ಅಣ್ಣಾಮಲೈ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ತಮಿಳುನಾಡಿನ ಅಧಿಕಾರಿ. ಐಪಿಎಸ್ ವೃತ್ತಿಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಹೋಗ ಅಣ್ಣಾಮಲೈ, ತಮಿಳುನಾಡಿನಲ್ಲಿ ಬಿಜೆಪಿಯನ್ನು ಕಟ್ಟುತ್ತಿದ್ಧಾರೆ. ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಆಶಾಭಾವ ಚಿಗುರುವಂತೆ ಮಾಡಿದ್ದಾರೆ. ಸಂಘಟನೆಯನ್ನು ಬೆಳೆಸುತ್ತಿದ್ದಾರೆ. ಆದರೆ.. ತಮಿಳುನಾಡಿನ ಸಿಎಂ ಆಗುತ್ತಾರಾ.. ಈ ಪ್ರಶ್ನೆಗೆ ತಮಿಳುನಾಡಿನ ರಾಜಕೀಯ ಬಲ್ಲವರಾರೂ ಹೌದು ಎನ್ನುವುದಿಲ್ಲ. ಏಕೆಂದರೆ ದ್ರಾವಿಡ ಪಕ್ಷಗಳು ಅಷ್ಟರಮಟ್ಟಿಗೆ ಆಳವಾಗಿ ಬೇರು ಬಿಟ್ಟಿರುವ ರಾಜ್ಯ ಅದು. ಭಾಷೆಯ ವಿಷಯದಲ್ಲಿ ಕನ್ನಡದವರಂತೆ ಉದಾರಿಗಳಲ್ಲ. ಜಗಮೊಂಡರು ಎನ್ನಬೇಕು. ತಮಿಳಿಗರನ್ನು ಯಾವ್ಯಾವುದೋ ಕಾರಣಕ್ಕೆ ವಿರೋಧಿಸುವವರೂ ಕೂಡಾ..ತಮಿಳಿಗರಿಂದ ಭಾಷೆಯ ಸ್ವಾಭಿಮಾನದ ವಿಷಯದಲ್ಲಿ ಕಲಿಯಬೇಕಾದ್ದು ಸಾಕಷ್ಟಿದೆ. ಆದರೆ ವಿಷಯ ಅದಲ್ಲ.. ಇದೇ ಅಣ್ಣಾಮಲೈ ತಮಿಳುನಾಡಿನ ಮುಖ್ಯಮಂತ್ರಿಯಾಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ ಗೌರಿಗದ್ದೆಯ ವಿನಯ್ ಗುರೂಜಿ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿ ಗದ್ದೆ ದತ್ತಾಶ್ರಮದ ಅವದೂತ ವಿನಯ್ ಗುರೂಜಿ ತಮಿಳುನಾಡಿನ ರಾಜಕೀಯ ಭವಿಷ್ಯವನ್ನು ಹೇಳಿದ್ದಾರೆ. ಚಿಕ್ಕಮಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಪಾರ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ತಮಿಳುನಾಡಿನಲ್ಲಿ ಒಂದು ದಿನ ಅಣ್ಣಾಮಲೈ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನಾನೂ ನೋಡುತ್ತೇನೆ. ನೀವು ನೋಡುತ್ತೀರಿ. ಇದನ್ನು ಭವಿಷ್ಯ ಎನ್ನುವುದಕ್ಕಿಂತ ಸಮ್ಯ ಜ್ಞಾನ ಎಂದು ಹೇಳೋಣ ಎಂದಿದ್ದಾರೆ.
ಅಣ್ಣಾಮಲೈ ಚಿಕ್ಕಮಗಳೂರು ಎಸ್ಪಿ ಆಗಿ ಬಂದಿದ್ದಾಗಲೇ ಕೊಪ್ಪಾದ ಬೊಮ್ಲಾಪುರಕ್ಕೆ ಬಂದಿದ್ದಾಗಲೇ ಅವರಿಗೊಂದು ಸೇಬು ಹಣ್ಣು ನೀಡಿ ಇನ್ನು ಅವರು ಖಾಕಿ ತೊರೆದು ಖಾದಿ ತೊಡುತ್ತಾರೆ ಎಂದು ಹೇಳಿದ್ದೆ ಎಂದರು.ಜ್ಞಾನ ಚಕ್ಷುವಿನಲ್ಲಿ ಯಾರೇ ಆದರೂ ಧ್ಯಾನ ಮಾಡಿದಾಗ ಅವನಿಗೆ ಕಾಲದ ಒಂದಷ್ಟು ಘಟನೆಗಳನ್ನು ತಿಳಿದುಕೊಳ್ಳಲು ಆಗುತ್ತದೆ. ಅದು ನನಗಷ್ಟೇ ಅಲ್ಲ. ಸಣ್ಣ ಮಗುವಿಗೂ ಅದು ಸಾಧ್ಯತೆ ಇರುತ್ತದೆ ಎಂದ ವಿನಯ್ ಗುರೂಜಿ, ಅಣ್ಣಾಮಲೈ ತಮಿಳುನಾಡಿನ ಸಿಎಂ ಆಗುವುದು ಈಗಲ್ಲ, ಮುಂದೊಮ್ಮೆ ಆಗುವುದು ಖಚಿತ ಎಂದಿದ್ದಾರೆ.
ಅಷ್ಟೇ ಅಲ್ಲ, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪಟ್ಟಾಭಿಷೇಕ ನಡೆಯಲಿದೆ ಎಂದೂ ಹೇಳಿದ್ಧಾರೆ. ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ ನೋಡಿ ಆಗಿದೆ. ಸದ್ಯದಲ್ಲಿ ನರೇಂದ್ರ ಮೋದಿಯವರ ಪಟ್ಟಾಭಿಷೇಕವನ್ನು ನಾವೆಲ್ಲರೂ ನೋಡುತ್ತೇವೆ ಎಂದಿದ್ದಾರೆ ವಿನಯ್ ಗುರೂಜಿ.
ಅಂದಹಾಗೆ ವಿನಯ್ ಗುರೂಜಿ ಹೇಳಿದ ಹಲವು ರಾಜಕೀಯ ಭವಿಷ್ಯಗಳು ನಿಜವಾಗಿವೆ. 2019ರಲ್ಲಿ



