ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರ ದೌರ್ಜನ್ಯ ಹೆಚ್ಚುತ್ತಿವೆಯೇ.. ಪದೇ ಪದೇ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಬಳ್ಳಾರಿಯಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನ ಪ್ರಾಣವೇ ಹೋಯ್ತು. ಶಿಡ್ಲಘಟ್ಟದಲ್ಲಿ ನಗರಸಭೆ ಕಮಿಷನರ್‌ಗೆ ಅವಾಚ್ಯವಾಗಿ ಬೈದು.. ಸುದ್ದಿಯಾಗಿ.. ಎಸ್ಕೇಪ್ ಆಗಿ.. ಅರೆಸ್ಟ್ ಆಗಿ ಜೈಲು ಸೇರಿ.. ಇದೀಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಶಿವಮೊಗ್ಗದಲ್ಲಿ ತಹಸೀಲ್ದಾರ್‌ಗೆ ಶಾಸಕರ ಮಗನೇ ಅವಾಜ್ ಹಾಕಿದ್ದ. ಹುಬ್ಬಳ್ಳಿಯಲ್ಲಿ, ಮೈಸೂರಿನಲ್ಲಿ, ಚಿಕ್ಕಬಳ್ಳಾಪುರದಲ್ಲಿ, ಕೋಲಾರದಲ್ಲಿ.. ಹಲವು ಪ್ರಕರಣಗಳು ನಡೆಯುತ್ತಲೇ ಇವೆ. ಈಗ ದಾವಣಗೆರೆಯ ಸರದಿ.
ದಾವಣಗೆರೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಯುವಕರ ಮೇಲೆ ದಾಳಿ ಪ್ರಕರಣ ಸಂಬಂಧ ಸಿಲ್ಲಿ ಸಿಲ್ಲಿ ಕಾರಣಕ್ಕೆ ಗುಂಪುಗಳ ನಡುವೆ ಜಗಳವಾಗಿತ್ತು. ಇದು ಕೋಮು ಗಲಭೆಯಂತೂ ಅಲ್ಲ. ಎರಡೂ ಗುಂಪಿನವರು ಮುಸ್ಲಿಮರೇ. ಗಲಾಟೆಯಲ್ಲಿ 6 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರು. ಯುವಕರ ಮೇಲೆ ದಾಳಿ ಮಾಡಿರೋದು ಅಯೂಬ್ ಪೈಲ್ವಾನ್ ಪುತ್ರರು. ಹೀಗಾಗಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೆಜ್ಜೆ ಇಟ್ಟಿದ್ದರು.ಬಡಾವಣೆ ಠಾಣೆ ಇನ್ಸ್ಪೆಕ್ಟರ್ ಗಾಯತ್ರಿ, ಕಾನ್ಸ್ಟೇಬಲ್ಗಳಾದ ಕೆಂಚಪ್ಪ ಮತ್ತು ಹರೀಶ್, ಬಂಧಿಸಲು ಮನೆಗೆ ಹೋಗಿದ್ದಾಗ ಆರೋಪಿ ಹಸನ್, ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾನೆ ಎನ್ನುವುದು ಆರೋಪ.ಗಾಯಗೊಂಡಿರೋ ಪೊಲೀಸ್ ಸಿಬ್ಬಂದಿಗಳಾದ ಕೆಂಚಪ್ಪ ಮತ್ತು ಹರೀಶ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಹುಸೇನ್, ದಾವಣಗೆರೆಯ ಇಮಾಮ್ ನಗರದ ರೌಡಿಶೀಟರ್. ಈತ ಪೈಲ್ವಾನ್ ಆಯೂಬ್ ಮಗ. ಪೊಲೀಸರ ಮೇಲೆ ಹಲ್ಲೆ ಮಾಡಿರುವುದು ಈತನೇ. ದಾವಣಗೆರೆಯ ಇಮಾಮ್ ನಗರದ ರೌಡಿಶೀಟರ್ ವಶಕ್ಕೆ ಪಡೆಯಲು ಬಂದ ಮಹಿಳಾ ಅಧಿಕಾರಿಯ ಜೊತೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಸಿಪಿಐ ಗಾಯತ್ರಿ ಅವರ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು, ಅವರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಅನುಚಿತವಾಗಿ ವರ್ತಿಸಿದ್ದಾನೆ.
ಇಮಾಮ್ ನಗರದವರಾದ ಇಬ್ಬರು ಯಾವುದೋ ಸೋಷಿಯಲ್ ಮೀಡಿಯಾ ಕಮೆಂಟ್ ವಿಷಯಕ್ಕೆ ಜಗಳ ಮಾಡಿಕೊಂಡಿದ್ದಾರೆ. ಅದು ಯಾವ್ಯಾವುದೋ ಹಂತಕ್ಕೆ ತಿರುಗಿ, ಮೆಡಿಕೋ ಲೀಗಲ್ ಕೇಸ್ ಹಾಕುವ ಹಂತಕ್ಕೆ ಹೋಗಿದೆ. ಆಗ ಜಿಲ್ಲಾಸ್ಪತ್ರೆಗೆ ಬಂದ ಎರಡೂ ಕಡೆಯವರ ಮಧ್ಯೆ ಜಗಳ ಶುರುವಾಗಿದೆ. ಹೊಡೆದಾಟ ಆಗಿದೆ. ಪೊಲೀಸರು ಬಂದು ಜಗಳವನ್ನೇನೋ ಬಿಡಿಸಿದ್ದಾರೆ. ಎಲ್ಲ ಮುಗಿದ ಮೇಲೆ ಪ್ರೊಸೀಜರ್ ಫಾಲೋ ಮಾಡಲು ಹೋಗಿದ್ದ ಪೊಲೀಸರೇ ಹೊಡೆತ ತಿಂದು ಬರುವಂತಾಗಿದೆ. ಬಂಧಿಸಲು ಹೋಗಿದ್ದವರು ಲೇಡಿ ಪೊಲೀಸ್. ಮಹಿಳೆ ಎಂದೂ ನೋಡಿಲ್ಲ. ಪೊಲೀಸ್ ಎಂದೂ ಗೌರವ ಕೊಟ್ಟಿಲ್ಲ.
ಈತ ದಾವಣಗೆರೆಯ ಶಾಮನೂರು ಮಲ್ಲಿಕಾರ್ಜುನ್ ಅವರ ಆಪ್ತ ಎನ್ನಲಾಗಿದ್ದು, ಹಳೇ ದಾವಣಗೆರೆಯಲ್ಲಿ ಬಿಗುವಿನ ವಾತಾರಣ ನಿರ್ಮಾಣವಾಗಿದೆ. ದಾವಣಗೆರೆಯಲ್ಲಿ ಇತ್ತೀಚೆಗೆ ಕ್ರೈಂ ರೇಟ್ ಹೆಚ್ಚಾಗಿದ್ದು, ಪೊಲೀಸರೇ ಹೆದರಿ ವಾಪಸ್ ಬರುತ್ತಿರುವುದು ಇದೇ ಮೊದಲೇನಲ್ಲ.



