ಅಪ್ಪು.ಇದು ಶಿವರಾಜ್ ಕುಮಾರ್ ಅವರ ಕನಸು. ಅಪ್ಪು ಮೊದಲ ಚಿತ್ರಕ್ಕೆ ಅಪ್ಪು ಎಂದೇ ಹೆಸಟ್ಟವರು ಶಿವರಾಜ್ ಕುಮಾರ್. ಪುರಿ ಜಗನ್ನಾಥ್ ಅವರನ್ನು ನಿರ್ದೇಶನಕ್ಕೆ ಒಪ್ಪಿಸಿದವರು ಮತ್ತು ಈ ಕಥೆ ಅಪ್ಪುಗೆ ಸೂಟ್ ಆಗುತ್ತೆ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದವರೂ ಶಿವಣ್ಣ. ಅಲ್ಲದೆ ಮೊದಲ ಚಿತ್ರದಲ್ಲೇ ಪವರ್ ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದವರೂ ಕೂಡಾ ಪುನೀತ್.
ಅದನ್ನು ಪುನೀತ್ ಇದ್ದ ವೇದಿಕೆಗಳಲ್ಲಿಯೇ ನಾನು ಪವರ್ʻಗೆ ಬ್ರದರು. ಪವರ್ ಸ್ಟಾರ್ ಎಂದು ಟೈಟಲ್ ಕೊಟ್ಟವನೂ ನಾನೇ ಎಂದು ಹೆಮ್ಮೆಯಿಂದ ಹೇಳಿಕೊಳ್ತಿದ್ದರು ಶಿವಣ್ಣ. ಪುನೀತ್, ತನಗೆ ತಮ್ಮನಂತೆ ಇರಲೇ ಇಲ್ಲ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಹೆಚ್ಚಿದ್ದ ಕಾರಣ ಅವನು ತಮಗೆ ಮಗನಂತೆಯೇ ಆಗಿಬಿಟ್ಟಿದ್ದ ಎನ್ನುತ್ತಿದ್ದ ಶಿವಣ್ಣ, ಅಪ್ಪು ಚಿತ್ರಕ್ಕಾಗಿ ಇನ್ನಿಲ್ಲದ ಆಸಕ್ತಿ ವಹಿಸಿದ್ದರು.
ಈಗ ಅಪ್ಪು ರಿ-ರಿಲೀಸ್ ಎನ್ನುತ್ತಿದ್ದಂತೆಯೇ ಅಪ್ಪು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಭಾವುಕರೂ ಆಗಿದ್ದಾರೆ. ಏಕೆಂದರೆ.. ಅಪ್ಪು ಇಲ್ಲ ಎನ್ನುವ ಸತ್ಯ ಅವರಿಗೂ ಗೊತ್ತಿದೆ. ಮಾರ್ಚ್ 17ಕ್ಕೆ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಹುಟ್ಟುಹಬ್ಬದ ವಿಶೇಷ ಏನೆಂದರೆ ಅದು ಪುನೀತ್ ಅವರ 50ನೇ ಹುಟ್ಟುಹಬ್ಬ. ಹೀಗಾಗಿಯೇ ಪುನೀತ್ ಅವರು ಚಿತ್ರರಂಗಕ್ಕೆ ಯಂಗ್ ಹೀರೋ ಆಗಿ ಎಂಟ್ರಿ ಕೊಟ್ಟ ಅಪ್ಪು ಚಿತ್ರವನ್ನು ರಿ-ರಿಲೀಸ್ ಮಾಡ್ತಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಮಾರ್ಚ್ 14 ರಂದು ರೀ-ರಿಲೀಸ್.
ಅಪ್ಪು, 2002ರಲ್ಲಿ ಪುನೀತ್ ರಾಜ್‌ಕುಮಾರ್ ಹೀರೋ ಆಗಿ ಲಾಂಚ್ ಆದ ಸಿನಿಮಾ.ಪುನೀತ್ ರಾಜ್ ಕುಮಾರ್‌ಗೆ ಕ್ರೇಜಿ ಕ್ವೀನ್ ರಕ್ಷಿತಾ ನಾಯಕಿಯಾಗಿದ್ದರು. ತೆಲುಗಿನ ಪುರಿ ಜಗನ್ನಾಥ್ ನಿರ್ದೇಶಿಸಿದ ಚಿತ್ರ ಇದು. ಈ ಚಿತ್ರದಲ್ಲಿ ಅಪ್ಪು ಡ್ಯಾನ್ಸ್ ಹಾಗೂ ಆಕ್ಷನ್ ಸಿಕ್ಕಾಪಟ್ಟೆ ಹೈಲೈಟ್ ಆಗಿತ್ತು. ಉಪೇಂದ್ರ ಬರೆದಿದ್ದ ‘ತಾಲಿಬಾನ್ ಅಲ್ಲ ಅಲ್ಲ…. ಹಾಡಿನಲ್ಲಿರುವ ‘ಮಿಸ್ ಅಂಡರ್‌ಸ್ಟಾಂಡಿಂಗ್ ಬೇಡ’ ಅನ್ನೋದನ್ನೇ ಬಳಸಿ ‘ಅಪ್ಪು’ ರೀ-ರಿಲೀಸ್ ಬಗ್ಗೆ ಟ್ವೀಟ್ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್.
