ಯುವರಾಜ್ ಕುಮಾರ್. ಮೊದಲ ಸಿನಿಮಾ ಆಯ್ತು, ಮುಂದೇನು ಎನ್ನುತ್ತಿರುವಾಗಲೇ ಎರಡನೇ ಸಿನಿಮಾ ಘೋಷಣೆಯಾಗಿದೆ. ಅಶ್ವಿನಿ ಪುನೀತ್ ಒಬ್ಬರೇ ಅಲ್ಲ, ಒಟ್ಟು ಐವರು ಯುವ೨ಗೆ ಹಣ ಹೂಡುತ್ತಿದ್ದಾರೆ. ಯುವ ಎರಡನೇ ಸಿನಿಮಾಗೆ ರೋಹಿತ್ ಪದಕಿ ಡೈರೆಕ್ಟರ್ ಆದರೆ, ಒಟ್ಟು ಐವರು ಪ್ರೊಡ್ಯೂಸರ್ಸ್ ಇದ್ದಾರೆ. ಯುವ ರಾಜ್ ಕುಮಾರ್ ಅವರ 2ನೇ ಸಿನಿಮಾ ಘೋಷಣೆಯಾಗಿದೆ. ಟೈಟಲ್ ಇಟ್ಟಿಲ್ಲ.
ಕೆಲವೇ ದಿನಗಳ ಹಿಂದೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಯುವ ಅಭಿನಯದ ಚಿತ್ರಕ್ಕೆ ಕಥೆ ರೆಡಿಯಾಗುತ್ತಿದೆ ಎಂದು ಹೇಳಿ ಸಂಚಲನ ಸೃಷ್ಟಿಸಿದ್ದರು. ಇದೀಗ ಯುವ 02 ರೋಹಿತ್ ಪದಕಿ ನಿರ್ದೇಶಕರಾಗಿದ್ದಾರೆ. ರೋಹಿತ್ ಪದಕಿ ಅವರಿಗೆ ಹೆಸರು ತಂದುಕೊಟ್ಟಿದ್ದು ರತ್ನನ್ ಪರ್‌ಪಂಚ ಸಿನಿಮಾ. ಡಾಲಿ ಅಭಿನಯದ ಚಿತ್ರವದು. ಅದಕ್ಕೂ ಮೊದಲು ಅಷ್ಟ್ರಲ್ಲೇ ಜಸ್ಟ್ ಮಿಸ್ಸೋ ಎಂಬ ಚಿತ್ರವನ್ನು ಡೈರೆಕ್ಟ್ ಮಾಡಿದ್ದರು. ಇದೀಗ ರೋಹಿತ್ ಪದಕಿ ಡಾಲಿ ಧನಂಜಯ, ಶಿವರಾಜ್ ಕುಮಾರ್, ದಿಗಂತ್, ಐಶ್ವರ್ಯ ರಾಜೇಶ್, ಭಾವನಾ ಮೆನನ್ (ಜಾಕಿ ಭಾವನಾ), ಚೈತ್ರಾ ಆಚಾರ್ ಯೋಗರಾಜ್ ಭಟ್, ರಂಗಾಯಣ ರಘು, ಉಮಾಶ್ರೀ ಮೊದಲಾದ ದಿಗ್ಗಜರೇ ನಟಿಸುತ್ತಿದ್ದಾರೆ. ಇದೀಗ ಯುವ 2 ಸಿನಿಮಾ ಕಥೆ ಮಾಡಿಕೊಂಡು ನಿರ್ದೇಶನಕ್ಕೆ ರೆಡಿಯಾಗಿದ್ದಾರೆ.
“ಮನುಷ್ಯತ್ವ ನಮ್ಮೊಳಗಿರೋ ಮೃಗದ ಮುಖವಾಡ. ಆ ಮುಖವಾಡ ಆಚೆ ಬರಲೇಬೇಕು ಅನ್ನೋ ಕಾನ್ಸೆಪ್ಟಿನಲ್ಲಿ ಪೋಸ್ಟರ್ ರೂಪಿಸಲಾಗಿದೆ. ಯುವ2 ಪೋಸ್ಟರಿನಲ್ಲಿ ರಕ್ತ ಮೆತ್ತಿದ ಕೈಯ್ಯೊಂದು ಲಾಂಗ್ ಹಿಡಿದುಕೊಂಡಿರುವ ಚಿತ್ರ ಇದೆ. ಇದೊಂದು ರೌಡಿಸಂ ಕತೆಯುಳ್ಳ ಸಿನಿಮಾ ಆಗಿರಲಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿರೋ ಅಂಶ. ಮೊದಲ ಸಿನಿಮಾದಲ್ಲಿ ಕಾಲೇಜು ಯುವಕ, ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ನಟಿಸಿದ್ದ ಯುವ ರಾಜ್ಕುಮಾರ್ ಎರಡನೇ ಸಿನಿಮಾದಲ್ಲಿ ಲಾಂಗ್ ಹಿಡಿದಿದ್ದಾರೆ. ದೊಡ್ಡಪ್ಪ ಶಿವರಾಜ್ ಕುಮಾರ್ ಹಾದಿಯಲ್ಲಿ ಸಾಗುವ ಸೂಚನೆಗಳಿವೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ, ನವೆಂಬರ್ 1 ರಂದು ಸಿನಿಮಾದ ಹೆಸರು ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಸಿನಿಮಾದ ನಾಯಕಿಯ ಘೋಷಣೆ ಸಹ ಇನ್ನೂ ಆಗಿಲ್ಲ.
