ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರುವ ದರ್ಶನ್, ಸದ್ಯಕೆ ಹೊರಬರುವ ಸಾಧ್ಯತೆ ಇಲ್ಲ. ದರ್ಶನ್ ಅವರಿಗೆ ನೀಡಲಾಗಿದ್ದ ಜಾಮೀನು ಸುಪ್ರೀಂಕೋರ್ಟಿನಲ್ಲೇ ರದ್ದಾಗಿರುವುದರಿಂದ ಕನಿಷ್ಠ 6 ತಿಂಗಳು ಮತ್ತೆ ಬೇಲ್ ಅರ್ಜಿ ಹಾಕುವಂತಿಲ್ಲ. ಏಕಸದಸ್ಯ ಪೀಠ ಆದೇಶ ನೀಡಿದ್ದು, ಪುನಃ ಅರ್ಜಿ ಅಂಗೀಕರಿಸಬೇಕು ಎಂದರೆ.. ಅದು ದ್ವಿಸದಸ್ಯ ಪೀಠದಲ್ಲೇ ಆಗಬೇಕು. ಅಷ್ಟೇ ಅಲ್ಲ.. ಈ ಹಿಂದೆ ಯಾವ ಕಾರಣಕ್ಕೆ ಜಾಮೀನು ರದ್ದಾಗಿದೆಯೋ.. ಅದೇ ಗ್ರೌಂಡಿನಲ್ಲಿ ಮತ್ತೆ ಮೇಲ್ಮನವಿ ಹಾಕುವುದಕ್ಕೆ ಬರುವುದಿಲ್ಲ. ಹಾಗಾದರೆ.. ಯಾವ ಕಾರಣ ನೀಡಿ ಮತ್ತೆ ಅರ್ಜಿ ಹಾಕಬಹುದು ಎಂದು ಹುಡುಕಿದ ವಕೀಲರ ತಂಡಕ್ಕೆ ಆಶಾದೀಪವಾಗಿ ಕಾಣಿಸಿರುವುದು ದರ್ಶನ್ ಅವರ ತಾಯಿ ಮೀನಾ ತೂಗುದೀಪ.
ದರ್ಶನ್ ತಮ್ಮ ತಾಯಿಯ ಅನಾರೋಗ್ಯದ ನೆಪ ಹೇಳಿ ಜಾಮೀನು ಪಡೆಯಲು ಹೊಸ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರ ಅನಾರೋಗ್ಯದ ನೆಪ ಹೇಳಿ ಜಾಮೀನು ಪಡೆಯಲು ಮುಂದಾಗಿದ್ದಾರಂತೆ. ತಾಯಿ ಮೀನಾ ಅವರ ಆರೈಕೆಯ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದರೆ ಹೇಗೆ ಎಂಬ ಬಗ್ಗೆ ವಕೀಲರ ಜೊತೆ ಸಮಾಲೋಚನೆ ಮಾಡ್ತಿದ್ದಾರಂತೆ. ಆದರೆ ಇಲ್ಲೊಂದು ಸಮಸ್ಯೆಯೂ ಇದೆ.
ದರ್ಶನ್ ಅವರ ತಾಯಿ ಮೀನಾ ಅವರು ದರ್ಶನ್ ಅವರ ಜೊತೆಗೆ ಇಲ್ಲ. ಮೀನಾ ಅವರು ದರ್ಶನ್ ಅವರ ಜೊತೆಗೆ ಅವರ ಮನೆಯಲ್ಲೇ ಇದ್ದಿದ್ದರೆ, ಆ ಮಾತು ಬೇರೆ. ಆದರೆ.. ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ್ದಾಗ, ದಿನಕರ್ ಅವರ ಜೊತೆ ಜಗಳ ಮಾಡಿಕೊಂಡಿದ್ದಾಗ ಪ್ರಶ್ನೆ ಮಾಡಿದ್ದ ಮೀನಾ ಅವರನ್ನು ದರ್ಶನ್ ಅವರೇ ಮನೆ ಬಿಟ್ಟು ಹೊರಗೆ ಕಳಿಸಿದ್ದರಂತೆ.