ಅಪ್ಪು ಚಿತ್ರದ ವಿಶೇಷತೆಗಳೂ ಇನ್ನೂ ಹಲವಾರಿವೆ. ಸುದೀರ್ಘ ಗ್ಯಾಪ್ ನಂತರ ಶ್ರೀನಿವಾಸ ಮೂರ್ತಿ ಅವರು ಡಾ.ರಾಜ್ ಬ್ಯಾನರಿನಲ್ಲಿ ನಟಿಸಿದ್ದ ಚಿತ್ರ ಅಪ್ಪು. ರಾಜ್ ಕುಟುಂಬದವರೇ ಆಗಿದ್ದ ಗೌರಿಶಂಕರ್ ಅವರ ಮಗಳು ರಕ್ಷಿತಾ ಅವರನ್ನು ಈ ಸಿನಿಮಾಗೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದವರು ಪಾರ್ವತಮ್ಮ. ಹಾಗೆ ನೋಡಿದರೆ ಅಪ್ಪು ಚಿತ್ರದ ಮೂಲಕವೇ ರಮ್ಯಾ ನಾಯಕಿಯಾಗಿ ನಟಿಸಬೇಕಿತ್ತು. ಅದು ಅಭಿ ಚಿತ್ರಕ್ಕೆ ಪೋಸ್ಟ್‌ಪೋನ್ ಆಯ್ತು.
ಇನ್ನು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು ಗುರುಕಿರಣ್. ರಿಯಲ್ ಸ್ಟಾರ್ ಉಪೇಂದ್ರ, ಹಂಸಲೇಖ, ಕೆ ಕಲ್ಯಾಣ್ ಹಾಡುಗಳಿಗೆ ಸಾಹಿತ್ಯ ನೀಡಿದರು. ತಾಲಿಬಾನ್ ಅಲ್ಲ ಅಲ್ಲ.. ಚಿತ್ರವನ್ನು ಸ್ವತಃ ಪುನೀತ್ ಹಾಡಿದರೆ, ಪಣವಿಡೂ.. ಹಾಗೂ ಆ ದೇವರ ಹಾಡಿದು ಹಾಡುಗಳನ್ನು ಸ್ವತಃ ಡಾ.ರಾಜ್ ಕುಮಾರ್ ಹಾಡಿದ್ದರು.
ಇನ್ನು ಸಿನಿಮಾ ಬಗ್ಗೆ ನೆಗೆಟಿವ್ ಸುದ್ದಿಗಳೂ ಇದ್ದವು. ಚಿತ್ರ ಅಟ್ಟರ್ ಫ್ಲಾಪ್ ಎಂದು ಕೆಲವರು ರಿಲೀಸಿಗೂ ಮುಂಚೆಯೇ ಬರೆದಿದ್ದರು. ಆದರೆ ಸಿನಿಮಾ ಯಾವ ಪರಿ ಹಿಟ್ ಆಯಿತೆಂದರೆ ಸಿನಿಮಾ 200 ದಿನ ಯಶಸ್ವಿ ಪ್ರದರ್ಶನ ಕಂಡಿತು. ತೆಲುಗು, ಬೆಂಗಾಲಿ, ಬಾಂಗ್ಲಾದೇಶದ ಬೆಂಗಾಲಿ, ತಮಿಳು ಭಾಷೆಗಳಿಗೆ ರೀಮೇಕ್ ಆಯ್ತು. ಎಲ್ಲ ಭಾಷೆಯಲ್ಲೂ ಹಿಟ್.
ಇನ್ನು ಚಿತ್ರದಲ್ಲಿ ಅಪ್ಪು ತಮ್ಮನ್ನು ತಾವು ಇಂಟ್ರಡ್ಯೂಸ್ ಮಾಡಿಕೊಳ್ಳೋದು ಅಪ್ಪುಅವರು.. ಅಂತಾ. ಅದನ್ನು ಅಭಿಮಾನಿಗಳು ಇವತ್ತಿಗೂ ಮರೆತಿಲ್ಲ.



