ಇತ್ತೀಚೆಗಷ್ಟೇ ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ಸಿನಿಮಾ ಘೋಷಿಸಿದ್ದ ಪೀಪಲ್ ಮೀಡಿಯಾ ಫ್ಯಾಕ್ಟರಿ, ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಲ್ಲೂ ಸಿನಿಮಾ ಘೋಷಿಸಿದೆ. ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ನಂತರ ಗಣೇಶ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಟಾಲಿವುಡ್ನ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜತೆಗೆ ಗಣೇಶ್ ಹೊಸ ಸಿನಿಮಾ ಮಾಡಲಿದ್ದಾರೆ.
#PMF49 ಚಿತ್ರದಲ್ಲಿ ಗಣೇಶ್ ಹೀರೋ. ‘ಕಾರ್ತಿಕೇಯ 2’, ‘ವೆಂಕಿ ಮಾಮ’, ‘ಓ ಬೇಬಿ’, ‘ಧಮಾಕಾ’ ದಂತಹ ಹಿಟ್ ಚಿತ್ರಗಳನ್ನು ಕೊಟ್ಟಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಇದೀಗ ಕನ್ನಡದಲ್ಲೂ ಎರಡು ಸಿನಿಮ ಮಾಡ್ತಿದೆ. ಒಂದು ಶ್ರೀಮುರಳಿ ಜೊತೆ, ಇನ್ನೊಂದು ಗಣೇಶ್ ಜೊತೆ.
ತೆಲುಗಿನ ನಿರ್ಮಾಣ ಸಂಸ್ಥೆ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು ಒಂದ್ಕಡೆಯಾದರೆ, ಇನ್ನೊಂದು ಕಡೆ ಗಣೇಶ್ ಕೂಡ ಟಾಲಿವುಡ್‌ಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಅಂದರೆ, ಈ ಸಿನಿಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿಯೂ ನಿರ್ಮಾಣ ಆದರೂ ಅಚ್ಚರಿ ಪಡೆಬೇಕಿಲ್ಲ. ತೆಲುಗು ಸಿನಿಮಾಗಳನ್ನು ನಿರ್ಮಿಸುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಮುಂದಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುವ ಆಲೋಚನೆ ಇಟ್ಟುಕೊಂಡಿದೆ.
ಟಿಜಿ ವಿಶ್ವ ಪ್ರಸಾದ್ ನೇತೃತ್ವದ ಈ ಸಂಸ್ಥೆಯು ಒಳ್ಳೆಯ ಕಥೆ ಹಾಗೂ ಅತ್ಯಾಧುನಿಕ ಗುಣಮುಟ್ಟದ ನಿರ್ಮಾಣದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶಿಸುತ್ತಿದೆ. ಪ್ರಸಿದ್ಧ ಡ್ಯಾನ್ಸ್ ಕೊರಿಯೋಗ್ರಾಫರ್ ಧನಂಜಯ್ ಈ ಸಿನಿಮಾಗೆ ನಿರ್ದೇಶಕ. ಗಣೇಶ್ ಜೊತೆ ಮಾಡುತ್ತಿರುವ ಈ ಚಿತ್ರ, ಧನಂಜಯ್ ಅವರಿಗೆ ಮೊದಲ ಸಿನಿಮಾ ಕೂಡಾ ಹೌದು.
ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯ ಮಾಲೀಕ ಟಿಜಿ ವಿಶ್ವ ಪ್ರಸಾದ್ ಒಳ್ಳೆಯ ಕಥೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದೇ ಫಾರ್ಮೂಲವನ್ನು ಇಟ್ಟುಕೊಂಡು ಕನ್ನಡಕ್ಕೂ ಬಂದಿದ್ದಾರೆ. ಹೀಗಾಗಿ ಮುಂದಿ ದಿನಗಳಲ್ಲಿ ವಿಶ್ವ ಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಮನ್ನಣೆ ಸಿಗಬಹುದು. ಗೋಲ್ಡನ್ ಸ್ಟಾರ್ ಗಣೇಶ್ 49ನೇ ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದಾರೆ.



