ಮೊದಲನೆಯದ್ದು ನಿಶ್ಚಿತಾರ್ಥದ ಉಂಗುರ ಪ್ರಕರಣ. ಅದಾದ ಮೇಲೆ ಗಂಡ ಹೆಂಡತಿ ಇಬ್ಬರೂ ಸೋದರಳಿಯನ ಸಿನಿಮಾ ಪ್ರೋಗ್ರಾಮಿಗೆ ಒಟ್ಟಿಗೇ ಬಂದರು.
ಅದಾದ ಮೇಲೆ ಮಾವ ಬಚ್ಚನ್, ಸೊಸೆಯನ್ನ ದೂರ ಇಟ್ಟರು. ಈಗ ಗಂಡ ಹೆಂಡತಿ ಇಬ್ಬರೂ ಒಟ್ಟಿಗೇ ಬಂದಿದ್ಧಾರೆ. ಒಂದೇ ಕಾರ್ಯಕ್ರಮಕ್ಕೆ ಬಂದು ಒಟ್ಟಿಗೇ ನಿಂತಿದ್ದಾರೆ. ಆದರೆ, ಬಂದಿರೋದು ಮಾತ್ರ ಬೇರೆ ಬೇರೆ ಕಾರಿನಲ್ಲಿ. ಸಂಥಿಂಗ್ ಈಸ್ ರಾಂಗ್.
ಐಶ್ವರ್ಯಾ ರೈ. ವಿಶ್ವ ಸುಂದರಿ. ಮದುವೆಗೆ ಮೊದಲು ಕಾಂಟ್ರವರ್ಸಿಗಳಿದ್ದರೂ, ನಾಜೂಕಾಗಿಯೇ ನಿರ್ವಹಿಸಿದ್ದ ಐಶ್ವರ್ಯಾ ರೈ, ಈಗ 16 ವರ್ಷಗಳ ದಾಂಪತ್ಯದಲ್ಲಿ ಬಿರುಕು ಮೂಡಿಸಿಕೊಂಡಿದ್ದಾರಾ..? ಅಭಿಷೇಕ್ ಬಚ್ಚನ್ ಜೊತೆಗಿನ ದಾಂಪತ್ಯ ಕೊನೆಗೊಳಿಸಿಕೊಳ್ಳೋ ಹಂತಕ್ಕೆ ತಲುಪಿದ್ದಾರಾ.. ಇಂತಾದ್ದೊಂದು ಪ್ರಶ್ನೆ ಮೂಡುತ್ತಿವೆ. ಅದಕ್ಕೆ ಕಾರಣಗಳೂ ಹಲವಾರು.
ಇತ್ತೀಚೆಗೆ ‘ದಿ ಆರ್ಚೀಸ್’ ಸಿನಿಮಾದ ಪ್ರೀಮಿಯರ್ ನೈಟ್‌ನಲ್ಲಿ ಇಡೀ ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜಂಟಿಯಾಗಿ ಕಾಣಿಸಿಕೊಂಡಿದ್ದರು. ಆಗ ಈ ವದಂತಿಗಳು ನಿಂತಿದ್ದವು. ಆದರೆ ಅದಾದ ಮೇಲೆ ಮುಖೇಶ್ ಅಂಬಾನಿ ಮನೆಯಲ್ಲಿ ನಡೆದ ಪಾರ್ಟಿಗೆ ಐಶ್ವರ್ಯಾ ಮತ್ತು ಅಭಿಷೇಕ್ ಇಬ್ಬರೂ ಬೇರೆ ಬೇರೆ ಕಾರಿನಲ್ಲಿ ಬಂದಿದ್ದಾರೆ. ಇದು ವಿಚ್ಛೇಧನ ವದಂತಿಗೆ ಇನ್ನಷ್ಟು ಪುಷ್ಟಿ ಕೊಟ್ಟಿದೆ.
