ಮೈಕ್ರೋಸಾಫ್ಟ್. ಇದೊಂದು ಸಾಫ್ಟ್ʻವೇರ್ ಮೇಲೆ ಇಡೀ ಜಗತ್ತು ಅವಲಂಬಿತವಾಗಿದೆ. ಶುಕ್ರವಾರ ಈ ಮೈಕ್ರೋಸಾಫ್ಟ್ ಇದ್ದಕ್ಕಿದ್ದಂತೆ ಕೆಲಸ ಮಾಡೋದನ್ನು ನಿಲ್ಲಿಸಿತ್ತು. ವಿಮಾನಯಾನಗಳು ಏರುಪೇರಾಗಿದ್ದವು. ಏರ್ ಟಿಕೆಟ್ ಬುಕ್ ಆಗಿರಲಿಲ್ಲ. ಬ್ಯಾಂಕುಗಳು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಷೇರುಪೇಟೆಯಲ್ಲಿ ನಂಬರುಗಳು ಕುಂಟಾಬಿಲ್ಲೆ ಆಡಿದ್ದವು. ಕಂಪ್ಯೂಟರ್ ಜಗತ್ತಿನ ಈ ತಲ್ಲಣ, ವಿಶ್ವದ ಆರ್ಥಿಕತೆಯನ್ನೇ ಒಂದೆರಡು ದಿನಗಳ ಮಟ್ಟಿಗೆ ತಲ್ಲಣಗೊಳಿಸಿತ್ತು. ಅದೆಷ್ಟು ಜನ ಅದೆಷ್ಟು ಕೋಟಿ ಕಳೆದುಕೊಂಡರೋ.. ಏನೋ.. ಇದು ದೊಡ್ಡ ಮಟ್ಟದಲ್ಲಿ ಭಾರತಕ್ಕೆ ತಟ್ಟಲಿಲ್ಲವಾದರೂ.. ಶಾಕ್ ಆಗಿದ್ದಂತೂ ಸತ್ಯ.
ಸರಳವಾಗಿ ಹೇಳಬೇಕೆಂದರೆ ಕಂಪ್ಯೂಟರುಗಳು ಇದ್ದಕ್ಕಿದ್ದಂತೆ ಆಫ್ ಆಗುತ್ತಿದ್ದವು. ಆನ್ ಆಗುತ್ತಿದ್ದವು. ರೀಸ್ಟಾರ್ಟ್ ಆಗುತ್ತಿದ್ದವು. ಈ ಮೊದಲು ಕಂಪ್ಯೂಟರಿನಲ್ಲಿ ಮಾಡಿದ್ದ ವರ್ಕ್ ಹಿಸ್ಟರಿ ಡಿಲೀಟ್ ಆಗುತ್ತಿತ್ತು. ಅಥವಾ ಎಲ್ಲೋ ಒಂದು ಕಡೆ ಶಿಫ್ಟ್ ಆಗುತ್ತಿತ್ತು. ಅದು ಎಲ್ಲಿ ಎಂದು ಹುಡುಕೋಕೆ ಹೋದರೆ.. ಅಷ್ಟು ಹೊತ್ತಿಗೆ ಮತ್ತೊಮ್ಮೆ ರೀಸ್ಟಾರ್ಟ್ ಆಗುತ್ತಿತ್ತು. ಜನ ಏನು ಮಾಡುವುದು ಎಂದು ಅರ್ಥವಾಗದೆ ತಲೆ ಮೇಲೆ ಕೈಹೊತ್ತುಕೊಂಡು ಕುಳಿತರು.
