ಬಿಜೆಪಿ ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನೇ ಮರು ಆಯ್ಕೆ ಮಾಡುವುದಕ್ಕೆ ಬಿಜೆಪಿ ಹೈಕಮಾಂಡ್ ಒಲವು ತೋರಿದೆ. ದೆಹಲಿ ಪಡಸಾಲೆಯಲ್ಲಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನೇ ಮುಂದುವರಿಸಲು ಚರ್ಚೆ ನಡೆಯುತ್ತಿದೆ. ಈ ಮೂಲಕ ರೆಬಲ್ ನಾಯಕರ ಹೋರಾಟಕ್ಕೆ ಇತಿಶ್ರೀ ಹಾಡಲಾಗದೆ. ಅಂದಹಾಗೆ ವಿಜಯೇಂದ್ರ ಪರ ಮೂಲಗಳ ಪ್ರಕಾರ ರೆಬಲ್ಸ್ ನಾಯಕರ ಹೋರಾಟಕ್ಕೆ ಇತಿಶ್ರೀ ಹಾಡಿರುವುದು ಖುದ್ದು ಅಮಿತ್ ಶಾ ಅವರಂತೆ. ಅಮಿತ್ ಶಾ ಅವರು ಯತ್ನಾಳ್ ಬಣದ ಹೋರಾಟಕ್ಕೆ, ತರಲೆಗಳಿಗೆ ಗರಂ ಆಗಿದ್ದಾರಂತೆ. ಹಾಗಂತ ವಿಜಯೇಂದ್ರ ಅವರನ್ನೂ ಬಿಟ್ಟಿಲ್ಲವಂತೆ. ವಿಜಯೇಂದ್ರ ಅವರಿಗೂ ಒಂದು ವಾರ್ನಿಂಗ್ ಕೊಟ್ಟಿದ್ದಾರಂತೆ.
ತಟಸ್ಥ ಬಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ವಾರ್ನಿಂಗ್
ಅತ್ತ ವಿಜಯೇಂದ್ರ ಜೊತೆಯಲ್ಲೂ ಇಲ್ಲದೆ, ಇತ್ತ ಯತ್ನಾಳ ಜೊತೆಯಲ್ಲೂ ಹೋಗದೆ ಇರುವ ತಟಸ್ಥ ಬಣದ ನಾಯಕರಿಗೆ, ರಾಜ್ಯದ ಹಿರಿಯ ನಾಯಕರಿಗೆ ಸೂಚನೆ ಕೊಟ್ಟಿರೊ ಅಮಿತ್ ಶಾ, ರೆಬಲ್ಸ್‌ಗಳಿಗೆ ಹೆಚ್ಚಿನ ಮನ್ನಣೆ ಕೊಡದಂತೆ ಸೂಚನೆ ನೀಡಿದ್ದಾರಂತೆ. ಈ ಮೂಲಕ ರೆಬಲ್ಸ್ ನಾಯಕರ ಜೊತೆ ಪರೋಕ್ಷವಾಗಿ ನಿಂತಿರೋ ನಾಯಕರಿಗೆ ಅಮಿತ್ ಶಾ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ತಟಸ್ಥರು ಎಂದು ರೆಬಲ್ಸ್ ಜೊತೆ ನಿಂತವರಿಗೆ ಅಮಿತ್ ಶಾ ಶಾಕ್ ಕೊಟ್ಟಿದ್ದಾರೆ ಎನ್ನಲಾಗಿದ್ದು, ವಿಜಯೇಂದ್ರರನ್ನು ಒಪ್ಪಿ ಮುನ್ನಡೆಯುವಂತೆ ತಟಸ್ಥ ಬಣಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪರನ್ನ ಬಿಟ್ಟರೆ ಬಿಜೆಪಿಗೆ ಹಿನ್ನಡೆ :
ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪಗೆ ಮನ್ನಣೆ ಕೊಡದಿದ್ರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಪ್ರಬಲ ಲಿಂಗಾಯತ ಸಮುದಾಯ ವಿರೋದ ಕಟ್ಟಿಕೊಳ್ಳಬೇಕಾಗಬಹುದು. ರೆಬಲ್ಸ್‌ಗಳಿಗೆ ಸೂಕ್ತಸ್ಥಾನಮಾನದ ಭರವಸೆ ನೀಡಿ, ವಿಜಯೇಂದ್ರಗೆ ಇನ್ನೊಂದು ಅವಕಾಶ ನೀಡೋಣ. ಇದನ್ನು ಪಕ್ಷದ ಹಿರಿಯನಾಯಕರು ಇದನ್ನ ಒಪ್ಪಿ ಮುನ್ನಡೆಯ ಬೇಕು. ಯಾವುದೇ ಕಾರಣಕ್ಕೂ ರಾಜ್ಯಾಧ್ಯಕ್ಷರ ಘೋಷಣೆ ಬಳಿಕ ಗೊಂದಲ ಸೃಷ್ಟಿಯಾಗಬಾರದು ಎಂದು ಸೂಚನೆ ಕೊಟ್ಟಿದ್ದಾರಂತೆ ಅಮಿತ್ ಶಾ.
