ಈ ಯುವ ರಾಜ್ ಕುಮಾರ್ ಅವರು ಹೀರೋ ಆಗಿ ನಟಿಸಿದ್ದು ಒಂದೇ ಸಿನಿಮಾ. ಅದು ಯುವ. ಆದರೆ ಇಡೀ ಸಿನಿಮಾದುದ್ದಕ್ಕೂ ಸೀರಿಯಸ್ ಆಗಿಯೇ ಕಾಣಿಸಿಕೊಂಡಿದ್ದ ಯುವ, ಒಂದು ಸೀನ್ʻನಲ್ಲೂ ನಕ್ಕಿರಲಿಲ್ಲ. ರೊಮ್ಯಾನ್ಸ್ ಸೀನ್‌ಗಳಲ್ಲೂ ಸೀರಿಯಸ್ ಆಗಿಯೇ ಇದ್ದ ಯುವ, ಈ ಬಾರಿ ನಕ್ಕಿದ್ದಾರೆ. ಅದು ಎಕ್ಕ ಸಿನಿಮಾದಲ್ಲಿ.
ಯುವ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ ಎಕ್ಕ ಸಿನಿಮಾದ ಹೊಸ ಹಾಡು ಬ್ಯಾಂಗಲ್ ಬಂಗಾರಿ.. ರಿಲೀಸ್ ಆಗಿದೆ. ಬಂಗಾರಿ ಹಾಡಿಗೆ ನಾಯಕ ಯುವ ರಾಜ್ ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ಹಾಡಿ ಕುಣಿದಿದ್ದಾರೆ. ತನ್ನ ಇಷ್ಟದ ಹುಡ್ಗಿಯನ್ನು ಬ್ಯಾಂಗಲ್ ಬಂಗಾರಿ ಅಂತಾ ಕರೆಯುತ್ತಾ ನಾಯಕ ಕುಣಿದು ಕುಪ್ಪಳಿಸುತ್ತಿದ್ದರೆ, ನಾಯಕನಿಗೆ ಸೈಟ್ ಕೊಡುತ್ತಾ ನಾಯಕಿಯೂ ಚಮಕ್ ಕೊಡ್ತಾಳೆ. ಈ ಹಾಡಿನಲ್ಲಿ ತುಂಟನಾಗಿ, ನಗು ನಗುತ್ತಾ ಕಾಣಿಸಿಕೊಳ್ತಾರೆ.
ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಇದ್ದರೆ, ಮುರಳಿ ಮಾಸ್ಟರ್ ಕೊರಿಯೋಗ್ರಫಿ ಇದೆ.
ದೇವರೇ ಏನಲೇ ಇವಳು ಚಂದಿರನ ಕೊನೆ ಮಗಳೆ? ದೇವರೇ ಹೇಳಲೇ ಇವಳು ಇಂದಿರನ ಊರಿನವಳೆ? ಎಂಬ ಸಾಹಿತ್ಯ ಹುಡುಗರಿಗೆ ಸಖತ್ ಇಷ್ಟವಾಗುವಂತಿದೆ. ಇನ್ನು ಸಂಜನಾ ಆನಂದ್ ಕೂಡಾ ಮುದ್ದು ಮುದ್ದಾಗಿ ಕಣ್ಣಲ್ಲೇ ಕೊಲ್ಲುವಂತೆ ಕಾಣಿಸಿಕೊಳ್ತಾರೆ. ಸಂಗೀತ ಚರಣ್ ರಾಜ್ ಅವರದ್ದು.
ʼಎಕ್ಕ’ ಸಿನಿಮಾವನ್ನು ಪಿಆರ್‌ಕೆ, ಜಯಣ್ಣ ಹಾಗೂ ಕೆಆರ್‌ಜಿ ಸ್ಟುಡಿಯೋ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರದಲ್ಲಿ ಯುವ ರಾಜ್‌ಕುಮಾರ್ ಸಖತ್ ರಫ್ ಆ್ಯಂಡ್ ಟಫ್ ರೋಲ್ ಮಾಡಿದ್ದಾರೆ. ರಕ್ತಸಿಕ್ತ ಜಗತ್ತಿನ ಹೊಸ ಅಧ್ಯಾಯ ಅಂತಲೂ ಫೀಲ್ ಆಗುತ್ತದೆ. ಇದರ ನಡುವೆಯೇ ಒಂದು ಚೆಂದದ ಲವ್ ಟ್ರ್ಯಾಕ್ ಸಾಂಗ್ ಬಂದಿದೆ. ನಾಯಕ ಯುವರಾಜ್ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಭಾರೀ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾವೀಗ ಜುಲೈ 18ಕ್ಕೆ ರಿಲೀಸ್ ಆಗಲಿದೆ. ಹಾಡಿಗೆ ಅಷ್ಟೇ ಕಿಕ್ ಕೊಟ್ಟಿರೋದು ಸಿಂಗರ್ ಆಂಟನಿ ದಾಸನ್. ನಿರ್ದೇಶಕ ರೋಹಿತ್ ಪದಕಿ, ಎಕ್ಕ ಚಿತ್ರದಲ್ಲಿ ಈ ಬಾರಿ ಹುಲಿಬೇಟೆಯಾಡುವ ನಿರೀಕ್ಷೆಯನ್ನಂತೂ ಮೂಡಿಸಿದ್ದಾರೆ.
Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ
Bangle ಬಂಗಾರಿ Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ
ಹೊಡ್ದ್ರೆ ನಗಾರಿ Feeling ಅದ್ಧೂರಿ
feeling ಅದ್ದೂರಿ Golden ಅಂಬಾರಿ ತರ್ತೀನ್ ಬಂಗಾರಿ…
Bangle ಬಂಗಾರಿ, Bangle ಬಂಗಾರಿ
ಈ ಬ್ಯಾಂಗಲ್ ಬಂಗಾರಿ ಹಾಡಿನ ಸಾಹಿತ್ಯದಲ್ಲಿ ಇಂಗ್ಲಿಷ್ ಪದಗಳ ಬಳಕೆ ಇದೆ. ಕನ್ನಡ ಸಾಲುಗಳೂ ಇಂಟ್ರಸ್ಟಿಂಗ್ ಆಗಿದೆ. ನಾಗಾರ್ಜುನ್ ಶರ್ಮಾ ಇದನ್ನ ಚೆನ್ನಾಗಿಯೇ ಬರೆದಿದ್ದಾರೆ. ಇಂಗ್ಲಿಷ್ ಮಿಶ್ರಿತ ಈ ಕನ್ನಡ ಹಾಡನ್ನ ಆಂಥೋನಿ ದಾಸನ್ ಅದ್ಭುತವಾಗಿಯೇ ಹಾಡಿದ್ದಾರೆ. ಅಷ್ಟೆ ಎಂಜಾಯ್ ಕೂಡ ಮಾಡಿದ್ದಾರೆ. ಹಾಡಿನಲ್ಲಿ ಹಸಿರು ಬಳೆ ತೊಡುವ ಸಂಜನಾ ಆನಂದ್ ಪಾತ್ರವನ್ನ ಯುವರಾಜ್ ಕುಮಾರ್ ಇಲ್ಲಿ ಬ್ಯಾಂಗಲ್ ಬಂಗಾರಿ ಅಂತಲೇ ಹೇಳ್ತಾರೆ.
ದೇವರೇ ಏನಲೇ? ಇವಳು ದಾರಿ ತಪ್ಪಿ ಬಂದಿರುವಳೆ? ದೇವರೇ ಹೇಳಲೇ ಇವಳು ನಂಗೆ ಅಂತ fix-u ಆಗಲೇ?



