ಕೃಷ್ಣಂ ಪ್ರಣಯ ಸಖಿ ಲೀಲೆಯ ಎದುರು ತಂಗಳಾನ್ ಥಂಡಾ ಹೊಡೆದಿದೆ. ಭೀಮನ ಆರ್ಭಟದ ಮುಂದೆ ತಮಿಳು, ತೆಲುಗು ಚಿತ್ರಗಳು ಸುಸ್ತು ಹೊಡೆದಿವೆ. ಹಾಗೆ ನೋಡಿದರೆ.. ಕನ್ನಡ ಚಿತ್ರರಂಗದಲ್ಲೀಗ ಗುಡ್ ನ್ಯೂಸ್ ಹಾವಳಿ ಶುರುವಾಗಿದೆ. ಭೀಮ ಗೆದ್ದಾಯ್ತು. ರಾಷ್ಟ್ರಪ್ರಶಸ್ತಿಗಳಲ್ಲಿ ಕನ್ನಡ ಮಿಂಚಿದ್ದಾಯ್ತು. ಬೆನ್ನಲ್ಲೇ ಕೃಷ್ಣಂ ಪ್ರಣಯ ಸಖಿಯೂ ಗೆದ್ದಿದೆ. ದಶಕಗಳ ಹಿಂದಿನ ಮುಂಗಾರು ದುನಿಯಾ ಮ್ಯಾಜಿಕ್ ರಿಪೀಟ್ ಆಗಿದೆ.
ಹೌದು, ಈ ಹಿಂದೆ ಇದೇ ಸ್ಪೆಷಲ್ ಯೂ.ಕಾಂನಲ್ಲಿ ಮುಂಗಾರು ದುನಿಯಾ ರಿಪೀಟ್ ಆಗಲಿ ಎಂದು ಹಾರೈಸಲಾಗಿತ್ತು. ಅದರಂತೆಯೇ ಆಗಿದೆ. ಒಂದೇ ಒಂದು ವ್ಯತ್ಯಾಸ ಎಂದರೆ.. ಆಗ ಮೊದಲು ಹಿಟ್ ಆಗಿದ್ದದ್ದು ಗಣೇಶ್ ಅವರ ಮುಂಗಾರು ಮಳೆ. ನಂತರ ವಿಜಯ್ ಅವರ ದುನಿಯಾ. ಈ ಬಾರಿ ಮೊದಲು ಹಿಟ್ ಆಗಿದ್ದು ವಿಜಯ್ ಅವರ ಭೀಮ, ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ.
ಕನ್ನಡ ಸಿನಿಮಾ ಕೃಷ್ಣಂ ಪ್ರಯಣ ಸಖಿಗೆ ಕರ್ನಾಟಕದಲ್ಲಿ ಟಕ್ಕರ್ ಕೊಟ್ಟಿದ್ದು ಚಿಯಾನ್ ವಿಕ್ರಮ್ ನಟನೆಯ ‘ತಂಗಲಾನ್’. ಈ ಸಿನಿಮಾ ಕರ್ನಾಟಕದಲ್ಲೂ ಉತ್ತಮ ಗಳಿಕೆ ಕಂಡಿತ್ತು. ಮೊದಲೆರಡು ದಿನ ‘ಕೃಷ್ಣಂ ಪ್ರಯಣ ಸಖಿ’ಗೂ ಸಿನಿಮಾಗಿಂತಲೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ, ನಾಲ್ಕನೇ ದಿನ ಕರ್ನಾಟಕದಲ್ಲಿ ‘ತಂಗಲಾನ್’ ಸಿನಿಮಾಗಿಂತಲೂ ‘ಕೃಷ್ಣಂ ಪ್ರಣಯ ಸಖಿ’ ಕಲೆಕ್ಷನ್ ಹೆಚ್ಚಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಮೊದಲ ದಿನ 1.50 ಕೋಟಿ ರೂಪಾಯಿ, ಎರಡನೇ ದಿನ 1 ಕೋಟಿ ರೂಪಾಯಿ ಮೂರನೇ ದಿನ 1.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗೇ ನಾಲ್ಕನೇ ದಿನ 2.18 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇದುವರೆಗೆ ಗಣೇಶ್ ಅಭಿನಯದ ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ 10 ಕೋಟಿ ದಾಟಿದೆ ಎನ್ನಲಾಗಿದೆ.