ತಟಸ್ಥರಿಗೇ ಹೊಣೆ ಹೊರಿಸಿದ ಶಾ :
ಬಿಜೆಪಿ ರಾಜ್ಯಾದ್ಯಕ್ಷ ಹುದ್ದೆ ಕುರಿತು ಗೊಂದಲ ಸೃಷ್ಟಿಯಾಗದಂತೆ ಕ್ರಮವಹಿಸುವ ಜವಾಬ್ದಾರಿ ನಿಮ್ಮಹೆಗಲಿಗೆ ಎಂದಿರುವ ಶಾ, ತಟಸ್ಥ ಬಣದವರಿಗೇ ಸಮಸ್ಯೆ ಬಗೆಹರಿಸುವ ಸೂಚನೆ ಕೊಟ್ಟಿದ್ದಾರಂತೆ. ಅಲ್ಲಿಗೆ ವಿಜಯೇಂದ್ರ ಅವರ ಕೈಮೇಲಾಗಿದ್ದು, ತಟಸ್ಥ ಬಣಕ್ಕೆ ಹೊಸ ಜವಾಬ್ದಾರಿ ಹೆಗಲೇರಿದೆ.
ವಿಜಯೇಂದ್ರ ನಡೆ ಏನು..?
ವಿಜಯೇಂದ್ರ ಎಂದಿನಂತೆ ಸೈಲೆಂಟ್ ಆಗಿಯೇ ಮುಂದುವರೆದಿದ್ದಾರೆ. ಇನ್ನೊಂದು ವಾರದಲ್ಲಿ ಎಲ್ಲವೂ ಪರಿಹಾರವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ತಾವು ಯತ್ನಾಳ್ ಅವರಿಗೆ ನೋಟಿಸ್ ಕೊಟ್ಟಿಲ್ಲ ಎಂದಿದ್ದಾರೆ. ನೋಟಿಸ್ ಹೋಗಿದೆ ಎನ್ನುವುದನ್ನು ನಿರಾಕರಿಸಿಲ್ಲ. ಅಂದರೆ ದೆಹಲಿಯಿಂದಲೇ ಯತ್ನಾಳ್ ಅವರಿಗೆ ನೋಟಿಸ್ ಹೋಗಿದೆ ಎಂದು ಹೇಳಿದ್ದಾರೆ. ಇನ್ನು ಶೀಘ್ರದಲ್ಲೇ ಎಲ್ಲವೂ ಬಗೆಹರಿಯಲಿದೆ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಾವೇ ಮುಂದುವರೆಯುವ ಸ್ಪಷ್ಟ ಸುಳಿವು ಕೊಟ್ಟಿದ್ದಾರೆ ವಿಜಯೇಂದ್ರ.
ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಂತಿಮ ರೂಪುರೇಷೆ ನೀಡಲಾಗುತ್ತಿದೆ. ಹೈಕಮಾಂಡ್ ಬಹಳ ಕಗ್ಗಂಟಾಗಿ ಪರಿಣಿಮಿಸಿದ್ದ ರಾಜ್ಯಾಧ್ಯಕ್ಷ ಸ್ಥಾನ ಅಂತಿಮ ಹಂತಕ್ಕೆ ಬಂದು ನಿಂತಿದೆ. ಎಲ್ಲವನ್ನೂ ಗಮನಿಸಿದ ಹೈಕಮಾಂಡ್ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯನ್ನು ಅತ್ಯಂತ ಸೂಕ್ಷತೆಯಿಂದ ಆಯ್ಕೆ ಮಾಡಲು ನಿರ್ಧರಿಸಿದೆ. ಹಿರಿಯ ನಾಯಕರಿಗೆ ಮಣೆ ಹಾಕಿದರೆ ಏನೆಲ್ಲಾ ಬೆಳವಣಿಗೆಳು ಆಗಬಹದು ಎಂಬ ಲೆಕ್ಕಚಾರವನ್ನು ಹೈಕಮಾಂಡ್ ಹಾಕಿಕೊಡಿದೆ. ಹೀಗಾಗಿ ಬಹುತೇಕ ರಾಜ್ಯಾಧ್ಯಕ್ಷ ಆಯ್ಕೆ ಕೆಲವೇ ದಿನಗಳಲ್ಲಿ ಅಂತಿಮಗೊಳಿಸಿ ಎಲ್ಲದಲ್ಲೂ ತೆರೆ ಎಳೆಯುವ ಕೆಲಸವನ್ನು ಹೈಕಮಾಂಡ್ ಮಾಡಲು ಮುಂದಾಗಿದೆ….