ನಟಿ ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಅವರ ಮನೆಯನ್ನು ಬಿಟ್ಟು ಹೊರ ಬಂದಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಐಶ್ವರ್ಯಾ ರೈ ಬಚ್ಚನ್ ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಬಚ್ಚನ್ ಕುಟುಂಬದ ಮನೆ ಜಲ್ಸಾದಿಂದ ಹೊರಬಂದಿದ್ದಾರೆ. ತಮ್ಮ ಸಮಯವನ್ನು ಅವರ ತಾಯಿ ವೃಂದಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಸಮಾನವಾಗಿ ಹಂಚುತ್ತಿದ್ದಾರೆ ಎಂದು ಹೇಳಲಾಗಿದೆ. ತನ್ನ ಅತ್ತೆ ಜಯಾ ಬಚ್ಚನ್ ಅವರೊಂದಿಗೆ ಸಂಬಂಧ ಕಡಿದುಕೊಂಡಿದ್ದಾರೆ.
ಇತ್ತೀಚೆಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರಿಬ್ಬರ ಕೈಲೂ ಎಂಗೇಜ್ʻಮೆಂಟ್ ರಿಂಗ್ ಮಾಯವಾಗಿತ್ತು. ಅಲ್ಲಿಂದಲೇ ವದಂತಿಗಳು ಶುರುವಾಗಿದ್ದವು. ಆಮೇಲೆ ಮಾವ ಅಮಿತಾಬ್ ಬಚ್ಚನ್ ತಮ್ಮ ಇನ್ʻಸ್ಟಾದಲ್ಲಿ.. ಐಶ್ವರ್ಯಾರನ್ನು ಅನ್ʻಫಾಲೋ ಮಾಡಿದ್ದರು. ಈ ಮಧ್ಯೆ ಅಮಿತಾಬ್ ತಮ್ಮ 50 ಕೋಟಿಗೂ ಹೆಚ್ಚು ಬೆಲೆ ಬಾಳುವ ಜಲ್ಸಾ ಬಂಗಲೆಯನ್ನು ಮಗಳು ಶ್ವೇತಾಗೆ ಗಿಫ್ಟ್ ಕೊಟ್ಟಿದ್ದರು. ಹೀಗೆ ಹಲವು ವಿಷಯಗಳಿಗೆ ಐಶ್ವರ್ಯಾ ಬೇಸರಗೊಂಡಿದ್ಧಾರೆ ಎನ್ನಲಾಗಿದೆ.
ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಬಚ್ಚನ್ ಕುಟುಂಬದಲ್ಲಿನ ಈ ಬಿರುಕಿಗೆ ಅತ್ತೆ- ಸೊಸೆ ಜಗಳವೇ ಕಾರಣ ಎನ್ನಲಾಗಿದೆ. ಐಶ್ವರ್ಯಾ ರೈ ಮತ್ತು ಜಯಾ ಬಚ್ಚನ್ ಇಬ್ಬರು ಒಬ್ಬರನ್ನೊಬ್ಬರು ಮಾತನಾಡಿಸುವುದಿಲ್ಲ. ಇದು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಿದೆ. ಜೊತೆಗೆ ಮನೆಯಲ್ಲಿ ಶ್ವೇತಾ ಬಚ್ಚನ್ ಶಾಶ್ವತವಾಗಿರುವುದು ಕೂಡ ಬಿರುಕಿಗೆ ಕಾರಣ ಎಂದು ವರದಿಗಳಿವೆ.
ಒಟ್ಟಿನಲ್ಲಿ ಬಾಲಿವುಡ್ ಬಿಗ್ ಬಿ ಫ್ಯಾಮಿಲಿಯಲ್ಲಿ ಬಿರುಕು ಹೆಚ್ಚುತ್ತಲೇ ಇದೆ ಎಂಬ ಸುದ್ದಿಗಳಿವೆ. ಈ ಹಿಂದೆಲ್ಲ ಇಂತಹ ಸುದ್ದಿಗಳು ಹರಡಿದಾಗ ಬಿಗ್ ಬಿಯವರೇ ಫುಲ್ ಸ್ಟಾಪ್ ಕೊಟ್ಟಿದ್ದರು. ಆದರೆ ಈ ಬಾರಿ ಬಿಗ್ ಬಿ ಕೂಡಾ ಬೇಸರಗೊಂಡಿದ್ದು, ಮಗ-ಸೊಸೆಯ ವಿಚ್ಚೇಧನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.



