ಹಿಂಡನ್ ಬರ್ಗ್ ಕಂಪೆನಿ ದಿಢೀರ್ ಕ್ಲೋಸ್ ಆಗ್ತಾ ಇದೆ. 2017ರಲ್ಲಿ ಆರಂಭಿಸಿದ್ದ ಈ ಹೂಡಿಕೆ ಸಂಶೋಧನಾ ಸಂಸ್ಥೆಯನ್ನು ಕ್ಲೋಸ್ ಮಾಡ್ತಿದ್ದೇನೆ ಸಂಸ್ಥಾಪಕ ಆ್ಯಂಡರ್ಸನ್ ಘೋಷಿಸಿದ್ದಾರೆ. ಅವರ ಕೆಲಸಗಳೆಲ್ಲ ಮುಗಿದ್ವಂತೆ. ಅಂದಹಾಗೆ ಈ ಕಂಪೆನಿಯ ಇನ್ನೊಂದು ಹೆಗಲು ಸೊರೋಸ್. ಈತ ಸುಮಾರು ವರ್ಷಗಳಿಂದ ಭಾರತದ ಕಂಪೆನಿಗಳ ವಿರುದ್ಧ ಈ ರೀತಿಯ ಸುದ್ದಿಗಳನ್ನೇ ಮಾಡ್ಕೊಂಡು ಬರ್ತಾ ಇರೋ ವ್ಯಕ್ತಿ. ಅಲ್ಲದೆ, ಭಾರತದ ಬಗ್ಗೆ ಕೆಟ್ಟ ನರೇಟಿವ್ ಮಾಡ್ತಾ ಇರೋ ಉದ್ಯಮಿ. ಈತ ಹೆಸರೋದಕ್ಕೆ ಕಾರಣವೂ ಇದೆ.
ಇಷ್ಟಕ್ಕೂ ಈ ಕಂಪೆನಿ ಎಷ್ಟು ಸೀಕ್ರೆಟ್ ಆಗಿತ್ತು ಅಂದ್ರೆ, ಈ ಕಂಪೆನಿಯ ಅಡ್ರೆಸ್ ಕೂಡಾ ಗೊತ್ತಿರಲಿಲ್ಲ. ಈ ಕಂಪೆನಿಗೊಬ್ಬ ಚೀಫ್ ಇದ್ದಾನೆ, ಆತನ ಹೆಸರು ನಾಥನ್ ಆಂಡರ್ಸನ್ ಅನ್ನೋದು ಗೊತ್ತಾಗಿದ್ದು, ಈಗ ಕಂಪೆನಿ ಡೋರ್ ಕ್ಲೋಸ್ ಮಾಡ್ತಿದ್ದೇವೆ ಅಂತಾ ಘೋಷಣೆ ಮಾಡಿದಾಗ. ಈ ಕಂಪೆನಿಯವರು ಒಂದು ಕೆಲಸ ಮಾಡ್ತಾ ಇದ್ರು. ಅದನ್ನ ಶಾರ್ಟ್ ಸೆಲ್ಲಿಂಗ್ ಸ್ಟ್ರಾಟಜಿ ಅಂತಾರೆ. ಶಾರ್ಟ್ ಸೆಲ್ಲಿಂಗ್ ತಂತ್ರ ಏನಂದ್ರೆ, ಕಂಪೆನಿಯ ಷೇರುಗಳ ಮೌಲ್ಯ ಕುಸಿಯುವಂತೆ ಮಾಡಿ, ಷೇರು ದರ ಕುಸಿದಾಗ ಖರೀದಿಸುವುದು. ನಂತರ ಷೇರು ಮೌಲ್ಯ ಹೆಚ್ಚಾದಾಗ ಮಾರಾಟ ಮಾಡುವುದು. ಇದಕ್ಕಾಗಿ ಹಿಂಡನ್ ಬರ್ಗ್ ಕೆಲವು ಕಂಪೆನಿಗಳನ್ನು ಟಾರ್ಗೆಟ್ ಮಾಡಿ, ಸುದ್ದಿ ಹಬ್ಬಿಸಿ.. ದರ ಕುಸಿಯುವಂತೆ ಮಾಡುತ್ತಿತ್ತು. ಮೌಲ್ಯ ಕುಸಿದಾಗ ಖರೀದಿಸಿ, ನಂತರ ಮೌಲ್ಯ ಹೆಚ್ಚಾದಾಗ ಮಾರಾಟ ಮಾಡಿ ಲಾಭ ಮಾಡುತ್ತಿತ್ತು.
