ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ..
ಭಟ್ಟರು ಬರೆದಿರುವ ಈ ಹಾಡನ್ನು ಕೇಳದವರಾರು. ಆದರೆ ಹುಟ್ಟೂರು ಬಿಡುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗಲ್ಲ. ಆಕಾಶದೆತ್ತರಕ್ಕೆ ಬೆಳೆದರೂ ಹುಟ್ಟೂರಿನ ತಾಕತ್ತೇ ಬೇರೆ. ದುನಿಯಾ ವಿಜಯ್ ಅವರೂ ಅಷ್ಟೆ. ಸ್ಟಾರ್ ನಟರಾಗಿರಲಿ.. ಕೋಟಿ ಕೋಟಿಗಳ ಒಡೆಯರಾಗಿರಲಿ.. ಅಲ್ಲೆಲ್ಲೋ ಹುಟ್ಟಿ ಬೆಳೆದ ಊರು, ಸ್ಮಮ್ಮಿನ ಪುಟ್ಟ ಮನೆ, ಬೈಟು ಕಾಫಿ ಕುಡಿಯುತ್ತಿದ್ದ ಜಾಗ, ಕೀಟಲೆ ಮಾಡುತ್ತಿದ್ದ ಗೆಳೆಯರು..ಎಲ್ಲರನ್ನೂ ನೆನಪಿಸಿಕೊಂಡಿದ್ದಾರೆ.
ಕುಂಬಾರನಹಳ್ಳಿ. ಆನೇಕಲ್ ಬಳಿ ಇರುವ ಪುಟ್ಟ ಹಳ್ಳಿ. ದುನಿಯಾ ವಿಜಯ್ ಅವರ ಹುಟ್ಟೂರು. ಅಲ್ಲೀಗ ದುನಿಯಾ ವಿಜಯ್ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡು ಓಡಾಡುತ್ತಿದ್ಧಾರೆ. ನಟ ವಿಜಯ್ ಹುಟ್ಟೂರು ಆನೇಕಲ್ನ ಕುಂಬಾರನಹಳ್ಳಿ. ಓದು ಬರಹ ಕಲಿತದ್ದು ಇಲ್ಲೇ. ವಿಜಯ್ ರ ಚಿಕ್ಕಪ್ಪ ದೊಡ್ಡಪ್ಪ ಸೇರಿ ಇಡೀ ಫ್ಯಾಮಿಲಿ ಇರೋದು ಇದೇ ಊರಿನಲ್ಲೇ. ಹಿರಿಯರನ್ನು ಕಂಡು ನಮಸ್ಕರಿಸಿ ಆಶೀರ್ವಾದ ಪಡೆದ ವಿಜಯ್, ಹಳೆಯ ದೋಸ್ತ್ʻಗಳನ್ನೂ ಭೇಟಿ ಮಾಡಿ ಖುಷಿಪಟ್ಟಿದ್ದಾರೆ.
ನಟ ವಿಜಯ್ ತಮ್ಮ ಊರಿನಲ್ಲಿ ಸುತ್ತಾಟ ನಡೆಸುತ್ತಿರುವ, ತಾವೊಬ್ಬರು ನಟ ಎಂಬ ಹಮ್ಮುಬಿಮ್ಮು ತೊರೆದು ಊರ ಮಂದಿ ಜೊತೆ ಒಬ್ಬರಾಗಿದ್ದಾರೆ. ಎಲ್ಲರ ಜತೆ ಚೆನ್ನಾಗಿ ಮಾತಾಡಿ, ಎಲ್ಲರ ಜತೆ ನಗುನಗುತ್ತ ಬೆರೆತು ಓಡಾಡಿರುವ ಈ ವೀಡಿಯೋ ಈಗ ಎಲ್ಲಡೆ ವೈರಲ್ ಆಗುತ್ತಿದೆ.
ದುನಿಯಾ ವಿಜಯ್ ಇದೇ ೨೦ನೇ ತಾರೀಕು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ಧಾರೆ. ಈಗಾಗಲೇ ಫ್ಲೆಕ್ಸ್ ಕಟ್ಟುವ ಹುಚ್ಚು ಸಾಹಸ ಬೇಡ. ಅಭಿಮಾನ ಇರಲಿ ಎಂದು ವಿಜಯ್ ಮನವಿ ಮಾಡಿದ್ದಾರೆ.



