15 ಸಿನಿಮಾ ಫ್ಲಾಪ್ ಆದ ನಂತರ ದೇಶವನ್ನೇ ಬಿಟ್ಟು ಹೋದ ವ್ಯಕ್ತಿ, ಈಗ ಎಲ್ಲರಿಗೂ ದೇಶಪ್ರೇಮದ ಪಾಠ ಮಾಡ್ತಾನೆ.
ಅನಿವಾಸಿ ಭಾರತೀಯನಿಂದ ನಾವು ದೇಶಪ್ರೇಮದ ಪಾಠ ಕಲೀಬೇಕಾಗಿಲ್ಲ.
ನಮ್ಮ ದೇಶದ ಆಂತರಿಕ ವಿಷಯ, ರಾಜಕೀಯಗಳ ಬಗ್ಗೆ ಮಾತನಾಡುವುದಕ್ಕೆ ಅಕ್ಷಯ್ ಕುಮಾರ್`ಗೆ ಹಕ್ಕೇ ಇಲ್ಲ. ಆತನೊಬ್ಬ ವಿದೇಶಿಗ.
ಅಕ್ಷಯ್ ಕುಮಾರ್ (Akshay Kumar) ವೀಸಾ ಮೇಲೆ ಭಾರತಕ್ಕೆ ಬಂದು, ನೆಲೆಸಿರುವ ನಟ. ನಮ್ಮ ದೇಶದೊಳಗಿನ ವಿಷಯ ಅವನಿಗ್ಯಾಕೆ.. ಫಾರಿನರ್.. ಫಾರಿನರ್ ತರಾ ಇರಲಿ..
ಇಂತಹ ಟೀಕೆಗಳನ್ನೆಲ್ಲ ಎದುರಿಸಿದ್ದು ಅಕ್ಷಯ್ ಕುಮಾರ್ (Akshay Kumar) ಎಂಬ ಸ್ಟಾರ್ ನಟ. ಹೌದೇ.. ಅಕ್ಷಯ್ ಕುಮಾರ್ (Akshay Kumar) ಇಂಡಿಯನ್ (Indian) ಅಲ್ವಾ ಎಂಬ ಪ್ರಶ್ನೆ ಎತ್ತಿದವರಿಗೆ ಹೌದು ಎನ್ನಲೇಬೇಕಿತ್ತು. ಅದು ವಾಸ್ತವವೂ ಆಗಿತ್ತು. ಸತ್ಯವೂ ಆಗಿತ್ತು.
ಇವೆಲ್ಲದಕ್ಕೂ ಉತ್ತರ ಎಂಬಂತೆ ಇದೀಗ ಅಕ್ಷಯ್ ಕುಮಾರ್ ಪುನಃ ಭಾರತೀಯ ನಾಗರಿಕರಾಗಿದ್ದಾರೆ. 2019ರಲ್ಲಿ ಅಕ್ಷಯ್ ಕುಮಾರ್ (Akshay Kumar) ಅವರು ಭಾರತದ ಪೌರತ್ವ (Indian Citizenship) ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಕೊವಿಡ್ (covid 19) ಕಾರಣದಿಂದ ಈ ಪ್ರಕ್ರಿಯೆ ವಿಳಂಬ ಆಯಿತು. ಈಗ ಭಾರತೀಯ ಪೌರತ್ವ ಸಿಕ್ಕ ವಿಚಾರವನ್ನು ಕೇಂದ್ರ ಸರ್ಕಾರ ನೀಡಿದ ಪೌರತ್ವದ ದಾಖಲೆಗಳನ್ನು ತೋರಿಸಿ ಹೇಳಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ಅಪ್ಪಟ ಇಂಡಿಯನ್ ಆಗಿದ್ದಾರೆ. ಹಲವು ವರ್ಷಗಳಿಂದ ಇದ್ದ ಕೆನಡಾ ಪೌರತ್ವವನ್ನು ಕೈಬಿಟ್ಟು ಭಾರತೀಯನಾಗಿದ್ಧಾರೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಭಾರತೀಯ ಪೌರತ್ವ ಸಿಕ್ಕಿರುವ ಬಗ್ಗೆ ನಟ ಮಾಹಿತಿ ಹಂಚಿಕೊಂಡಿದ್ದಾರೆ.
