ಹೊಳಲ್ಕೆರೆಯಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ 30ನೇ ಸ್ಮರಣಾ ಕಾರ್ಯಕ್ರಮ ಇಬ್ಬರು ಸ್ವಾಮೀಜಿಗಳ ನಡುವೆ ಧರ್ಮ ಯುದ್ಧಕ್ಕೆ ವೇದಿಕೆಯಾಗಿದೆ. ಲಿಂಗಾಯತರು ಹಿಂದೂ ಧರ್ಮ ಭಾಗ ಎನ್ನುವ ಕುರಿತು ಒಂದೇ ವೇದಿಯಲ್ಲಿ ಇಬ್ಬರು ಲಿಂಗಾಯತ ಶ್ರೀ ವಿಭಿನ್ನ ಹೇಳಿಕೆ ನೀಡಿದ್ದಾರೆ. ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರೆ, ಅದೇ ವೇದಿಕೆಯಲ್ಲಿದ್ದ ಹರಿಹರದ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ, ಲಿಂಗಾಯತರೂ ಕೂಡಾ ಹಿಂದೂ ಧರ್ಮದ ಭಾಗ ಎಂದಿದ್ದಾರೆ.
ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳ ಪ್ರಕಾರ..
ಹಿಂದೂ ಧರ್ಮ ಅಂದ್ರೆ ಅನೈತಿಕ, ಅನಾಚಾರ. ಹಿಂದೂ ಧರ್ಮವೇ ಅಲ್ಲ. ಲಿಂಗಾಯತರು ಹಿಂದೂಗಳೇ ಅಲ್ಲ, ನಮ್ಮದು ಪ್ರತ್ಯೇಕ ಧರ್ಮ. ಹಿಂದೂ ಧರ್ಮ ಎಂಬುದು ಎಲ್ಲ ಅನಿಷ್ಟ, ಅನಾಚಾರಗಳಿಂದ ಕೂಡಿದೆ. ಲಿಂಗಾಯತರು ಆ ಧರ್ಮದ ಭಾಗವಲ್ಲ. ಲಿಂಗಾಯತವೇ ಬೇರೆ ಧರ್ಮ. ಹಿಂದೂ ಒಂದರ್ಥದಲ್ಲಿ ಧರ್ಮವೇ ಅಲ್ಲ. ಸಿಂಧೂ ನದಿಯ ಬಯಲಿನಲ್ಲಿ ಇರುವವರು ಹಿಂದೂಗಳು ಎಂದಿದ್ದಾರೆ. ನಾವು ಹಿಂದೂ ಧರ್ಮದವರಲ್ಲ. ನಾವು ಸ್ವತಂತ್ರ ಲಿಂಗಾಯತ ಧರ್ಮದವರು. ಆದರೆ ವೈದಿಕ ಪರಂಪರೆಯ ಬೇರುಗಳು ನಮ್ಮ ತಲೆಯಲ್ಲಿ ಬಲವಾಗಿ ತುಂಬಿಕೊಂಡಿವೆ. ಲಿಂಗಾಯತ ಒಂದು ಸ್ವತಂತ್ರ ಧರ್ಮ, ಹಿಂದೂ ಧರ್ಮದ ಭಾಗ ಅಲ್ಲ ಎಂಬುದನ್ನು ಎಲ್ಲರೂ ಮಾನ್ಯ ಮಾಡಬೇಕು.ಬಸವಣ್ಣ ಲಿಂಗಾಯತ ಧರ್ಮದ ಪ್ರತಿಪಾದಕರು. ಲಿಂಗಾಯತ ಧರ್ಮ, ಹಿಂದೂ ಧರ್ಮದ ಒಳಗಡೆ ಇರುವಂಥದ್ದಲ್ಲ. ಹಿಂದೂ ಧರ್ಮಕ್ಕೆ ಭಿನ್ನವಾಗಿ ಹುಟ್ಟಿಕೊಂಡಿದ್ದೇ ಲಿಂಗಾಯತ ಧರ್ಮ.
ಬಸವಣ್ಣನವರ ಹಿಂದಿನ ಧರ್ಮ ದಯಾಧೀನ ಧರ್ಮ. ಬಸವಣ್ಣನವರು ದಯವೇ ಧರ್ಮದ ಮೂಲ ಎಂದರು. ವೇದ ಪುರಾಣಗಳನ್ನು ಶರಣರು ತಿರಸ್ಕಾರ ಮಾಡಿದ್ದರು. ಅಹಿಂಸಾ ಜೀವನ ನಡೆಸಬೇಕೆಂದು ಬಸವಣ್ಣ ಹೇಳಿದರು. ಬಹು ದೇವತಾ ಆರಾಧನೆಯನ್ನು ವಿರೋಧ ಮಾಡಿದ್ದರು. ಏಕ ದೇವ ನಿಷ್ಠೆಯನ್ನು ಎತ್ತಿ ಹಿಡಿದಿದ್ದರು. ಹಿಂದೂ ಧರ್ಮಕ್ಕಿಂತ ವಿಭಿನ್ನ ಲಿಂಗಾಯತ ಧರ್ಮ. ಲಿಂಗಾಯತ ಸ್ವತಂತ್ರ ಧರ್ಮ, ಹಿಂದೂ ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲ.
ವಚನಾನಂದ ಶ್ರೀಗಳ ಪ್ರಕಾರ..
