ದುನಿಯಾ ವಿಜಯ್ ಅವರಿಂದ.. ಅವರ ಭೀಮ ಚಿತ್ರದಿಂದ ಆರಂಭವಾದ ಸೆನ್ಸೇಷನ್ ಹಿಟ್ ಚಿತ್ರಗಳ ಸರದಿ. ಭೀಮ ಗೆದ್ದ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ ಹಿಟ್ ಆಯ್ತು. ಭೀಮ ಚಿತ್ರ 20 ಕೋಟಿಗೂ ಹೆಚ್ಚು ಲಾಭ ಮಾಡಿದರೆ, ಕೃಷ್ಣಂ ಪ್ರಣಯ ಸಖಿಯೂ ಹೆಚ್ಚೂ ಕಡಿಮೆ ಅಷ್ಟೇ ಗಳಿಕೆ ಮಾಡಿದೆ. ಮುಂಗಾರು ಮಳೆ ದುನಿಯಾ ಮ್ಯಾಜಿಕ್ ರಿಪೀಟ್ ಆಗಿದೆ. ಇಬ್ಬರೂ ತಮ್ಮ ತಮ್ಮ ಜಾನರ್ʻಗಳಲ್ಲೇ ಗೆದ್ದಿದ್ದು ವಿಶೇಷ.
ಭೀಮ ಚಿತ್ರದ ಹಣೆಬರಹವನ್ನು ಸ್ವತಃ ವಿಜಯ್ ಅವರೇ ಬರೆದುಕೊಂಡರು. ಗಣೇಶ್ ಅವರನ್ನು ಶ್ರೀನಿವಾಸ ರಾಜು ಗೆಲ್ಲಿಸಿದರು. ವಿಜಯ್ ಅವರಿಗೆ ರವಿ ಬಸ್ರೂರು ಸಾಥ್ ಕೊಟ್ಟರೆ, ಗಣೇಶ್ ಅವರನ್ನು ಅರ್ಜುನ್ ಜನ್ಯ ಗೆಲ್ಲಿಸಿದರು. ಎರಡೂ ಚಿತ್ರಗಳಲ್ಲಿ ಅಂದರೆ ಭೀಮ ಚಿತ್ರದಲ್ಲಿ ಅಶ್ವಿನಿ ಹಾಗೂ ಪ್ರಿಯಾ ಶಠಮರ್ಷಣ ಗೆದ್ದರು. ಕೃಷ್ಣಂ ಪ್ರಣಯ ಸಖಿಯಲ್ಲಿ ಮಾಳವಿಕಾ ನಾಯರ್ ಮತ್ತು ಶರಣ್ಯ ಶೆಟ್ಟಿ ಕ್ಲಿಕ್ ಆದರು. ಒಟ್ಟಿನಲ್ಲಿ ಚಿತ್ರರಂಗದಲ್ಲೀಗ ಕಳೆದ ಎರಡು ವಾರದಿಂದ ಚಿತ್ರರಂಗದಲ್ಲಿ ಶುಭ ಸುದ್ದಿಗಳಿವೆ. ಹಿಂದಿಯಲ್ಲಿ ಸ್ತ್ರೀ 2 ಚಿತ್ರ ಬಾಕ್ಸಾಫೀಸ್ʻನಲ್ಲಿ ಗೆಲುವು ಸಾಧಿಸಿದೆ. ಸಂಕಷ್ಟದಲ್ಲಿರೋದು ವರ್ಷದ ಆರಂಭದಲ್ಲಿ ಸಂಚಲನ ಮೂಡಿಸಿದ್ದ ಮಲಯಾಳಂ ಚಿತ್ರರಂಗ. ಇನ್ನು ಈ ವಾರ ಕನ್ನಡದ ಎರಡು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗಿವೆ. ಪೆಪೆ ಮತ್ತು ಲಾಫಿಂಗ್ ಬುದ್ದ ಚಿತ್ರಗಳು ಈ ವಾರ ರಿಲೀಸಾಗಿವೆ.