ಮೈಕ್ರೋಸಾಫ್ಟ್ನಲ್ಲಿ ಉಂಟಾಗಿದ್ದ ಸಮಸ್ಯೆಗೆ ಆ್ಯಂಟಿವೈರಸ್ ಅಪ್ಡೇಟ್ ಕಾರಣ ಎನ್ನುವ ಮಾಹಿತಿ ಲಭ್ಯವಾಗಿದೆ. ಕ್ಲೌಡ್ ಸ್ಟ್ರೈಕ್ ಆ್ಯಂಟಿ-ವೈರಸ್ ನವೀಕರಿಸಬೇಕಾಗಿತ್ತು. ಕಂಪನಿ ಸಮಯಕ್ಕೆ ಸರಿಯಾಗಿ ಅಪ್ಡೇಟ್ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಜಗತ್ತು ಈ ಐಟಿ ಬಿಕ್ಕಟ್ಟು ಎದುರಿಸುವಂತಾಯಿತು ಎಂದು ಮೈಕ್ರೋಸಾಫ್ಟ್-ಸಂಯೋಜಿತ ಸೈಬರ್ ಸೆಕ್ಯುರಿಟಿ ಸಂಸ್ಥೆ ತಿಳಿಸಿದೆ. ಮೈಕ್ರೋಸಾಫ್ಟ್ ಸರ್ವರ್ಗಳಲ್ಲಿ ಉದ್ಭವಿಸಿದ ಸಮಸ್ಯೆಯಿಂದಾಗಿ ಜಾಗತಿಕವಾಗಿ ತಾಂತ್ರಿಕ ಬಿಕ್ಕಟ್ಟು ತಲೆದೋರಿದೆ. ಹಾಗಾದರೆ ಈ ಸಮಸ್ಯೆಗೆ ಕಾರಣವೇನು ಎನ್ನುವ ಮಾಹಿತಿ ಇಲ್ಲಿದೆ. ಕ್ಲೌಡ್ ಸ್ಟ್ರೈಕ್ ಆ್ಯಂಟಿ-ವೈರಸ್ ನವೀಕರಿಸಬೇಕಾಗಿತ್ತು. ಕಂಪನಿ ಸಮಯಕ್ಕೆ ಸರಿಯಾಗಿ ಅಪ್ಡೇಟ್ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಜಗತ್ತು ಈ ಐಟಿ ಬಿಕ್ಕಟ್ಟು ಎದುರಿಸುವಂತಾಯಿತು ಎಂದು ಮೈಕ್ರೋಸಾಫ್ಟ್-ಸಂಯೋಜಿತ ಸೈಬರ್ ಸೆಕ್ಯುರಿಟಿ ಸಂಸ್ಥೆ ತಿಳಿಸಿದೆ.
ಈ ಸಮಸ್ಯೆ ಮೊದಲು ಅಮೆರಿಕದ ಫ್ರಾಂಟಿಯರ್ ಏರ್‌ಲೈನ್ಸ್‌ನಲ್ಲಿ ಉಂಟಾಗಿದ್ದು, ಕ್ರಮೇಣವಾಗಿ ಪ್ರಪಂಚದಾದ್ಯಂತ ಹರಡಿತ್ತು. ದೆಹಲಿ, ಮುಂಬೈ ಸೇರಿದಂತೆ ಹಲವು ದೇಶದ ವಿಮಾನ ಸೇವೆಗಳಿಗೂ ತೊಂದರೆಯುಂಟಾಗಿತ್ತು. ಏರ್‌ಲೈನ್‌ಗಳು, ಬ್ಯಾಂಕ್‌ಗಳು, ಮಾಧ್ಯಮಗಳು ಮತ್ತು ಹಣಕಾಸು ಸಂಸ್ಥೆಗಳು ಪ್ರಕ್ಷುಬ್ಧತೆಗೆ ಒಳಗಾಗಿವೆ.
ಲಕ್ಷಾಂತರ ಜನರು ಬ್ಲೂ ಸ್ಕ್ರೀನ್ ಆಫ್ ಡೆತ್ ದೋಷವನ್ನು ಎದುರಿಸಿದ್ದಾರೆ, ಇದು ಹಠಾತ್ ಸಿಸ್ಟಮ್ ಸ್ಥಗಿತಗೊಳಿಸುವಿಕೆ ಅಥವಾ ರಿಸ್ಟಾರ್ಟ್ಗೆ ಕಾರಣವಾಗುತ್ತದೆ. ಭಾರತದಲ್ಲಿ, ಬಹುತೇಕ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ಪ್ರಮುಖ ವಿಮಾನ ನಿಲ್ದಾಣಗಳು ಆನ್‌ಲೈನ್ ಬುಕಿಂಗ್, ವೆಬ್ ಚೆಕ್-ಇನ್‌ಗಳು ಮತ್ತು ಫ್ಲೈಟ್ ಸ್ಟೇಟಸ್ ಅಪ್‌ಡೇಟ್‌ಗಳನ್ನು ಒದಗಿಸಲು ಹೆಣಗಾಡುತ್ತಿದ್ದವು. ಇಂಡಿಗೋ ದೇಶಾದ್ಯಂತ ಸುಮಾರು 200 ವಿಮಾನಗಳನ್ನು ರದ್ದುಗೊಳಿಸಿತ್ತು.