ಮೀನಾ ಅವರೀಗ ಎಲ್ಲ ಮಕ್ಕಳ ಜೊತೆ ಚೆನ್ನಾಗಿ ಇದ್ದಾರಾದರೂ, ಯಾರ ಜೊತೆಯಲ್ಲೂ ಇಲ್ಲ. ಪ್ರತ್ಯೇಕವಾಗಿಯೇ ಬದುಕುತ್ತಿದ್ದಾರೆ. ಹೀಗಿರುವಾಗ ಕೋರ್ಟು ಒಪ್ಪುತ್ತದೆಯೇ ಎನ್ನುವುದು ಪ್ರಶ್ನೆ. ಹೀಗಾಗಿ ಈ ಅರ್ಜಿ ಊರ್ಜಿತವಾಗುತ್ತದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಅಲ್ಲದೆ ಮೀನಾ ಅವರಿಗೆ ದರ್ಶನ್ ಒಬ್ಬರೇ ಮಗ ಅಲ್ಲ. ದಿನಕರ್ ಕೂಡಾ ಇದ್ದಾರೆ. ಮಗಳೂ ಇದ್ದಾರೆ. ಹೀಗಾಗಿ ಈ ಅರ್ಜಿ ಮಾನ್ಯವಾಗುತ್ತದೆಯೇ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆಯಂತೆ.
ಇದರ ಮಧ್ಯೆ ದರ್ಶನ್, ಜ್ಯೋತಿಷ್ಯ, ಸಮಯಫಲವನ್ನು ನಂಬುತ್ತಿದ್ದು, ಯಾವ ಸಮಯದಲ್ಲಿ, ಯಾವ ಮುಹೂರ್ತದಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆಯೂ ಜ್ಯೋತಿಷಿಗಳ ಸಲಹೆ ಕೇಳಿದ್ದಾರಂತೆ.
ಇದು ದರ್ಶನ್ ಅವರೂ ಸ್ವತಃ ಮಾಡಿಕೊಂಡ ಅಪರಾಧವೇ. ದರ್ಶನ್ ಅವರಿಗೆ ಜಾಮೀನು ಸಿಕ್ಕ ಬಳಿಕ ವಕೀಲರು ಕೂಡಾ ದರ್ಶನ್ ಅವರಿಗೆ ಎಚ್ಚರಿಕೆ ನೀಡಿದ್ದರಂತೆ. ಕೋರ್ಟು ಯಾವ್ಯಾವ ಷರತ್ತು ಹಾಕಿದೆಯೋ.. ಅವುಗಳನ್ನು ಪಾಲಿಸಬೇಕು. ಆರೋಗ್ಯದ ಬಗ್ಗೆಯೂ ಮಾಹಿತಿ ಕೊಡಬೇಕು. ಸಂಬಂಧಪಟ್ಟ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು ಎಂದೆಲ್ಲ ಹೇಳಿದ್ದರಂತೆ. ವಕೀಲರು ಹೇಳಿದಂತೆ ಕೇಳಿದ್ದರೆ, ದರ್ಶನ್ ತಮ್ಮ ಹೆಲ್ತ್ ಅಪ್ ಡೇಟ್ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಬೇಕಿತ್ತು. ಆದರೆ.. ದರ್ಶನ್ ಹಾಗೆ ಮಾಡದೆ.. ಮತ್ತೆ ಜೈಲು ಸೇರುವಂತಾಯ್ತು. ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿರೋದ್ರಿಂದ ಮತ್ತೆ 6 ತಿಂಗಳು ಜಾಮೀನು ಕೇಳೋಕೆ ಆಗುವುದಿಲ್ಲ.



