ಕೃಷ್ಣ-ರಾಧೆಯರ (Radha Krishna) ಪ್ರೀತಿ ಹೇಗೆ ಜನಪ್ರಿಯ ಪ್ರೇಮಕಾವ್ಯವೋ.. ಹಾಗೆಯೇ ರುಕ್ಮಿಣಿ-ಕೃಷ್ಣ (Krishna Rukmini) ಪ್ರೇಮಕಥೆಯೂ ಅಷ್ಟೇ ಮಧುರಾತಿ ಮಧುರ. ನೋಡದೆಯೇ ಪ್ರೀತಿ ಮಾಡುವ, ಹಾಗೆ ಪ್ರೀತಿ ಮಾಡಿದ ರುಕ್ಮಿಣಿಯನ್ನು ಅಪಹರಿಸಿ ಮದುವೆಯಾಗುವ ಕೃಷ್ಣ(Krishna Rukmini), ತಂಗಿಯ ಈ ಮದುವೆಗೆ ವಿರೋಧ ಮಾಡುವ ಅಣ್ಣ ರುಕ್ಮ.. ನೂರಾರು ಅಲ್ಲ.. ಸಾವಿರಾರು ಲವ್ ಸ್ಟೋರಿ ಸಿನಿಮಾಗಳ ಮೂಲ ಈ ಕಥೆಯೇ. ಇದೆಲ್ಲದರ ಹೊರತಾಗಿ ಕೃಷ್ಣ-ರುಕ್ಮಿಣಿಯನ್ನು (Krishna Rukmini) ಪೂಜೆ ಮಾಡುವ ದೇವಸ್ಥಾನಗಳೂ ಭಾರತದಲ್ಲಿವೆ. ಕೃಷ್ಣ ವಿಷ್ಣುವಿನ ಅವತಾರವಾದರೆ, ರುಕ್ಮಿಣಿ ಸಾಕ್ಷಾತ್ ಲಕ್ಷ್ಮೀದೇವಿಯ (Krishna Rukmini) ಅವತಾರ.
ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಲವ್ ಜಿಹಾದ್`ಗೆ ಹೋಲಿಕೆ ಮಾಡಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ಬುಪೇನ್ ಬೋರಾ.
ವಿವಾದದ ಮೂಲ ಕಥೆ ಏನು?
ಅಸ್ಸಾಂ ಗೋಲಾಘಾಟ್ನಲ್ಲಿ (Assam) ನಡೆದ ತ್ರಿವಳಿ ಕೊಲೆ ಪ್ರಕರಣವೇ ವಿವಾದದ ಮೂಲ. ಪತ್ನಿ ಹಿಂದೂ (Hindu). ಪತಿ ಮುಸ್ಲಿಂ (Muslim). ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ, ಜೈಲಿನಿಂದ ವಾಪಸ್ ಬಂದ ನಂತರ ಪತ್ನಿ ಮತ್ತವರ ಪೋಷಕರನ್ನು ಕೊಂದಿದ್ದ. ಇದು ಲವ್ ಜಿಹಾದ್ ಪ್ರಕರಣದಂತಿದೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ (CM Himanth Biswas Sharma) ಹೇಳಿಕೆ ನೀಡಿದ್ದರು. ಅಲ್ಲದೆ ತನಿಖೆ ಆ ನಿಟ್ಟಿನಲ್ಲೂ ನಡೆಯುತ್ತಿದೆ ಎಂದಿದ್ದರು. ಆದರೆ ಹಿಮಂತ ಹೇಳಿಕೆಯನ್ನು ವಿರೋಧಿಸಿದ ಬುಪೇನ್ ಬೋರಾ (Bhupen bora) ಅನ್ಯಧರ್ಮದ ವಿವಾಹವನ್ನು ಲವ್ ಜಿಹಾದ್ (Love Jihad)ಎಂದು ಮುಖ್ಯಮಂತ್ರಿ ಕಿಡಿಕಾರುವುದು ಸರಿಯಲ್ಲ. ಪುರಾತನ ಗ್ರಂಥದಲ್ಲಿ ಶ್ರೀಕೃಷ್ಣ ರುಕ್ಮಿಣಿ (Krishna Rukmini) ಜೊತೆ ಓಡಿ ಹೋದ ಕತೆಯೂ ಸೇರಿದಂತೆ ಹಲವು ಕತೆಗಳಿವೆ ಎಂದು ಹೇಳಿಕೆ ನೀಡಿದ್ದರು.
ಲವ್ ಜಿಹಾದ್ (Love Jihad) ಜೊತೆ ಹಿಂದೂಗಳ ಆರಾಧ್ಯ ದೇವರು ಶ್ರಿಕೃಷ್ಣ ಹಾಗೂ ರುಕ್ಮಿಣಿ (Krishna Rukmini) ಎಳೆದು ತಂದ ಬುಪೇನ್ ಬೋರಾ ವಿರುದ್ಧ ಅಸ್ಸಾಂನಲ್ಲಿ ಭಾರಿ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿತ್ತು. ಹಿಂದೂಗಳ ಭಾವನೆಗೆ ಧಕ್ಕೆ ತಂದ ಬುಪೇನ್ ಬೋರಾ (Bhupen bora) ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanth Biswas Sharma) & ಬಿಜೆಪಿ ನಾಯಕರು ಆಗ್ರಹಿಸಿದ್ದರು. ಆಕ್ರೋಶದ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಬುಪೇನ್ ಬೋರಾ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ.
ಅಜ್ಜ ಕನಸಿನಲ್ಲಿ ಬಂದು ಹೇಳಿದ್ದಕ್ಕೆ ಕ್ಷಮೆ :
ಕ್ಷಮೆ ಕೇಳಿದ್ದರೂ, ಕ್ಷಮೆ ಕುರಿತಂತೆ ನೀಡಿರುವ ಹೇಳಿಕೆ ವಿಚಿತ್ರ. ಬೊರಾ ಅಜ್ಜ, ಬೋರಾ ಅವರ ಕನಸಲ್ಲಿ ಬಂದಿದ್ದರಂತೆ. ನೀನು ಹೇಳಿದ್ದು ತಪ್ಪು ಎಂದರಂತೆ. ಅದಕ್ಕಾಗಿ ಕ್ಷಮೆ ಕೇಳಿದ್ರಂತೆ. ನನ್ನ ಅಜ್ಜ ಬಂದಿದ್ದರು. ನಾನು ನೀಡಿದ ಹೇಳಿಕೆ ತಪ್ಪು ಎಂದು ನನಗೆ ಮನವರಿಕೆ ಮಾಡಿದ್ದಾರೆ. ಇದು ಜನರ ಭಾವನೆಗೆ ಧಕ್ಕೆ ತಂದಿದೆ ಎಂದು ಅಜ್ಜ ಕನಸಿನಲ್ಲಿ ಹೇಳಿದ್ದಾರೆ. ಹೀಗಾಗಿ ನನ್ನ ಹೇಳಿಕೆಗೆ ಕ್ಷಮೆ ಯಾಚಿಸುತ್ತೇನೆ. ನಾನು ಅಸ್ಸಾಂ ಮುಖ್ಯಮಂತ್ರಿಗೆ ಬೆದರಿಕೆ ಕ್ಷಮೆ ಯಾಚಿಸುತ್ತಿಲ್ಲ ಎಂದಿದ್ದಾರೆ.