ಹೃದಯ ಮತ್ತು ಪೌರತ್ವ ಎರಡು ಹಿಂದೂಸ್ತಾನಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್ (jai hind) ಎಂದು ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹಾಗಾದರೆ ಇಷ್ಟು ದಿನ ಅವರು ಇಂಡಿಯನ್ ಆಗಿರಲಿಲ್ವಾ ಎನ್ನಬೇಡಿ.ಕೆಲವು ವರ್ಷಗಳ ಹಿಂದೆ ಅಕ್ಷಯ್ ಕುಮಾರ್ ಅವರ ಸತತ 15 ಚಿತ್ರಗಳು ಅಟ್ಟರ್ ಫ್ಲಾಪ್ ಆಗಿದ್ದವು. ನನ್ನ ಚಿತ್ರರಂಗದ ಜೀವನ ಮುಗಿಯಿತು ಎಂದುಕೊಂಡಿದ್ದ ಅಕ್ಷಯ್ ಕುಮಾರ್, ಹೊಸ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದರು. ಕೆಲಸ ಇರಲಿಲ್ಲ. ಆಗ ನನ್ನ ಒಬ್ಬ ಗೆಳೆಯನಿಗೆ ಒಂದು ಕೆಲಸ ಬೇಕು ಎಂದು ರಿಕ್ವೆಸ್ಟ್ ಮಾಡಿದೆ. ಆತ ನನಗೆ ಕೆನಡಾ ಪೌರತ್ವ ತೆಗೆದುಕೊಂಡರೆ ಇಲ್ಲಿ ಒಳ್ಳೆಯ ಉದ್ಯೋಗ ಸಿಗುತ್ತದೆ ಎಂದು ಹೇಳಿದ. ಹೊಟ್ಟೆಪಾಡಿಗಾಗಿ ನಾನು ಭಾರತೀಯ ಪೌರತ್ವ ಬಿಟ್ಟು,ಕೆನಡಾ ಪಾಸ್ಪೋರ್ಟ್ ತೆಗೆದುಕೊಂಡೆ. ಎರಡು ಸಿನಿಮಾ ರಿಲೀಸ್ ಬಾಕಿ ಇದ್ದವು. ಅದಾದ ಮೇಲೆ ನನಗೆ ಅವಕಾಶಗಳೇ ಇರಲಿಲ್ಲ. ಆದರೆ, ಪಾಸ್ಪೋರ್ಟ್ ತೆಗೆದುಕೊಳ್ಳುವಷ್ಟರಲ್ಲಿ ನನ್ನ ಅದೃಷ್ಟವೇ ಬದಲಾಗಿ ಹೋಗಿತ್ತು ಎಂದು ಹೇಳಿದ್ದರು ಅಕ್ಷಯ್ ಕುಮಾರ್.
ಅಕ್ಷಯ್ ಕುಮಾರ್ 2016ರ ನಂತರ ಸತತ ಹಿಟ್ ಕೊಡುತ್ತಲೇ ಬಂದ ಸ್ಟಾರ್ ನಟ. ತೀರಾ ಇತ್ತೀಚಿನವರೆಗೆ ರಾಣಾ ಪ್ರತಾಪ್ ಬರುವವರೆಗೆ ಅಕ್ಷಯ್ಗೆ ಸೋಲೇ ಇರಲಿಲ್ಲ. ಮಾಡಿದ ಎಲ್ಲ ಚಿತ್ರಗಳೂ ಹಿಟ್. ಅಷ್ಟು ಹೊತ್ತಿಗೆ ಅಕ್ಷಯ್ ಕುಮಾರ್ ಮೋದಿಯ ಸಂದರ್ಶನ ಮಾಡಿದರು. ಅಲ್ಲಿಂದ ನೆಟ್ಟಿಜನ್ಗಳ ಹಾವಳಿಯೂ ಜೋರಾಯ್ತು.
ಅಕ್ಷಯ್ ಕುಮಾರ್ ಭಾರತೀಯನೇ ಅಲ್ಲ. ಅವನು ಭಾರತೀಯ ಪರಂಪರೆ, ಸಂಸ್ಕೃತಿ ಬಗ್ಗೆ ಮಾತನಾಡ್ತಾನೆ ಎಂದು ನೆಟ್ಟಿಗರು ಶುರುವಿಟ್ಟುಕೊಂಡರು. ಇದೀಗ ಅಕ್ಷಯ್ ಕುಮಾರ್ ಮತ್ತೊಮ್ಮೆ ಇಂಡಿಯನ್ ಆಗುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದಂತಾಗಿದೆ.



