ಅನಿರುದ್ಧ (Anirudda jhatkar) ಹೊಸ ಸಿನಿಮಾ ಆರಂಭವಾಗಿದೆ. ಅನಿರುದ್ಧ ಜತ್ಕರ್ (Anirudda jhatkar) ಜೊತೆ ಜೊತೆಯಲಿ (Jothe jotheyali) ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸ್ಟಾರ್ ಆಗಿದ್ದರು. ಜೊತೆ ಜೊತೆಯಲಿ (Jothe jotheyali) ಸೀರಿಯಲ್ಲಿನ ಆರ್ಯವರ್ಧನ್ (Aryavardhan) ಪಾತ್ರ, ಅನಿರುದ್ಧ ಅವರಿಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿತ್ತು. ಚಿತ್ರರಂಗಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗದೆ ಇದ್ದ ಅನಿರುದ್ಧ ಅವರನ್ನು, ಕಿರುತೆರೆ ಗೆಲುವಿನೊಂದಿಗೆ ಕೈ ಹಿಡಿದಿತ್ತು. ಆದರೆ ಜೊತೆ ಜೊತೆಯಲಿ ಹಲವು ಕಾಂಟ್ರವರ್ಸಿ ಮಾಡಿಕೊಂಡು ಅನಿರುದ್ಧ ಸೀರಿಯಲ್ಲಿಂದ ಹೊರಬಂದಿದ್ದರು. ಇದೀಗ ಅವರ ಹೊಸ ಸಿನಿಮಾ ಶುರುವಾಗಿದೆ. ಮೈಸೂರಿನ ವಿಷ್ಣುವರ್ಧನ್ ಸ್ಮಾರಕದಲ್ಲಿ (Vishnuvardhan smaraka) ಸ್ಕ್ರಿಪ್ಟ್ ಪೂಜೆ ನೆರವೇರಿದೆ.
ಅನಿರುದ್ಧ (Anirudda jhatkar) ಅವರ ಅತ್ತೆಯೂ ಆಗಿರುವ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ಇದು ಡಾರ್ಕ್ ಕಾಮಿಡಿ ಥ್ರಿಲ್ಲರ್ ಕಥೆಯ ಚಿತ್ರವಾಗಿದ್ದು, ಅನಿರುದ್ಧಗೆ ಇಬ್ಬರು ನಾಯಕಿಯರಿದ್ದಾರೆ.
ನಿಧಿ ಸುಬ್ಬಯ್ಯ (Nidhi Subbaiah) ಮತ್ತು ರಚೆಲ್ ಡೇವಿಡ್ (Rachel David) ಹೀರೋಯಿನ್ಸ್. ರಚೆಲ್ ಎಂದರೆ ಲವ್ ಮಾಕ್ಟೇಲ್ 2 ಖ್ಯಾತಿಯ ನಟಿ. ವಿಜಯ್ ರಾಘವೇಂದ್ರ ನಟಿಸಿದ್ದ ‘ರಾಘು’ ಚಿತ್ರದ ಡೈರೆಕ್ಟರ್ ಎಂ ಆನಂದರಾಜ್, ಈ ಚಿತ್ರಕ್ಕೂ ನಿರ್ದೇಶಕ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಆಗಸ್ಟ್ 10ರಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ತುಮಕೂರು ಹಾಗೂ ಮಂಗಳೂರಿನಲ್ಲಿ ನಡೆಯಲಿದೆ. ರೂಪ ಡಿ ಎನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಅನಂದ್ ರಾಜ್ ಅವರೇ ಕಥೆ ಮತ್ತು ಚಿತ್ರಕಥೆ ವಹಿಸಿಕೊಂಡಿದ್ದಾರೆ. ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣವಿದ್ದು, ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮಾಧುರಿ ಪರಶುರಾಮ್ ನೃತ್ಯ ನಿರ್ದೇಶನ ಇದೆ. ಉಳಿದಂತೆ, ಶರತ್ ಲೋಹಿತಾಶ್ವ, ಕೆ ಎಸ್ ಶ್ರೀಧರ್, ಶಿವಮಣಿ ಮುಂತಾದವರು ನಟಿಸುತ್ತಿದ್ದಾರೆ.
ಕನ್ನಡದಲ್ಲಿ ಹಾರರ್ ಚಿತ್ರಗಳೂ ಇವೆ. ಥ್ರಿಲ್ಲರ್ ಚಿತ್ರಗಳೂ ಇವೆ. ಕಾದರೆ ಹಾರರ್ ಕಾಮಿಡಿ ಥ್ರಿಲ್ಲರ್ ಚಿತ್ರಗಳು ಕಡಿಮೆ. ಅದರಲ್ಲೂ ಡಾರ್ಕ್ ಕಾಮಿಡಿ ಚಿತ್ರಗಳಂತೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹೀಗಾಗಿ ಕಥೆಯ ಆಯ್ಕೆಯಲ್ಲೇ ಅನಿರುದ್ಧ ಗೆದ್ದಿರುವಂತೆ ಕಾಣುತ್ತಿದೆ.