‘ಕೃಷ್ಣಂ ಪ್ರಯಣ ಸಖಿ’ ಸಿನಿಮಾ ರಿಲೀಸ್ ಆದ ದಿನವೇ ‘ತಂಗಲಾನ್’ ಕೂಡ ಕರ್ನಾಟಕದಲ್ಲಿ ಸುಮಾರು 140 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಆರಂಭದ ಎರಡು ದಿನಗಳಲ್ಲಿ ಉತ್ತಮ ಗಳಿಕೆ ಕಂಡಿದ್ದ ತಂಗಲಾನ್, 3ನೇ ದಿನದಿಂದ ಡಲ್ಲು ಹೊಡೆಯುತ್ತಿದೆ.
ಹೀಗಾಗಿಯೇ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಸಕ್ಸಸ್ ಮೀಟ್ ನಡೆದಿದೆ. ಸಿನಿಮಾ ಗೆಲುವು ಕಂಡ ವಿಚಾರ ಇಡೀ ತಂಡಕ್ಕೆ ಖುಷಿ ತಂದಿದೆ. ‘ಕೃಷ್ಣಂ ಪ್ರಣಯ ಸಖಿ’ ಎಷ್ಟು ಕೋಟಿ ಗಳಿಕೆ ಮಾಡಿತು ಎನ್ನುವ ಕುತೂಹಲಕ್ಕೆ ಉತ್ತರ ಕೊಟ್ಟ ಗಣೇಶ್, ‘ಎರಡು ವಾರ ಬಿಟ್ಟು ದೊಡ್ಡದಾಗಿ ಸಕ್ಸಸ್ ಮೀಟ್ ಮಾಡುತ್ತೇವೆ. ಆ ದಿನ ಪಕ್ಕಾ ನಂಬರ್ಸ್ ಹೇಳುತ್ತೇವೆ. ಹಿಡನ್ ನಂಬರ್ ಅಲ್ಲ. ತಪ್ಪು ನಂಬರ್ ಹೇಳುತ್ತಾ ನಮಗೆ ನಾವು ಮೋಸ ಮಾಡಿಕೊಳ್ಳುತ್ತಾ ಹೋಗುವುದು ಬೇಡ ಎಂದಿದ್ದಾರೆ.
ಗೋಲ್ಡನ್ ಸ್ಟಾರ್ ಜೊತೆ , ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ, ಶಶಿಕುಮಾರ್, ಸಾಧುಕೋಕಿಲ ಹಾಗೂ ರಂಗಾಯಣ ರಘು ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ‘ದಂಡುಪಾಳ್ಯ’ ರೀತಿಯ ಕ್ರೈಂ ಸಿನಿಮಾ ಮಾಡಿದ್ದ ಶ್ರೀನಿವಾಸ್ ರಾಜು ಈ ಬಾರಿ ರೊಮ್ಯಾಂಟಿಕ್ ಸಿನಿಮಾ ಮಾಡಿ ಹುಬ್ಬೇರಿಸಿದ್ದಾರೆ. ಎಲ್ಲೆಡೆ ದ್ವಾಪರ ಹಾಗೂ ಚಿನ್ನಮ್ಮನ ಹಾಡುಗಳು ಮೋಡಿ ಮಾಡುತ್ತಿವೆ.
ಇತ್ತ ಭೀಮ ವಿಜಯ್ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿತ್ರದಲ್ಲಿ ಹಿಂಸೆ ಜಾಸ್ತಿ, ಕೆಟ್ಟ ಕೆಟ್ಟ ಡೈಲಾಗ್ ಹೆಚ್ಚಾಯ್ತು ಎಂದು ಕೊಂಡಿದ್ದವರು, ನಂತರ ಸಿನಿಮಾ ನೋಡಿ.. ಇದು ಎಲ್ಲರೂ ನೋಡಬೇಕಾದ.. ನೋಡಲೇಬೇಕಾದ ಸಿನಿಮಾ ಎನ್ನುತ್ತಿದ್ಧಾರೆ. ವಿಚಿತ್ರ ವಿಶೇಷ ಎಂದರೆ.. ಎರಡೂ ಚಿತ್ರಕ್ಕೆ ತಮಿಳುನಾಡು ಮಾರ್ಕೆಟ್ಟಿಂದ ಡಿಮ್ಯಾಂಡ್ ಬಂದಿದೆ.