ಲಾಫಿಂಗ್ ಬುದ್ಧ : ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ಪೋಷಕ ನಟರಾಗಿ ವ್ಹಾವ್ ಎನಿಸಿದ್ದ ಪ್ರಮೋದ್ ಶೆಟ್ಟಿ ಅವರನ್ನು ಹೀರೋ ಮಾಡಿರುವುದು ನಿರ್ದೇಶಕ ಭರತ್ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ. ಇದು ಪೊಲೀಸರು ಮತ್ತು ಡೊಳ್ಳು ಹೊಟ್ಟೆಯ ಕಥೆ. ಚಿತ್ರಕ್ಕಾಗಿ ಪ್ರಮೋದ್ ಶೆಟ್ಟಿ ಅವರು 30 ಕೆಜಿ ಹೆಚ್ಚಿಸಿಕೊಂಡು, ನಂತರ ಇಳಿಸಿದ್ದಾರೆ. ಪ್ರಮೋದ್ ಶೆಟ್ಟಿ ಅವರ ಜೋಡಿಯಾಗಿ ತೇಜು ಬೆಳವಾಡಿ, ಸುಂದರ್ ರಾಜ್, ದಿಗಂತ್ ಮಂಚಾಲೆ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ.
ಪೆಪೆ : ವಿನಯ್ ರಾಜ್ ಕುಮಾರ್ ಅವರು ‘ಪೆಪೆ’ ಚಿತ್ರದಲ್ಲಿ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾಗೆ ‘ಎ’ ಪ್ರಮಾಣಪತ್ರ ನೀಡಲಾಗಿದೆ. ವಿನಯ್ ಅವರ ಜೊತೆ ಮಯೂರ್ ಪಟೇಲ್, ಕಾಜಲ್ ಕುಂದರ್, ಮೇದಿನಿ ಕೆಳಮನೆ, ಯಶ್ ಪಟೇಲ್ ಮೊದಲಾದವರು ನಟಿಸಿದ್ದಾರೆ. ಶ್ರೀಲೇಶ್ ನಾಯರ್ ನಿರ್ದೇಶನದ ಚಿತ್ರವಿದು. ಉದಯ್ ಶಂಕರ್, ಶ್ರೀರಾಮ್ ಕೋಲಾರ್ ನಿರ್ಮಾಪಕರು.
ವಿನಯ್ ರಾಜ್ ಕುಮಾರ್ ಅವರ ರಗಡ್ ಲುಕ್, ಕೋಪ, ಆವೇಶ.. ಎಲ್ಲವೂ ಬೆರಗು ಹುಟ್ಟಿಸಿದೆ. ಪ್ರದೀಪ್ ಅಲಿಯಾಸ್ ಪೆಪೆ ಎಂಬ ಪಾತ್ರವನ್ನು ವಿನಯ್ ಜೀವಿಸಿದ್ದಾರೆ.
ಇವುಗಳನ್ನು ಬಿಟ್ಟರೆ ಕೇದಾರ್ʻನಾಥ್ ಕುರಿಫಾರಂ, ದಿ ರೂಲರ್ಸ್, ಟೇಕ್ವಾಂಡೋ ಗರ್ಲ್ ಹಾಗೂ ಮೈ ಹೀರೋ ಚಿತ್ರಗಳೂ ಬಿಡುಗಡೆಯಾಗುತ್ತಿವೆ. ಈ ಚಿತ್ರಗಳಿಗೆ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ.
ತೆಲುಗಿನ ನಾನಿ ನಟನೆಯ ಸರಿಪೋಧ ಶನಿವಾರಂ (ಕನ್ನಡದಲ್ಲಿ ಸರಿಯಾದ ಶುಕ್ರವಾರ) ಮತ್ತು ಅಹೋ ಮಾರ್ಕ ಎಂಬ ಸಿನಿಮಾ ಕೂಡಾ ತೆರೆ ಕಂಡಿದೆ. ದರ್ಶನ್ ಅಭಿಯದ ಕರಿಯಾ ಕೂಡಾ ಈ ವಾರ ಥಿಯೇಟರುಗಳಲ್ಲಿ ಲಗ್ಗೆ ಇಡುತ್ತಿದೆ.



