ನಟ ಅರ್ಜುನ್ ಸರ್ಜಾ (Arjun sarja) ಮಾವನಾಗುವ ಹಾದಿಯಲ್ಲಿದ್ಧಾರೆ. ಅರ್ಜುನ್ ಸರ್ಜಾ (Arjun sarja) ಅವರ ಮಗಳು ನಟಿ ಐಶ್ವರ್ಯಾ ಸರ್ಜಾ (Aiswarya sarja), ನಟ ಉಮಾಪತಿ ರಾಮಯ್ಯ (Umapathi ramaiah) ಅವರೊಂದಿಗೆ ಎಂಗೇಜ್ʻಮೆಂಟ್ (actress engagement) ಮಾಡಿಕೊಂಡಿದ್ದಾರೆ.
ತಮ್ಮ ಮಗಳು ‘ಐಶ್ವರ್ಯ ಸರ್ಜಾ’ (aiswarya sarja) ಅವರನ್ನು ನಾಯಕಿಯನ್ನಾಗಿ ಮಾಡಿ ಪ್ರೇಮ ಬರಹ (prema baraha) ಚಿತ್ರವನ್ನು ನಿರ್ಮಿಸಿದ್ದರು. ಸ್ವತಃ ನಿರ್ದೇಶನ ಕೂಡಾ ಮಾಡಿದ್ದರು.
ಕಿರುತೆರೆಯಲ್ಲಿ ಖ್ಯಾತಿ ಪಡೆದಿದ್ದ ಚಂದನ್ ಜೋಡಿಯಾಗಿ ನಟಿಸಿದ್ದರು. ಇದೇ ಸಿನಿಮಾ ತಮಿಳಿಗೂ ಡಬ್ ಆಗಿತ್ತು. ಆ ನಂತರ ಯಾವುದೇ ಸಿನಿಮಾದಲ್ಲಿ ಐಶ್ವರ್ಯ ನಟಿಸಲಿಲ್ಲ. ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಐಶ್ವರ್ಯಾ ಸರ್ಜಾ ಮದುವರಯಾಗುತ್ತಿರುವ ಉಮಾಪತಿ ರಾಮಯ್ಯ ತಮಿಳಿನ ಹಾಸ್ಯನಟ ‘ತಂಬಿ ರಾಮಯ್ಯ’ ಅವರ ಪುತ್ರ. ತಮಿಳು ಇಂಡಸ್ಟ್ರಿಯಲ್ಲಿ ಖ್ಯಾತ ಹಾಸ್ಯ ನಟರಾಗಿರುವ ರಾಮಯ್ಯ ಅವರ ಪುತ್ರ ಉಮಾಪತಿ ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ‘ದೇವದಾಸ್’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಟಿವಿ ಕಾರ್ಯಕ್ರಮವನ್ನೂ ಮಾಡುತ್ತಿದ್ದಾರೆ. ಡಿಸೆಂಬರ್ನಲ್ಲಿ ಮದುವೆ ನೆರವೇರಲಿದೆ.
ಎಂಗೇಜ್ʻಮೆಂಟ್ ಕಾರ್ಯಕ್ರಮ ಮನೆಯ ಸದಸ್ಯರಿಗೆ ಮಾತ್ರವೇ ಸೀಮಿತವಾಗಿ ನಡೆದಿದ್ದು, ಅರ್ಜುನ್ ಸರ್ಜಾ ದಂಪತಿ, ಧ್ರುವ ಸರ್ಜಾ ಕುಟುಂಬ, ಉಮಾಪತಿ ಕುಟುಂಬದವರಷ್ಟೇ ಭಾಗವಹಿಸಿದ್ದರು.



