ಸ್ಟಾರ್ ನಟ ಅಜಿತ್ ಕುಮಾರ್ ದುಬೈನಲ್ಲಿ ನಡೆದ ಕಾರ್ ರೇಸ್‌ನಲ್ಲಿ ಗೆದ್ದು ಬೀಗಿದ್ದಾರೆ. ಮೂರನೇ ಸ್ಥಾನ ಪಡೆದು ಎಕೆ ಟೀಮ್ ಸಂಭ್ರಮಿಸಿದೆ. ಆಕ್ಸಿಡೆಂಟ್ ಆದರೂ ರೇಸ್‌ನಲ್ಲಿ ಪ್ರಶಸ್ತಿ ಗೆದ್ದಿರುವ ನಟ ಅಜಿತ್ ಇತಿಹಾಸ ಸೃಷ್ಟಿಸಿದ್ಧಾರೆ. ಬ್ರೇಕ್ ಫೇಲ್ ಆಗಿ, ಆಕ್ಸಿಡೆಂಟ್ ಆಗಿ ಬಚಾವ್ ಆಗಿದ್ದ ಅಜಿತ್, ದುಬೈ 24 ಹವರ್ಸ್ ಕಾರ್ ರೇಸ್ನ 911 ಜಿಟಿ3R ವಿಭಾಗದಲ್ಲಿ 3ನೇ ಸ್ಥಾನ ಪಡೆದು ಪ್ರಶಸ್ತಿ ಗೆದ್ದಿದ್ದಾರೆ. ನಟ ಅಜಿತ್ ಸಾಧನೆ ಕಂಡು ಅಭಿಮಾನಿಗಳು ಕೂಡ ಸಂಭ್ರಮಿಸಿದ್ದಾರೆ. ಅಜಿತ್ ಕುಮಾರ್ ಕೂಡ ಭಾರತ ಬಾವುಟ ಹಿಡಿದು ತನ್ನ ಟೀಮ್ ಜೊತೆ ಸಂಭ್ರಮಿಸಿದ್ದಾರೆ.
24H ಸರಣಿ ರೇಸ್ ಅಂದ್ರೆ 24 ಗಂಟೆಗಳ ಕಾಲ ನಿರಂತರವಾಗಿ ಕಾರನ್ನ ಓಡಿಸಬೇಕು. ಅದು ಸುಲಭದ ಮಾತಲ್ಲ. ಒಂದು ತಂಡದಲ್ಲಿ 3ರಿಂದ ನಾಲ್ವರು ರೇಸ್ ಡ್ರೈವರ್ಸ್ ಇರುತ್ತಾರೆ, ಒಬೊಬ್ಬರೂ ನಿರಂತರವಾಗಿ 6 ಗಂಟೆ ಡ್ರೈವ್ ಮಾಡಬೇಕು. ಈ ರೇಸ್‌ನಲ್ಲಿ 991 ಕೆಟಗರಿಯಲ್ಲಿ ನಟ ಅಜಿತ್ ಕುಮಾರ್ ಟೀಂ 3ನೇ ಸ್ಥಾನದ ಪ್ರಶಸ್ತಿ ಗೆದ್ದುಕೊಂಡಿದೆ.
