ಸಿದ್ದರಾಮಯ್ಯ (CM Siddaramaiah) ಮತ್ತು ಡಾ.ರಾಜ್ (Dr Rajkumar) ಒಂದೇ ಕಾಡಿನವರು. ಸಿದ್ದರಾಮಯ್ಯ ಸಿನಿಮಾ ನೋಡೋದು ಕಡಿಮೆ ಆದರೂ ಅಪರೂಪವೇನಲ್ಲ. ಇತ್ತೀಚೆಗೆ ನೋಡುತ್ತಿಲ್ಲವಾದರೂ ಡಾ.ರಾಜ್ (Dr Rajkumar) ಚಿತ್ರಗಳೆಂದರ ಅಚ್ಚುಮೆಚ್ಚು. ಡಾ.ರಾಜ್ ಅವರ ಹಲವು ಚಿತ್ರಗಳನ್ನು ಆಗಾಗ್ಗೆ ನೆನಪಿಸಿಕೊಳ್ಳೋ ಸಿದ್ದರಾಮಯ್ಯ, ಬಿಡುವಾಗಿದ್ದ ಕಾಲದಲ್ಲಿ ಒಂದೊಂದು ಸಿನಿಮಾವನ್ನೂ ಹಲವು ಬಾರಿ ನೋಡ್ತಿದ್ರಂತೆ. ಅದರಲ್ಲೂ ಡಾ.ರಾಜ್ ಸಿನಿಮಾಗಳನ್ನು ಒಂದೇ ಸಲ ನೋಡಿದ್ರೆ ಸಮಾಧಾನವೇ ಆಗ್ತಾ ಇರಲಿಲ್ಲವಂತೆ. ಮನಸ್ಸಿಗೆ ತೃಪ್ತಿಯಾಗುವವರೆಗೆ ಹಲವು ಬಾರಿ ಒಂದೇ ಸಿನಿಮಾ ನೋಡ್ತಿದ್ರಂತೆ. ಆದರೆ ಈ ಅವಕಾಶ ಇದ್ದದ್ದು ಡಾ.ರಾಜ್ ಚಿತ್ರಗಳಿಗೆ ಮಾತ್ರ. ಇದನ್ನು ಸಿದ್ದರಾಮಯ್ಯ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.
ಸನಾದಿ ಅಪ್ಪಣ್ಣ (Sanadi Appanna) . ಕನ್ನಡ ಚಿತ್ರದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಡಾ.ರಾಜ್(Dr Rajkumar) , ಜಯಪ್ರದ (Actress Jayaprada), ಬಾಲನಟರಾಗಿ ಡಾ.ಪುನೀತ್ ರಾಜ್‍ಕುಮಾರ್ (Puneeth Rajkumar) (ಚಿತ್ರದಲ್ಲಿ ಅಶೋಕ್ ಅಪ್ಪಣ್ಣನ ಮಗ. ಆ ಪಾತ್ರದಲ್ಲಿ ಬಾಲನಟನಾಗಿ ಪುನೀತ್ ನಟಿಸಿದ್ದಾರೆ) ಅಭಿನಯಿಸಿದ್ದ ಚಿತ್ರಕ್ಕೆ, ಬಿಸ್ಮಿಲ್ಲಾ ಖಾನ್ ಷಹನಾಯ್ ಕೂಡಾ ನುಡಿಸಿದ್ದರು. ಕನ್ನಡ ಚಿತ್ರಪ್ರೇಮಿಗಳ ಹಾರ್ಟ್ ಫೇವರಿಟ್ ಸಿನಿಮಾ ಮತ್ತು ಹಾಡುಗಳಲ್ಲಿ ಸನಾದಿ ಅಪ್ಪಣ್ಣ ಚಿತ್ರಕ್ಕೆ ಖಾಯಂ ಸ್ಥಾನವಿದೆ. ಆ ಚಿತ್ರಕ್ಕೆ ಸಿದ್ದರಾಮಯ್ಯ ಅವರ ಹೃದಯದಲ್ಲಿಯೂ ವಿಶೇಷ ಸ್ಥಾನಮಾನ ಇದೆ.
