (350ಸಿಸಿ ಮತ್ತು ಕೆಳಗೆ) | 28% | 18% |
| ಸರಕು ಸಾಗಣೆ ವಾಹನಗಳು | 28% | 18% |
- ಶೈಕ್ಷಣಿಕ ಉತ್ಪನ್ನಗಳು
| ವಸ್ತುಗಳು | ಹಳೆಯ ದರ | ಹೊಸ ದರ |
| ನಕ್ಷೆಗಳು, ಚಾರ್ಟ್‌ಗಳು ಮತ್ತು ಗ್ಲೋಬ್‌ಗಳು | 12% | ಇಲ್ಲ (Nil) |
| ಪೆನ್ಸಿಲ್‌ಗಳು, ಶಾರ್ಪನರ್‌ಗಳು, ಕ್ರಯಾನ್‌ಗಳು ಮತ್ತು ಪೇಸ್ಟಲ್‌ಗಳು | 12% | ಇಲ್ಲ (Nil) |
| ಅಭ್ಯಾಸ ಪುಸ್ತಕಗಳು ಮತ್ತು ನೋಟ್‌ಬುಕ್‌ಗಳು | 12% | ಇಲ್ಲ (Nil) |
| ಎರೇಸರ್ (ಅಳಿಸುವ ರಬ್ಬರ್) | 5% | ಇಲ್ಲ (Nil) |
- ಎಲೆಕ್ಟ್ರಾನಿಕ್ ಉಪಕರಣಗಳು
| ವಸ್ತುಗಳು | ಹಳೆಯ ದರ | ಹೊಸ ದರ |
| ಏರ್ ಕಂಡಿಷನರ್‌ಗಳು (ಎಸಿ) | 28% | 18% |
| ಟೆಲಿವಿಷನ್ (32 ಇಂಚಿಗಿಂತ ಹೆಚ್ಚು) (ಎಲ್‌ಇಡಿ ಮತ್ತು ಎಲ್‌ಸಿಡಿ ಟಿವಿಗಳು ಸೇರಿದಂತೆ) | 28% | 18% |
| ಮಾನಿಟರ್‌ಗಳು ಮತ್ತು ಪ್ರೊಜೆಕ್ಟರ್‌ಗಳು | 28% | 18% |
| ಪಾತ್ರೆ ತೊಳೆಯುವ ಯಂತ್ರಗಳು (ಡಿಶ್ ವಾಷರ್‌ಗಳು) | 28% | 18% |



