ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಬೆಂಕಿಯುದ್ಧವೇ ನಡೆದುಹೋಗಿತ್ತು. ಕೆಎಂಎಫ್ ಸಭೆಗೆ ಬಂದಿದ್ದ ಗೃಹ ಸಚಿವ ಅಮಿತ್ ಶಾ ಕೆಎಂಎಫ್ ಮತ್ತು ಅಮುಲ್ ಎರಡೂ ಕೂಡಾ ತಂತ್ರಜ್ಞಾನ ವಿನಿಯಮ ಮಾಡಿಕೊಂಡರೆ ಹಾಲಿನ ಉತ್ಪಾದನೆಯಲ್ಲಿ ಇಡೀ ದೇಶವೇ ನಂ.1 ಆಗಲಿದೆ ಎಂದಿದ್ದರು. ಅದಾದ ಮೇಲೆ ಅಮಿತ್ ಶಾ ಹೇಳಿಕೆ ವಿವಾದದ ಸ್ವರೂಪ ಪಡೆದಿತ್ತು. ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕದ ಅಸ್ಮಿತೆಯಾದ ಕೆಎಂಎಫ್`ನ್ನು ಗುಜರಾತಿಗಳ ಅಮುಲ್`ಗೆ ಮಾರಾಟ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಆರೋಪಿಸಿದ್ದವು. ಯಾವ ಸ್ಪಷ್ಟನೆಗೂ ಬಗ್ಗಿರಲಿಲ್ಲ. ಈಗ ಚುನಾವಣೆ ಮುಗಿದಿದೆ. ಸರ್ಕಾರ ಬದಲಾಗಿದೆ. ಹೇಳಿಕೆಯೂ ಬದಲಾಗಿದೆ.
ಕೆಎಂಎಫ್ ಮತ್ತು ಅಮುಲ್ ವಿಲೀನ ಎಂದು ಹೇಳಿಕೆ ನೀಡುವವರು ಹುಚ್ಚರು ಎಂದು ಸ್ವತಃ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದಾರೆ. ನೂತನ ಕೆಎಂಎಫ್ ಅಧ್ಯಕ್ಷರ ಪದಗ್ರಹಣದ ವೇಳೆ ಮಾತನಾಡಿದ ರಾಜಣ್ಣ ಅವರಿಗೆ ರಾಜ್ಯದ ಕೆಎಂಎಫ್ನ ನಂದಿನಿ ಹಾಲನ್ನು ಅಮೂಲ್ ಜೊತೆ ಮಾಡಲಾಗುತ್ತದೆಯೇ ಎಂದು ಮಾಧ್ಯಮಗಳು ಪ್ರಶ್ನೆ ಹಾಕಿದವು. ಯಾರ್ರೀ ಅದನ್ನು ಹೇಳಿದ್ದು, ಯಾರದು ಹಾಗೆ ಹೇಳಿದವರು.. ಅವರು ಹುಚ್ಚರಾ? ವಿಲೀನಾ ಅಂದವರು ಹುಚ್ಚರು, ಯಾವ ವಿಲೀನದ ಪ್ರಶ್ನೆಯೇ ಇಲ್ಲ. ನಾವು ನಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಹೋದ್ರೆ ನಮಗೆ ಒಳೆಯ ಮಾರ್ಕೆಟ್ ಇರುತ್ತದೆ. ಯಾರು ಇನ್ಮುಂದೆ ವಿಲೀನದ ಬಗ್ಗೆ ಮಾತನಾಡೋದಕ್ಕೆ ಹೋಗಬೇಡಿ ಎಂದು ಠರಾವು ಹೊರಡಿಸಿದ್ದಾರೆ.
ಅಂದಹಾಗೆ ಹುಚ್ಚರು ಯಾರು..?