ನನಗೆ ರಾಜ್ ಕುಮಾರ್ ಅವರ ಸಿನಿಮಾವನ್ನು ಬರಿ ಒಂದು ಸಾರಿ ನೋಡಿದರೆ ಸಮಾಧಾನ ಆಗುತ್ತಿರಲಿಲ್ಲ. ಅದಕ್ಕೇ ಪದೇ ಪದೇ ನೋಡುತ್ತಿದ್ದೆ ಎಂದಿರುವ ಸಿದ್ದರಾಮಯ್ಯ, ಈ ಮಾತು ಹೇಳುವುದಕ್ಕೆ ಕಾರಣವಾಗಿದ್ದು ಕುಳುವ (Kuluva comunity) ಸಮಾಜದ ವತಿಯಿಂದ ನಡೆದ ಒಂದು ಕಾರ್ಯಕ್ರಮ. ಕುಳುವ ಸಮಾಜದವರ ಕಾರ್ಯಕ್ರಮದಲ್ಲಿ ಡಾ.ರಾಜ್ ಮತ್ತು ಸನಾದಿ ಅಪ್ಪಣ್ಣ ನೆನಪಾಗಿದ್ದಕ್ಕೆ ಕಾರಣ ಸಮಾಜದ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮಾಜಗಳಲ್ಲಿ ಕುಳುವ ಸಮುದಾಯವೂ ಒಂದು. ಆ ಸಮುದಾಯಕ್ಕೆ ಸೇರಿದವರು ಸನಾದಿ ಅಪ್ಪಣ್ಣ. ಆ ಕುಳುವ ಸಮಾಜಕ್ಕೆ ಸೇರಿದ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಡಾ.ರಾಜ್ಕುಮಾರ್ ಅಭಿನಯದ ‘ಸನಾದಿ ಅಪ್ಪಣ್ಣ’ ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸನಾದಿ ಅಪ್ಪಣ್ಣ ಕೂಡ ಕುಳುವ ಸಮಾಜದವರು. ಡಾ.ರಾಜ್ ಕುಮಾರ್ ಅವರ ಅಭಿನಯದ ಸನಾದಿ ಅಪ್ಪಣ್ಣ ಸಿನಿಮಾವನ್ನು ನಾನು ಹಲವು ಬಾರಿ ನೋಡಿದ್ದೇನೆ. ನನಗೆ ರಾಜ್ ಕುಮಾರ್ ಅವರ ಸಿನಿಮಾವನ್ನು ಬರಿ ಒಂದು ಸಾರಿ ನೋಡಿದರೆ ಸಮಾಧಾನ ಆಗುತ್ತಿರಲಿಲ್ಲ. ಅದಕ್ಕೇ ಪದೇ ಪದೇ ನೋಡುತ್ತಿದ್ದೆ ಸಿಎಂ ಸಿದ್ದರಾಮಯ್ಯ ಸಿನಿಮಾವನ್ನು ಉದಾಹರಣೆಯಾಗಿಟ್ಟುಕೊಂಡು ಕುಳುವ ಸಮಾಜದ ಬಗ್ಗೆ ಮಾತಾಡಿದ್ದಾರೆ.
ಕುಳುವ ಸಮುದಾಯದವರ ಅತಿ ದೊಡ್ಡ ಬೇಡಿಕೆ ಎಂದರೆ ತಮ್ಮ ಸಮಾಜವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆಯಬಾರದು ಎಂಬುದು. ಇದರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕುಳುವ ಸಮಾಜದ ಹಲವರಲ್ಲಿ ತಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗೆ ಇಡಬಹುದು ಎನ್ನುವ ಆತಂಕ ಹಲವರಲ್ಲಿದೆ. ಆದರೆ, ನಾನು ಹೇಳ್ತಾ ಇದ್ದೇನೆ. ಆ ಆತಂಕ ಬೇಡ ಎಂದು ಭರವಸೆ ನೀಡಿದ್ದಾರೆ. ಕುಳುವ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



