Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ರಮ್ಯಾ ಹೆಸರು ಹೇಳಿದ್ದೇ ತಡ.. ಚನ್ನಪಟ್ಟಣದ ಕಾಂಗ್ರೆಸ್ ಭಿನ್ನಮತ ಡೌನ್ ಡೌನ್

SpeciallU by SpeciallU
February 15, 2023
in News, Politics
Reading Time: 1 min read
0 0
0
ರಮ್ಯಾ ಹೆಸರು ಹೇಳಿದ್ದೇ ತಡ.. ಚನ್ನಪಟ್ಟಣದ ಕಾಂಗ್ರೆಸ್ ಭಿನ್ನಮತ ಡೌನ್ ಡೌನ್

ಚನ್ನಪಟ್ಟಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಬರ್ತಾರಂತೆ ಅನ್ನೋ ಸುದ್ದಿ ಹೊರಬಿದ್ದಿದ್ದೇ ತಡ. ಒಂದು ಸಂಚಲನ ಸೃಷ್ಟಿಯಾಯ್ತು. ಅದರ ಪರಿಣಾಮ ಚನ್ನಪಟ್ಟಣದಲ್ಲಿ ಜೋರಾಗಿಯೇ ಆಗಿದೆ. ರಮ್ಯಾ ಬಗ್ಗೆ ಕಾಂಗ್ರೆಸ್ಸಿಗರಲ್ಲಿ ಒಂದು ರೀತಿಯ ವಿಚಿತ್ರ ಪ್ರೀತಿ ಮತ್ತು ಭಯ ಎರಡೂ ಇದೆ. ಅದಕ್ಕೆ ರಮ್ಯಾ ಇಮೇಜ್ ಕೂಡಾ ಕಾರಣ ಎನ್ನುವುದು ಹೌದು. ಏಕೆಂದರೆ ರಮ್ಯಾ ರಾಹುಲ್ ಗಾಂಧಿಗೆ ಆತ್ಮೀಯರಾಗಿದ್ದವರು. ಭಾರತ್ ಜೋಡೋ ಯಾತ್ರೆಯಲ್ಲಿ ಮಾತ್ರವೇ ಹೊರಬಂದು ಕಾಂಗ್ರೆಸ್ ಜೊತೆ ಹೆಜ್ಜೆ ಹಾಕಿದವರು. ಡಿಕೆ ಶಿವಕುಮಾರ್ ಅವರಿಗೂ ಆತ್ಮೀಯರು. ಈಗ ಬಿಜೆಪಿಯಲ್ಲಿರುವ ಎಸ್.ಎಂ.ಕೃಷ್ಣ ಅವರಿಗೂ ಆತ್ಮೀಯರು. ಕೃಷ್ಣ ಬಿಜೆಪಿಯಲ್ಲಿದ್ದರೂ, ಇವತ್ತಿಗೂ ಕಾಂಗ್ರೆಸ್ಸಿನಲ್ಲಿ ಕೃಷ್ಣ ಅವರಿಗೆ ಅಭಿಮಾನಿಗಳು ಹಾಗೂ ಬೆಂಬಲಿಗರಿದ್ದಾರೆ. ಇದೆಲ್ಲದರ ನಡುವೆ ಚನ್ನಪಟ್ಟಣ ಸ್ಥಿತಿಯೂ ಬೇರೆಯದೇ ಆಗಿತ್ತು.

ಹೀಗಿತ್ತು ಚನ್ನಪಟ್ಟಣ ಕಾಂಗ್ರೆಸ್ :

