ಜಗತ್ತಿನ ನಂ.1 ಪಟ್ಟಕ್ಕೆ ಹತ್ತಿರ ಹೋಗಿದ್ದ ಅದಾನಿ ಈಗ ಇಂಡಿಯಾದ ನಂ.2 ಶ್ರೀಮಂತನ ಸ್ಥಾನಕ್ಕೆ ಜಾರಿದ್ದಾರೆ. ಅದಾನಿ ಪಟ್ಟಕ್ಕೇರಿದ ನಂತರ, ನಂ.2 ಸ್ಥಾನಕ್ಕೆ ಜಾರಿದ್ದ (reliance) ರಿಲಯನ್ಸ್ ಅಂಬಾನಿ Mukhesh ambani ಮತ್ತೆ ನಂ.1 ಪಟ್ಟಕ್ಕೇರಿದ್ದಾರೆ. ಹುರೂನ್ ಇಂಡಿಯಾ ಸಂಸ್ಥೆ Huron india ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ Adani groups ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ Gautham adani ಅವರನ್ನು ಹಿಂದಿಕ್ಕಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮರಳಿ ದೇಶದ ನಂ.1 ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ. ಹುರುನ್ ಇಂಡಿಯಾ ಮತ್ತು 360 ವೆಲ್ತ್ ಜಂಟಿಯಾಗಿ ಬಿಡುಗಡೆ ಮಾಡಿದ 360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023, ದೇಶದ ಶ್ರೀಮಂತ ವ್ಯಕ್ತಿಗಳ ಹೆಸರನ್ನು ಬಿಡುಗಡೆ ಮಾಡಿದೆ.
ಭಾರತದ ಟಾಪ್ 10 ಕುಬೇರರು..!
ರಿಲಯನ್ಸ್ ಇಂಡಸ್ಟ್ರೀಸ್ನ (reliance industries) ಮುಕೇಶ್ ಅಂಬಾನಿ 8.08 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ದೇಶದ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮುಕೇಶ್ ಅಂಬಾನಿ ಆಸ್ತಿಯಲ್ಲಿ ಶೇ.2.2ರಷ್ಟು ಮಾತ್ರವೇ ಏರಿಕೆಯಾಗಿದೆ.
ಕಳೆದ ವರ್ಷದ ಮೊದಲ ಸ್ಥಾನದಲ್ಲಿದ್ದ ಗೌತಮ್ ಅದಾನಿ ಆಸ್ತಿ, ಹಿಂಡನ್ಬರ್ಗ್ (Hindenburg report) ವರದಿ ಪ್ರಕಟ ಬಳಿಕ ಶೇ.57ರಷ್ಟು ಕುಸಿತ ಕಂಡು 4.74 ಲಕ್ಷ ಕೋಟಿಗೆ ಇಳಿದ ಪರಿಣಾಮ ಅವರು 2ನೇ ಸ್ಥಾನ ಪಡೆದುಕೊಂಡಿದ್ದಾರೆ.
ಪುಣೆ ಸೀರಂ ಇನ್ಸ್ಟಿಟ್ಯೂಟ್ Pune serum institute ಮಾಲೀಕ ಸೈರಸ್ ಪೂನಾವಾಲಾ (2.78 ಲಕ್ಷ ಕೋಟಿ ರು.), ಎಚ್ಸಿಎಲ್ನ ಶಿವ ನಾಡಾರ್ Shiva nadir (2.28 ಲಕ್ಷ ಕೋಟಿ ರು.), ಗೋಪಿಚಂದ್ ಹಿಂದೂಜಾ Gopichand hinduja , ದಿಲೀಪ್ ಸಿಂಘ್ವಿ Dileep singhwi, ಲಕ್ಷ್ಮೀ ನಿವಾಸ್ ಮಿತ್ತಲ್ , Lakshmi mittal ರಾಧಾಕೃಷ್ಣನ್ ದಮಾನಿ , ಕುಮಾರ ಮಂಗಳಂ ಬಿರ್ಲಾ Kumara mangalam birla, ನೀರಜ್ ಬಜಾಜ್ neeraj bajaj ಕ್ರಮವಾಗಿ 3ರಿಂದ 10 ಸ್ಥಾನ ಪಡೆದಿದ್ದಾರೆ. 138 ನಗರಗಳ 1319 ಶ್ರೀಮಂತರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಿಸಿಷನ್ ವೈರ್ಸ್ನ ಮುಖ್ಯಸ್ಥ ಮಹೇಂದ್ರ ರತಿಲಾಲ್ ತಮ್ಮ 94ನೇ ವಯಸ್ಸಿನಲ್ಲಿ ಸಿರಿವಂತರ ಪಟ್ಟಿ ಸೇರಿದ್ದಾರೆ.
ದೇಶದ ನಂ.1 ಶ್ರೀಮಂತ ಮಹಿಳೆ :
ಜೋಹೋದ ರಾಧಾ ವೆಂಬು ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದು, ನಾಯಿಕಾ ಸಂಸ್ಥೆಯ ಪಲ್ಗುಣಿ ಪಾಠಕ್ 2ನೇ ಸ್ಥಾನಕ್ಕೆ ಇಳಿದಿದ್ದಾರೆ.
ಸ್ಟಾರ್ಟ್ ಅಪ್ ಕ್ರಾಂತಿ ಎಫೆಕ್ಟ್ :
ಶ್ರೀಮಂತರ ಲಿಸ್ಟಿನಲ್ಲಿ ಜೆಪ್ಟೋ ಸ್ಟಾರ್ಟಪ್ನ ಕೈವಲ್ಯ ವೋಹ್ರಾ (20 ವರ್ಷ) ಪಟ್ಟಿಯಲ್ಲಿ ಸ್ಥಾನ ಪಡೆದ ಅತಿ ಕಿರಿಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದು ಭಾರತದ ಸ್ಟಾರ್ಟ್ಅಪ್ ಕ್ರಾಂತಿಯ ಪರಿಣಾಮವನ್ನು ಒತ್ತಿಹೇಳುತ್ತದೆ. ಭಾರತದಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ಸಂಪತ್ತನ್ನು ಹೊಂದಿರುವವರ ಸಂಖ್ಯೆ ಈಗ 1,319ಕ್ಕೆ ಏರಿದೆ. “ಕಳೆದ ಐದು ವರ್ಷದಲ್ಲಿ ಈ ಸಹಸ್ರ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಶೇ. 76ರಷ್ಟು ವೃದ್ಧಿಯಾಗಿದೆ. ಈ ವ್ಯಕ್ತಿಗಳ ಬಳಿ ಒಟ್ಟು 109 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತು ಕ್ರೋಢೀಕರಣವಾಗಿದೆ. ಈ ಮೊತ್ತವು ಸಿಂಗಾಪುರ, ಯುಎಇ ಮತ್ತು ಸೌದಿ ಅರೇಬಿಯಾ ದೇಶಗಳ ಒಟ್ಟೂ ಜಿಡಿಪಿಗಿಂತಲೂ ದೊಡ್ಡದು.



