ಬಿಜೆಪಿ ಉಸ್ತುವಾರಿ ಸಭೆಗೂ ಯತ್ನಾಳ್ ಟೀಂ ಬರಲಿಲ್ಲ. ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ನೇತೃತ್ವದ ಸಭೆಗೆ ರೆಬಲ್ಸ್ ಚಾಲೆಂಜ್ ಹಾಕಿದ್ದಾರೆ. ಒಟ್ಟಾರೆ ಯತ್ನಾಳ್ ಬಣದಲ್ಲಿದ್ದವರಲ್ಲಿ ಬಂದಿದ್ದು ಬಿಪಿ ಹರೀಶ್ ಮಾತ್ರ. ಒಟ್ಟಾರೆ 66 ಶಾಸಕರ ಪೈಕಿ ಸಭೆಗೆ ಬಂದಿದ್ದು 48 ಶಾಸಕರು ಮಾತ್ರ. ಯತ್ನಾಳ್, ಜಾರಕಿಹೊಳಿ ಸೇರಿದಂತೆ ಯತ್ನಾಳ್ ಟೀಂ ಆಬ್ಸೆಂಟ್ ಆಗಿದೆ. ಇನ್ನು ಕಾಂಗ್ರೆಸ್ ಜೊತೆ ಹೋಗುವುದು ಕನ್ಫರ್ಮ್ ಆಗಿರುವ ಶಿವರಾಂ ಹೆಬ್ಬಾರ್, ಎಸ್ ಟಿ ಸೋಮಶೇಖರ್ ಕೂಡಾ ಸಭೆಗೆ ಗೈರು ಹಾಜರಾಗಿದ್ಧಾರೆ. ಬಿಜೆಪಿ ಬಣ ಬಡಿದಾಟಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿಯೇ ಸುಸ್ತು ಹೊಡೆದಿದ್ದಾರೆ.
ಇನ್ನು ತಟಸ್ಥ ಬಣದಲ್ಲಿರುವ ಸುನಿಲ್ ಕುಮಾರ್, ಸಿಸಿ ಪಾಟೀಲ್, ಮಹೇಶ್ ಟೆಂಗಿನಕಾಯಿಯೂ ಗೈರು ಹಾಜರಾಗಿದ್ದು, ವಿಧಾನಸಭೆಯ 48 ಹಾಗೂ ವಿಧಾನ ಪರಿಷತ್ತಿನ 16 ಸದಸ್ಯರು ಮಾತ್ರ ಸಭೆಗೆ ಹಾಜರಾತಿ ಹಾಕಿದ್ಧಾರೆ. ಬಂಡಾಯ ಸಾರಿರುವ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅವರು ಸಭೆಗೆ ಕ್ಯಾರೇ ಏಂದಿಲ್ಲ. ರಾಧಾ ಮೋಹನ್ ದಾಸ್ ಅವರನ್ನು ಖಾರವಾಗಿಯೇ ಪ್ರಶ್ನೆ ಮಾಡಿದ ಬಿಜೆಪಿ ಶಾಸಕರಾದ ಸುರೇಶ್‌ಗೌಡ, ಆರಗ ಜ್ಞಾನೇಂದ್ರ, ಸಿದ್ದು ಸವದಿ, ಬಸವರಾಜ ಮತ್ತಿಮೂಡ, ಶೈಲೇಂದ್ರ ಬೆಲ್ದಾಳೆ, ಡಿ.ಎಸ್.ಅರುಣ್, ಪಿ.ಎಚ್.ಪೂಜಾರ್ ಸೇರಿ ಹಲವರು ಪಕ್ಷದ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿರುವ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತಿತರರ ಜತೆ ಮಾತುಕತೆ ನಡೆಸಿ ಭಿನ್ನಮತ ಬಗೆಹರಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯಗಳಿಂದ ಅನೇಕ ಅಸ್ತ್ರಗಳನ್ನು ನಮಗೆ ನೀಡುತ್ತಿದೆ. ಆದರೆ, ಅವುಗಳನ್ನು ಬಳಸಿಕೊಳ್ಳುವುದಕ್ಕೆ ಪ್ರಮುಖ ಪ್ರತಿಪಕ್ಷವಾಗಿ ಬಿಜೆಪಿಯಿಂದ ಸಾಧ್ಯವಾಗುತ್ತಿಲ್ಲ. ಬಣ ರಾಜಕೀಯವೇ ಹೈಲೈಟ್ ಆಗುತ್ತಿದೆ. ಪಕ್ಷದ ನಾಯಕರ ವಿರುದ್ಧ ನಮ್ಮವರೇ ಬಹಿರಂಗ ಹೇಳಿಕೆ ನೀಡಿದರೆ ನಾವು ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ಏನು ಉತ್ತರಿಸಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕೇಳುವವರೆಗೂ ಕೇಳಿ ದೂರು ನೀಡಿದ ಶಾಸಕರ ವಿರುದ್ಧವೇ ಗರಂ ಆದ ರಾಧಾ ಮೋಹನ್ ನಿಮ್ಮ ನಿಮ್ಮ ಗುಂಪುಗಾರಿಕೆ ಬಿಟ್ಟು, ಪಕ್ಷದ ಸಂಘಟನೆಯತ್ತ ಗಮನ ಕೊಡಿ ಎಂದು ಸಲಹೆ ಕೊಟ್ಟಿದ್ಧಾರೆ. ರಾಧಾ ಮೋಹನ್ ದಾಸ್ ಅಗರ್ವಾಲ್ ಅವರಿಗೆ ಈಗ ಅರ್ಥವಾದಂತೆ ಕಾಣುತ್ತಿದೆ. ಹೈಕಮಾಂಡ್ ನಾಯಕರು ಎರಡೂ ಬಣದವರನ್ನು ಕೂರಿಸಿ ಮಾತನಾಡಬೇಕಿತ್ತು, ಆರಂಭದಲ್ಲೇ ಚಿವುಟಿ ಹಾಕಬೇಕಿತ್ತು ಎಂದು ಅನಿಸುತ್ತಿದೆ. ಆದರೆ ಹೈಕಮಾಂಡ್ ನಾಯಕರು ಅತ್ತ ತೊಟ್ಟಿಲು ತೂಗಿ, ಇತ್ತ ಮಗುವನ್ನೂ ಚಿವುಟುವ ಆಟ ಆಡಿದ ತಪ್ಪಿಗೆ ʻಕರ್ನಾಟಕದಲ್ಲಿ ಪಕ್ಷವೇ ಕೈತಪ್ಪಿ ಹೋಗುವ ಪರಿಸ್ಥಿತಿʼ ನಿರ್ಮಾಣವಾಗುತ್ತಿದೆ. ಆದರೆ ಈಗ ಕಾಲ ಮಿಂಚಿದೆ.
ರಾಜ್ಯ ಉಸ್ತುವಾರಿಗಳೇನೋ ಹೇಳಿದ್ದಾರೆ. ಆದರೆ ಆ ನಾಯಕರೂ ಈಗ ಡಲ್ಲು ಹೊಡೆದಿದ್ದಾರೆ. ʻಸಂತೋಷʼ ದಾಯಕ ಆಟ ರಾಜ್ಯ ಬಿಜೆಪಿಯನ್ನೇ ನುಂಗುತ್ತಿದೆ.