ಸಿನಿಮಾಕ್ಕೆ ಒಟ್ಟು ಮೂರು ಬ್ಯಾನರುಗಳಿಂದ ಐವರು ನಿರ್ಮಾಪಕರಿದ್ದಾರೆ. ಅವರಲ್ಲಿ ಒಬ್ಬರು ಪಿಆರ್‌ಕೆ ಪ್ರೊಡಕ್ಷನ್ಸ್‌ನ ಅಶ್ವಿನಿ ಪುನೀತ್ ರಾಜ್ ಕುಮಾರ್. ಮತ್ತಿಬ್ಬರು ಕೆಆರ್ಜಿ ಪ್ರೊಡಕ್ಷನ್ಸ್ನ ಕಾರ್ತಿಕ್ ಗೌಡ ಹಾಗೂ ಯೋಗಿರಾಜ್ ಹಾಗೂ ಜಯಣ್ಣ ಕಂಬೈನ್ಸ್ನ ಜಯಣ್ಣ, ಭೋಗೇಂದ್ರ. ಹೀಗೆ ಒಟ್ಟು ಐವರು ನಿರ್ಮಾಪಕರಾಗಿದ್ಧಾರೆ.
ಯುವ ಮೊದಲ ಸಿನಿಮಾ ಯುವ ಚಿತ್ರವನ್ನು ಹೊಂಬಾಳೆ ನಿರ್ಮಾಣ ಮಾಡಿತ್ತು, ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿ, ಸಪ್ತಮಿ ಗೌಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಸಿನಿಮಾಕ್ಕೆ ಒಳ್ಳೆಯ ಓಪನಿಂಗ್ ದೊರಕಿತಾದರೂ ಸಿನಿಮಾ ದೊಡ್ಡ ಯಶಸ್ಸು ಗಳಿಸಲು ವಿಫಲವಾಯ್ತು. ಇದೀಗ ಯುವ ಎರಡನೇ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಎರಡನೇ ಸಿನಿಮಾಕ್ಕೆ ಮೂರು ದೊಡ್ಡ ನಿರ್ಮಾಣ ಸಂಸ್ಥೆಗಳು ಒಟ್ಟಾಗಿರುವುದು ವಿಶೇಷ.
ಸದ್ಯಕ್ಕೆ ಈ ಚಿತ್ರಕ್ಕೆ ಯುವ-2 ಅನ್ನುವ ಹೆಸರು ಇಟ್ಟಿದ್ದಾರೆ. ಆದರೆ, ಇದು ಯುವ ಪಾರ್ಟ್-2 ಅಲ್ವೇ ಅಲ್ಲ. ಯುವ-2 ಅಂದ್ರೆ, ಇದು ಯುವರಾಜ್ ಕುಮಾರನ ಎರಡನೇ ಚಿತ್ರ ಅನ್ನೋ ಅರ್ಥ ಕೂಡ ಬರುತ್ತದೆ. ನ್ನೂ ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ? ಯುವನಿಗೆ ನಾಯಕಿ ಯಾರು? ಅನ್ನೋದು ಗೊತ್ತಾಗಬೇಕಿದೆ. ಪಿಆರ್‌ಕೆ, ಕೆಆರ್ಜಿ ಸ್ಟುಡಿಯೋ ಜೊತೆ ಸಾಕಷ್ಟು ಸಿನಿಮಾಗಳನ್ನು ಪ್ರೊಡ್ಯೂಸ್ ಮಾಡಿರುವ ಜಯಣ್ಣ ಈ ತಂಡದಲ್ಲಿದ್ದಾರೆ. ಹಾಗಾಗಿ ಕಥೆ, ಚಿತ್ರಕಥೆಗೆ ಹೆಚ್ಚು ಒತ್ತು ಕೊಡಲಿದ್ದಾರೆ? ಹಾಡುಗಳು ಮತ್ತು ಸಿನಿಮಾ ಕ್ವಾಲಿಟಿಯಲ್ಲಿ ಯಾವುದೇ ಕಾಂಪ್ರಮೈಸ್ ಆಗದೇ ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡ್ತಾರೆ ಎಂಬುದು ಸಿನಿಮಂದಿಯ ನಿರೀಕ್ಷೆ.



