ನಟ ಉಪೇಂದ್ರ (Actor Upendra) ಅವರೀಗ ನಿಟ್ಟುಸಿರು ಬಿಟ್ಟಿದ್ದಾರೆ. ಉಪೇಂದ್ರ (Actor Upendra) ವಿರುದ್ಧ ಜಾತಿ ನಿಂದನೆ (Atrocity) ಆರೋಪದಡಿ ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್ಗೆ (FIR) ಹೈಕೋರ್ಟ್ (High Court) ಮಧ್ಯಂತರ ತಡೆ ನೀಡಿದೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚಕಟ್ಟು ಪೊಲೀಸ್ ಠಾಣೆಯ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ (Internal stay order) ಕೊಡಲಾಗಿದೆ. ತನಿಖೆಗೆ ಮಾತ್ರ ಮಧ್ಯಂತರ ತಡೆಯಾಜ್ಞೆಯನ್ನು ಆದರೆಮ ಹಲಸೂರು ಗೇಟ್ ಹಾಗೂ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿಗೆ ತಡೆಯಾಜ್ಞೆಯನ್ನು ಕೊಟ್ಟಿಲ್ಲ. ಅಲ್ಲದೆ ಉಪೇಂದ್ರ ವಿರುದ್ಧ ಇನ್ನೂ ಹಲವು ಕಡೆ ಪ್ರಕರಣಗಳು ದಾಖಲಾಗಿವೆ. ಈ ತೀರ್ಪು ಎಲ್ಲ ಪ್ರಕರಣಗಳಿಗೂ ಅನ್ವಯವಾಗುತ್ತದೋ.. ಇಲ್ಲವೋ.. ಗೊತ್ತಿಲ್ಲ. ಉಳಿದ ಎಫ್ಐಆರ್ಗೆ ಸಂಬಂಧಿಸಿದಂತೆಯೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎಫ್ಐಆರ್ ಅಡಿಯಲ್ಲಿ ತನಿಖೆ ಮಾಡದಂತೆ ಮನವಿ ಸಲ್ಲಿಸಬೇಕಿದೆ. ಇನ್ನು ಒಂದು ಎಫ್ಐಆರ್ಗೆ ಮಾತ್ರ ರಿಲೀಫ್ ಸಿಕ್ಕಿದ್ದು, ನಟ ಉಪೇಂದ್ರ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ.
ಎಫ್ಐಆರ್ ರದ್ದು ಕೋರಿ ನಟ ಉಪೇಂದ್ರ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಹಿರಿಯ ವಕೀಲ ಉದಯ್ ಹೊಳ್ಳ (Uday Holla) ಉಪೇಂದ್ರ ಪರ ವಕಾಲತ್ತು ವಹಿಸಿದ್ದರು. ಹೈಕೋರ್ಟ್ನ ನ್ಯಾ.ಹೇಮಂತ್ ಚಂದನ್ಗೌಡರ್ ಅವರು ವಿಚಾರಣೆ ಕೈಗೆತ್ತಿಕೊಂಡಿದ್ದರು. ಇದಾದ ನಂತರ, ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯವು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಅಡಿ ತನಿಖೆ ಮಾಡದಂತೆ ಮಧ್ಯಂತರ ತಡೆಯಾಜ್ಞೆಯನ್ನು ಹೊರಡಿಸಿದೆ.
ಉಪೇಂದ್ರ ಅವರು ಕೇವಲ ಗಾದೆ ಮಾತನ್ನ ಉಲ್ಲೇಖ ಮಾಡಿದ್ದಾರೆ. ಅದರಲ್ಲಿ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ. ಈ ಬಗ್ಗೆ ಕ್ಷಮೆ ಯಾಚನೆ ಕೂಡ ಮಾಡಿದ್ದಾರೆ. ಇದೀಗ (Atrocity FIR) ಎಫ್ಐಆರ್ ದಾಖಲಿಸಿ ತನಿಖೆ ಮಾಡುತ್ತಿರುವುದು ಸರಿಯಲ್ಲ.. ಹೀಗಾಗಿ ಪ್ರಕರಣದ ತನಿಖೆಗೆ ತಡೆ ನೀಡುವಂತೆ ವಕೀಲ ಉದಯ್ ಹೊಳ್ಳ ಮನವಿ ಮಾಡಿದ್ದರು. ಉಪೇಂದ್ರ ಮನವಿಯನ್ನು ಪುರಸ್ಕರಿಸಿದ ನ್ಯಾ.ಹೇಮಂತ್ ಚಂದನ್ ಗೌಡರ್ ಅವರ ಪೀಠವು ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ. ಈ ಮೂಲಕ ಉಪೇಂದ್ರನಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ನಿರ್ದಿಷ್ಟ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರೆಂದು ಉಲ್ಲೇಖಿಸಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಂದ ದೂರು ಸ್ವೀಕರಿಸಿದ ಪೊಲೀಸರು ಉಪೇಂದ್ರನ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಉಪೇಂದ್ರನ ಮನೆಗೆ ಹೋದರೂ ಅವರು ಮನೆಯಲ್ಲಿ ಇರಲಿಲ್ಲ. ಜೊತೆಗೆ, ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದೀಗ ರಿಲೀಫ್ ಸಿಕ್ಕಂತಾಗಿದ್ದು, ಸದ್ಯಕ್ಕೆ ಬಂಧನ ಭೀತಿ ಇಲ್ಲ.
ತಡೆಯಾಜ್ಞೆ ಸಿಕ್ಕ ಮೇಲೆ ಉಪೇಂದ್ರ `ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ. ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ. ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹೃದಯಗಳು ಹಿಡಿದ ಪ್ರೀತಿಯ ಕೊಡೆ. ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ… ನನಗೆ ಕೊಡೆ. ಧನ್ಯವಾದಗಳು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.



