ಅಜಿತ್ ಬೊಪ್ಪನಳ್ಳಿ (Ajith boppanalli). ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಎನ್ನಬಹುದು. ಬೊಪ್ಪನಳ್ಳಿ ವಿಡಿಯೋಗಳು (boppanalli videos) ಲಕ್ಷ ಲಕ್ಷ ವ್ಯೂವ್ಸ್ ಗಳಿಸುತ್ತವೆ. ಪ್ರಧಾನಿ ನರೇಂದ್ರ ಮೋದಿಯ (PM Narendra modi) ಅಭಿಮಾನಿ ಹಾಗೂ ವಿಡಂಬನೆ ಹಾಸ್ಯದ ಮೂಲಕ ಕಥೆ-ಅಭಿಪ್ರಾಯ ಹೇಳುವುದು ಬೊಪ್ಪನಳ್ಳಿ ಶೈಲಿ. ಇಂತಹ ಅಜಿತ್ ಬೊಪ್ಪನಳ್ಳಿ ಈಗ ಹೀರೋ ಆಗಿದ್ದಾರೆ. ಪಂಚಮವೇದ ವಿಶ್ವನಾಥ್ ಅವರ ಆಡೇ ನಮ್ ಗಾಡು (Ade nam god) ಚಿತ್ರದಲ್ಲಿ ಅಜಿತ್ ಬೊಪ್ಪನಳ್ಳಿ ಹೀರೋ. ಒಟ್ಟಾರೆ ಮೂವರು ನಾಯಕರಿದ್ದು, ಆಡಿನ ಜೊತೆ ಹೀರೋ ಆದ ದಾಖಲೆ ಬರೆದಿದ್ದಾರೆ ಅಜಿತ್ ಬೊಪ್ಪನಳ್ಳಿ.
ಆಡೇ ನಮ್ ಗಾಡು ಅನ್ನೋದೇ ಚಿತ್ರದ ಟೈಟಲ್. ಚಿತ್ರಕ್ಕೆ ಡೈರೆಕ್ಟರ್ ಪಂಚಮವೇದ (Panchamaveda) ಖ್ಯಾತಿಯ ವಿಶ್ವನಾಥ್ (Vishwanath). ಪಿಹೆಚ್ ವಿಶ್ವನಾಥ್ ಅರುಣೋದಯ (ರಮೇಶ್, ವಿಜಯಲಕ್ಷ್ಮಿ, ಶಿಲ್ಪಾ ನಟಿಸಿದ್ದ ಚಿತ್ರ) ನಂತರ ಕಮರ್ಷಿಯಲ್ ಚಿತ್ರಗಳನ್ನು ಮಾಡಿಲ್ಲ. ಹಾಗಂತ ಸುಮ್ಮನೆ ಕೂತಿದ್ದವರಲ್ಲ. ಪ್ರಯೋಗಾತ್ಮಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಶ್ರೀನಾಥ್ ಅಭಿನಯದ ಸುಳಿ ಚಿತ್ರದ ನಂತರ ಇದೀಗ ಮತ್ತೊಮ್ಮೆ ಆಕ್ಷನ್ ಕಟ್ ಹೇಳುತ್ತಿರುವ ವಿಶ್ವನಾಥ್, ಈ ಬಾರಿ ಆಡೊಂದನ್ನು ಹೀರೋ ಮಾಡಿ ಚಿತ್ರ ಮಾಡಿದ್ದಾರೆ.
ಚಿತ್ರವನ್ನು ಪ್ರೊ.ಬಸವರಾಜ್ ಮತ್ತು ರೇಣುಕಾ ಬಸವರಾಜ್ ನಿರ್ಮಾಣ ಮಾಡಿದ್ದು, ಆಡೇ ಚಿತ್ರದ ಹೀರೋ ಎಂದರೆ ತಪ್ಪಲ್ಲ. ಸುವರ್ಣ ನ್ಯೂಸ್ʻನ (Suvarna news) ಅಜಿತ್ ಬೊಪ್ಪನಳ್ಳಿ, ರಾಮ ರಾಮ ರೇ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಬಿ.ಸುರೇಶ್ (B suresh), ಸಾರಿಕಾ ರಾವ್, ಅನೂಪ್ ಶೂನ್ಯ ನಟಿಸಿದ್ದಾರೆ.
ವಿಶ್ವನಾಥ್ ಅವರ ಚಿತ್ರವನ್ನು ಅವರ ಈ ಹಿಂದಿನ ಚಿತ್ರಗಳಲ್ಲಿ ಹೀರೋ ಆಗಿದ್ದವರೇ ಪ್ರಮೋಟ್ ಮಾಡುತ್ತಿರುವುದು ವಿಶೇಷ. ಸಿನಿಮಾ ಈಗ ಥಿಯೇಟರುಗಳಲ್ಲಿದೆ.
ರಮೇಶ್ ಅರವಿಂದ್ (Ramesh aravind), ಶಿವಣ್ಣ (Shiva rajkumar), ಅಂಬರೀಷ್ (Ambaressh), ಸುಧಾರಾಣಿ (Sudharani) ಮೊದಲಾದವರಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ವಿಶ್ವನಾಥ್. ಪಂಚಮವೇದ, ಅರಗಿಣಿ (Aragini), ಶ್ರೀಗಂಧ (Shreegandha), ಅಂಡಮಾನ್ (Andaman), ಅರುಣೋದಯ (Arunodaya) ಮೊದಲಾದ ಹಿಟ್ ಸಿನಿಮಾ ಕೊಟ್ಟಿದ್ದ ವಿಶ್ವನಾಥ್, ಪುಟ್ಟಣ್ಣ ಕಣಗಾಲ್ (Puttanna Kanagal) ಗರಡಿಯ ನಿರ್ದೇಶಕರು. ಹೊಸಕಥೆಯ ಚಿತ್ರದೊಂದಿಗೆ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ ವಿಶ್ವನಾಥ್.