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಚನ್ನಪಟ್ಟಣ, ಡಿಕೆ ಶಿವಕುಮಾರ್ ಅವರ ಕನಕಪುರಕ್ಕೆ ದೂರದ ಕ್ಷೇತ್ರವೇನಲ್ಲ. ಆದರೆ ಚನ್ನಪಟ್ಟಣದಲ್ಲಿ ಹಲವು ಬಣಗಳಿದ್ದವು. ಡಿಕೆಶಿ ಅವರ ಬಾವ ಶರತ್ ಚಂದ್ರ ಅವರು ಟಿಕೆಟ್`ಗೆ ಅರ್ಜಿ ಹಾಕಿದ್ದೇ ಭಿನ್ನಮತ ಭುಗಿಲೆದ್ದಿತ್ತು. ಅತ್ತ ಶರತ್ ಅವರದ್ದು ಒಂದು ಬಣ, ಮತ್ತೊಂದು ಕಡೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಅವರದ್ದೊಂದು ಬಣ, ಪ್ರಸನ್ನ ಗೋಪಿ ಅವರದ್ದೇ ಒಂದು ಬಣ.. ಹೀಗೆ ಹಲವು ಬಣಗಳಿದ್ದವು. ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದವರೆಲ್ಲ ಬಹಿರಂಗವಾಗಿಯಾದರೂ ಅಸಮಾಧಾನ ಅದುಮಿಟ್ಟುಕೊಂಡು ಒಟ್ಟಿಗೇ ಬಂದಿದ್ದು ರಮ್ಯಾ ಎಫೆಕ್ಟ್. ಒಟ್ಟು 8 ಜನ ಅರ್ಜಿ ಹಾಕಿದ್ದರು. ಅವರೆಲ್ಲರೂ ಒಟ್ಟಾಗಿ ಈಗ ಪ್ರಸನ್ನ ಅವರ ಹೆಸರನ್ನೇ ಅಂತಿಮವಾಗಿ ಶಿಫಾರಸು ಮಾಡಿದ್ದಾರೆ. ಒಟ್ಟಿಗೇ ಸುದ್ದಿಗೋಷ್ಠಿ ನಡೆಸಿದ್ದಾರೆ. ಅಸಮಾಧಾನ ಸಂಪೂರ್ಣ ತೊಡೆದು ಹಾಕಲು ಆಗಿಲ್ಲವಾದರೂ ಮೇಲ್ನೋಟಕ್ಕೆ ಶಾಂತವಾಗಿದೆ. ಮುನಿಸಿಕೊಂಡಿರುವ ಕೆಲವರನ್ನು ಮತ್ತೆ ವಾಪಸ್ ತರುವ ಪ್ರಯತ್ನ ನಡೆಯುತ್ತಿದೆ.

ರಮ್ಯಾ ಸ್ಪರ್ಧೆ ಊಹಾಪೋಹ : ರಮ್ಯ ಅವರ ಹೆಸರು ಎಲ್ಲಿಯೂ ಚರ್ಚೆಯಾಗಿಲ್ಲ. ರಮ್ಯ ಟಿಕೆಟ್`ಗಾಗಿ ಅರ್ಜಿ ಕೂಡಾ ಹಾಕಿಲ್ಲ. ರಮ್ಯ ಹೆಸರು ಕೇವಲ ಮಾಧ್ಯಮಗಳ ಸೃಷ್ಟಿ. ಊಹಾಪೋಹ ಎಂದು ಸುದ್ದಿಗೋಷ್ಠಿಯಲ್ಲಿದ್ದ ಕಾಂಗ್ರೆಸ್ ನಾಯಕರು. ಆದರೆ ಅರ್ಜಿ ಹಾಕದೆ, ಯಾರೂ ಕಾಂಟ್ಯಾಕ್ಟ್ ಕೂಡಾ ಮಾಡದೆ, ರಮ್ಯ ಕೂಡಾ ಎಲ್ಲಿಯು ಹೇಳಿಕೊಳ್ಳದೆ ಇರುವಾಗ ಇದ್ದಕ್ಕಿದ್ದಂತೆ ರಮ್ಯ ಹೆಸರು ಕೇಳಿಬಂತಾದರೂ ಏಕೆ? ಸುದ್ದಿಯನ್ನು ಎರಡು ದಿನ ಜೀವಂತವಾಗಿಟ್ಟು ಸುಮ್ಮನಾಗಿದ್ದೇಕೆ ಕಾಂಗ್ರೆಸ್ ನಾಯಕರು. ರಮ್ಯ ಅವರನ್ನು ಅಸ್ತ್ರವಾಗಿ ಬಳಸಿಕೊಂಡರಾ? ರಾಜಕೀಯದಲ್ಲಿ ಗಾಸಿಪ್ ಕೂಡಾ ಸುಖಾಸುಮ್ಮನೆ ಸೃಷ್ಟಿಯಾಗಲ್ಲ. ಅದರಲ್ಲೂ ಎಲೆಕ್ಷನ್ ಹೊತ್ತಿನಲ್ಲಿ.

Tags: #ರಮ್ಯ #ಚನ್ನಪಟ್ಟಣ #ಕಾಂಗ್ರೆಸ್ #ಭಿನ್ನಮತ #ಟಿಕೆಟ್ #ಪ್ರಸನ್ನ #ಸುದ್ದಿಗೋಷ್ಠಿ #Ramya #Channapatna #Congress #Dissent #Ticket #Prasanna
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.