ಸ್ಪೈಸ್‌ಜೆಟ್, ಏರ್ ಇಂಡಿಯಾ, ಅಕಾಸಾ ಮತ್ತು ವಿಸ್ತಾರಾ ಕೂಡ ಮೈಕ್ರೋಸಾಫ್ಟ್ ಅಜುರೆ, ಕ್ಲೌಡ್ ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಅಡೆತಡೆಗಳನ್ನು ಎದುರಿಸಿತು. ದಿನವಿಡೀ, ಏರ್‌ಲೈನ್‌ಗಳು ಹಸ್ತಚಾಲಿತ ಚೆಕ್-ಇನ್‌ಗಳನ್ನು ಮಾಡುವುದನ್ನು ಮತ್ತು ಕೈಬರಹದ ಬೋರ್ಡಿಂಗ್ ಪಾಸ್‌ಗಳನ್ನು ನೀಡಿದ್ದರು. ಮೈಕ್ರೋಸಾಫ್ಟ್ನಲ್ಲಿ ಗುರುವಾರ ಸಂಜೆ 6 ಗಂಟೆಗೆ (ಸ್ಥಳೀಯ ಕಾಲಮಾನ) ಸಮಸ್ಯೆ ಪ್ರಾರಂಭವಾಗಿತ್ತು. ವಿಂಡೋಸ್‌ನ ಇತ್ತೀಚಿನ ಐಟಿ ಸಮಸ್ಯೆಯಿಂದ ಕೆಲವು ಮೈಕ್ರೋಸಾಫ್ಟ್ ಸೇವೆಗಳಿಗೂ ಭಾರೀ ಅಡಚಣೆ ಉಂಟಾಗಿತ್ತು.
ಜಸ್ಟ್ ಒಂದು ಆಂಟಿ ವೈರಸ್ ಅಪ್ ಡೇಟ್ ಮಾಡದೇ ಹೋಗಿದ್ದಕ್ಕೆ ಇಷ್ಟೆಲ್ಲ ಸಮಸ್ಯೆ ಎದುರಾಗಿದೆ ಎಂದರೆ ನಂಬಲಾಗುತ್ತಿಲ್ಲ. ಏಕೆಂದರೆ.. ಆಂಟಿ ವೈರಸ್ ಅಪ್ ಡೇಟ್ ಕೂಡಾ, ಮನುಷ್ಯರು ಮಾಡುವಂತದ್ದೇನಲ್ಲ. ಅದರ ಪಾಡಿಗೆ ಅದು ಪ್ರೋಗ್ರಾಂ ಆಗಿರುತ್ತೆ. ಹಾಗಾದರೆ.. ಪ್ರೋಗ್ರಾಮಿಂಗ್ ಎಡವಿದ್ದು ಎಲ್ಲಿ..?
ಇಡೀ ಜಗತ್ತು ನನ್ನ ಕೈಯ್ಯಲ್ಲಿದೆ ಎಂದು ಬೀಗುವುದಷ್ಟೇ ಅಲ್ಲ, ಜಗತ್ತನ್ನು ಕೈಯ್ಯಲ್ಲಿ ಇಟ್ಟುಕೊಂಡಿರುವವರು ಪ್ರತಿ ಕ್ಷಣವೂ ಅಲರ್ಟ್ ಆಗಿರಬೇಕು ಅನ್ನೋ ಪಾಠ ಹೇಳಿದೆ ಮೈಕ್ರೋಸಾಫ್ಟ್ ಎಡವಟ್ಟು.