ಹಿಂದೂ ಎಂಬುದು ಸತ್ಯ ಸನಾತನ ಆಗಿರುವಂಥದ್ದು. ಹಿಂದೂ ಎಂಬ ಮಹಾಸಾಗರದ ನದಿಗಳು ನಾವು. ಜೈನ, ಬೌದ್ಧ, ಲಿಂಗಾಯತ ಎಲ್ಲವೂ ಹಿಂದೂ ಧರ್ಮದ ಭಾಗ. ಹಿಂದೂ ಅಲ್ಲ ಎಂಬುವರು ಹಿಂದೂ ಲಿಂಗಾಯತ ಎಂಬ ಮೀಸಲಾತಿ ಪಡೆಯುವುದು. ಎಲ್ಲರಿಗೂ ಅಧ್ಯಯನದ ಅವಶ್ಯಕತೆ ಇದೆ. ನಾವೆಲ್ಲಾ ಹಿಂದೂಗಳು, ಬೌದ್ಧ, ಸಿಕ್ಕ ಧರ್ಮೀಯರಂತೆ ಲಿಂಗಾಯತರು. ಕೇವಲ ವೈದಿಕರು ಹಿಂದೂಗಳಲ್ಲ, ಅವೈದಿಕರೂ ಇದ್ದಾರೆ. ಹಿಂದೂ ಎಂಬುದೊಂದು ಮಹಾಸಾಗರ. ದಾರ್ಶನಿಕರು ಆಯಾಕಾಲಕ್ಕೆ ವಿವಿಧ ವಿಚಾರ ಹೇಳಿದ್ದಾರೆ. ಸಾಂವಿಧಾನಿಕವಾಗಿ ಮೀಸಲಾತಿ ಪಡೆದುಕೊಳ್ಳುತ್ತಿದ್ದೇವೆ. ಹಿಂದೂ ಎಂದು ಹೇಳಿಕೊಂಡೇ ನಾವು ಮೀಸಲಾತಿ ಪಡೆಯುತ್ತಿದ್ದೇವೆ. ಹಿಂದೂಗಳಲ್ಲ ಎಂದರೆ ಮೀಸಲಾತಿ ಏಕೆ ಪಡೆಯುತ್ತಿದ್ದೀರಿ.
ಹಿಂದೂ ಲಿಂಗಾಯತ ಎಂದೇ ಹಿರಿಕರು ಬರೆಸಿದ್ದಾರೆ. ಅಮ್ಮ ಅಜ್ಜ, ಹಿರಿಯರು ಸರ್ಟಿಫಿಕೇಟ್ನಲ್ಲಿ ಏನು ಬರೆಸಿದ್ದಾರೆ. ಅವರು ಯಾರೂ ಜ್ಞಾನಿಗಳಲ್ಲವೇ. ಸಮಾಜ ಕೂಡಿಸಿ, ಒಡೆಯುವ ಕೆಲಸವನ್ನು ಮಾಡಿ. ತಾತ್ವಿಕವಾಗಿ ವೀರಶೈವ, ಲಿಂಗಾಯತ ಭಿನ್ನ ಆಚರಣೆ ಇರಬಹುದು. ನಾವು ಸಹ ಬಸವಣ್ಣ ಅವರನ್ನು ಗುರು ಎಂದು ಒಪ್ಪಿಕೊಂಡಿದ್ದೇವೆ. ವಚನಗಳನ್ನು ನಮ್ಮ ಗ್ರಂಥ ಎಂದು ನಾವು ಒಪ್ಪಿಕೊಂಡಿದ್ದೇವೆ. ಸಮಾಜಿಕವಾಗಿ, ರಾಜಕೀಯವಾಗಿ ವೀರಶೈವ ಲಿಂಗಾಯತರು ಒಂದಾಗಿ ಹೋದರೆ ಭವಿಷ್ಯ.
ಹಿಂದೂ ಅಲ್ಲ ಎಂಬುದಕ್ಕೆ ನಾವು ವಿರೋಧಿಸುತ್ತೇವೆ. ನಾವು ಹಿಂದೂಗಳು ಎಂದೇ ಹೇಳುತ್ತೇವೆ. ಹಿಂದೂ ಅಲ್ಲ ಅಂದರೆ ಲಿಂಗಾಯತ ಇಲ್ಲ ಎಂದರ್ಥ. ಹಿಂದು ಇಲ್ಲ ಅಂದರೆ ಲಿಂಗಾಯತ ಇಲ್ಲವೇ ಇಲ್ಲ. ಜೈನರು, ಬೌದ್ಧರು ಹಿಂದೂಗಳನ್ನು ವಿರೋಧಿಸಿ ಧರ್ಮ ಪಡೆದರಾ? ಮಾತೆತ್ತಿದರೆ ಹಿಂದೂಗಳನ್ನು ಬೈಯುತ್ತೀರಿ. ಎಷ್ಟು ಜನ ಶಿಯೋಗದ ಬಗ್ಗೆ ತಿಳಿದುಕೊಂಡಿದ್ದೀರಿ, ಬಸವಣ್ಣನ ಲಿಂಗಾಗ ಸಾಮರಸ್ಯ ಮಾಡುವುದಿಲ್ಲ. ವೇದಿಕೆ ಸಿಕ್ಕರೆ ಭಾಷಣ ಮಾಡುತ್ತೀರಿ. ಸಾವಿರ ಜನ ಹಿಂದೂಗಳಲ್ಲ ಅಂದರೆ ಕೋಟಿ ಕೋಟಿ ಜನ ನಾವು ಹಿಂದೂಗಳು ಅನ್ನುತ್ತೇವೆ.
ಅಂತಿಮ ನಿರ್ಧಾರ ಓದುಗರದ್ದು.