ತರಬೇತಿ ಪರೀಕ್ಷೆ ಎದುರಿಸುತ್ತಿದ್ದ ವೇಳೆ ಅಜಿತ್ ಕಾರ್ ಆಕ್ಸಿಡೆಂಟ್ ಆಗಿತ್ತು. ವಿಡಿಯೋ ವೈರಲ್ ಆಗಿ, ಅಭಿಮಾನಿಗಳು ಆತಂಕಕ್ಕೀಡಾಗಿದ್ದರು. ಈಗ ಜಿಟಿ4 ಕೆಟಗರಿಯಲ್ಲಿ ಸ್ಪಿರಿಟ್ ಆಫ್ ದಿ ರೇಸ್ ಪ್ರಶಸ್ತಿ ಗೆದ್ದಿದ್ದಾರೆ. ರೇಸ್ ನಡೆಯುವಷ್ಟೂ ದಿನ ಸಿನಿಮಾ ಚಟುವಟಿಕೆ ನಿಲ್ಲಿಸುವ ನಟ ಅಜಿತ್, ಕಳೆದ 10 ವರ್ಷಗಳಿಂದ ಖುದ್ದಾಗಿ ಭಾಗಬಹಿಸಿರಲಿಲ್ಲ. ಅಜಿತ್ ಅವರ ತಂಡ ಇರುತ್ತಿತ್ತಾದರೂ, ಅಜಿತ್ ಖುದ್ದಾಗಿ ರೇಸ್ ಡ್ರೈವ್ ಮಾಡಿರಿಲಲ್ಲ. ಖುದ್ದು ರೇಸ್ ಕಾರ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಅಜಿತ್ ಹೊಸ ಇತಿಹಾಸ ಬರೆದಿದ್ದಾರೆ. ಭಾರತದ ಬಾವುಟ ಹಿಡಿದು ಕುಣಿದಾಡಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಟಯರು ಸಿನಿಮಾ ಜರ್ನಿಯ ಜೊತೆಗೆ ರಾಜಕೀಯದತ್ತ ಮುಖ ಮಾಡ್ತಾರೆ. ಇಲ್ಲವಾದ್ರೆ ಚಿತ್ರ ನಿರ್ದೇಶನ, ನಿರ್ಮಾಣದ ಚಿಂತನೆಯಲ್ಲಿ ಮುಳುಗ್ತಾರೆ. ಆದ್ರೆ ತಮಿಳು ನಟ ಅಜಿತ್ ಕುಮಾರ್ ಕಾರ್ ರೇಸ್ ಹುಚ್ಚಿಗೆ ಬಿದ್ದಿದ್ದಾರೆ. ಅಂದಹಾಗೆ ಅಜಿತ್ ಅವರಿಗೀಗ ವಯಸ್ಸು 50 ದಾಟಿದೆ.
ಅಜಿತ್ ಕುಮಾರ್ ಕೇವಲ ನಟ ಮಾತ್ರವಲ್ಲ ರೇಸರ್ ಕೂಡ ಎಂಬುದು ಅನೇಕರಿಗೆ ಗೊತ್ತಿದೆ. ನಟ ಅಜಿತ್ ಕುಮಾರ್ ಕಳೆದ ಕೆಲವು ತಿಂಗಳುಗಳಿಂದ ಕಾರ್ ರೇಸಿಂಗ್ ಪ್ರಾಕ್ಟೀಸ್ನಲ್ಲಿ ಬ್ಯುಸಿ ಆಗಿದ್ರು. 2010 ರ ನಂತರ ಕಾರ್ ರೇಸಿಂಗ್ ಕಡೆ ಮುಖ ಮಾಡದೆ ಸಿನಿಮಾ ಕಡೆ ಗಮನ ಹರಿಸಿದ ಅವರು ಇದೀಗ 15 ವರ್ಷಗಳ ನಂತರ ಮತ್ತೆ ತಮ್ಮ ಕನಸನ್ನು ಬೆನ್ನು ಹತ್ತಿ ಗೆದ್ದಿದ್ದಾರೆ. ಇದಕ್ಕಾಗಿ ನಟ ತೂಕ ಇಳಿಸಿಕೊಂಡು ಫಿಟ್ ಆಗಿ ಟ್ರೋಫಿ ಎತ್ತಿ ಹಿಡಿದಿದ್ದಾರೆ.
ಈ ರೇಸ್ ನೋಡುವುದಕ್ಕೆ ಪ್ರೇಕ್ಷಕರು ಕಡಿಮೆ. ಆದರೆ ಅಜಿತ್ ಇದ್ದಾರೆನ್ನುವ ಕಾರಣಕೆಕ ಈ ಬಾರಿ ದುಬೈನಲ್ಲಿ ನಡೆದ ರೇಸ್ ನೋಡಲು ಅಪಾರ ಸಂಖ್ಯೆಯಲ್ಲಿ ಅಜಿತ್ ಅಭಿಮಾನಿಗಳು ಕೂಡ ಭಾಗವಹಿಸಿದ್ರು. ಅಜಿತ್ ಗೆಲುವು ಕಂಡು ಸಂಭ್ರಮಿಸಿದ್ರು.