ಹಂಗಂತ ಈತ ಡೋರ್ ಕ್ಲೋಸ್ ಮಾಡೋದ್ರಿಂದ ಕೆಲಸ ಕಳ್ಕೊಂಡೋವ್ರು ಎಷ್ಟ ಜನ ಗೊತ್ತಾ..? ಜಸ್ಟ್ 11 ಜನ. ಆ 11 ಜನ, ಸುಮಾರು ಜನರ ಕೈಲಿ ಕೆಲಸ ಮಾಡಿಸ್ಕೊಳ್ತಾ ಇದ್ರು. ಅದು ಅಫಿಶಿಯಲ್ ಅಲ್ಲ. ಈ ಕಂಪೆನಿಯಿಂದ ಜಗತ್ತಿನ 100ಕ್ಕೂ ಹೆಚ್ಚು ಉದ್ಯಮಿಗಳು ಕಳ್ಕೊಂಡಿರೋದು ಲಕ್ಷ ಲಕ್ಷ ಕೋಟಿ ಡಾಲರ್ ಕಳ್ಕೊಂಡಿದ್ದಾರೆ.
ಈ ಹಿಂಡನ್ ಬರ್ಗ್ ಕಂಪೆನಿ ಹೆಸರನ್ನ ಭಾರತೀಯರು ದೊಡ್ಡದಾಗಿ ಕೇಳಿದ್ದು ಅದಾನಿ ಕಂಪೆನಿ ವಿರುದ್ಧದ ಆರೋಪ ಮಾಡಿದಾಗ. ಅಮೆರಿಕದ ಹಿಂಡನ್ ಬರ್ಗ್ ಕಂಪೆನಿ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯ ಪಾತಾಳಕ್ಕೆ ಕುಸಿಯುವಂತೆ ಮಾಡಿತ್ತು. ಆ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆ ಇದೀಗ ಬಾಗಿಲು ಬಂದ್ ಮಾಡ್ಕೊಳ್ಳೋಕೆ ಮುಂದಾಗಿದೆ.
ಈ ಹಿಂಡನ್ ಬರ್ಗ್ ಕಂಪೆನಿ ಬಗ್ಗೆ ಹಲವು ವರ್ಷಗಳಿಂದ ಅನುಮಾನಗಳಿವೆ. ಯಾಕಂದ್ರೆ ಆ ಕಂಪೆನಿ ಯಾವ ಕಂಪೆನಿಯನ್ನ ಟಾರ್ಗೆಟ್ ಮಾಡುತ್ತೋ.. ಅದು ಆಯಾ ದೇಶದ ದೊಡ್ಡ ಕಂಪೆನಿಯೇ ಆಗಿರುತ್ತೆ. ಅಂತಹ ಕಂಪೆನಿಗಳನ್ನೇ ಯಾಕೆ ಟಾರ್ಗೆಟ್ ಮಾಡುತ್ತೆ ಅನ್ನೋದಕ್ಕೆ ಸಾಕ್ಷಿಗಳೂ ಸಿಕ್ಕಲ್ಲ. ಆಧಾರವೂ ಇರಲ್ಲ. ಆದರೆ ಹಿಂಡನ್ ಬರ್ಗ್ ರಿಪೋರ್ಟ್‌ನ್ನ ಒಂದು ಚೆಂದದ ನರೇಟಿವ್ ಕೊಟ್ಟು ಜಗತ್ತಿಗೆ ತಲುಪಿಸ್ತಾರೆ.
ಈ ಹಿಂದೆ ಬ್ರಿಟನ್ನಿನ ಪೌಂಡ್ ವಿರುದ್ಧ ಸುದ್ದಿ ಮಾಡಿದಾಗ, ಬ್ರಿಟನ್ನಿನ ಆರ್ಥಿಕತೆ ನೆಲ ಕಚ್ಚಿತ್ತು. ಇಡೀ ಯೂರೋಪಿನ ಆರ್ಥಿಕತೆ ಉಲ್ಟಾಪಲ್ಟಾ ಆಗಿತ್ತು. ಅದು ಇವತ್ತಿಗೂ ಚೇತರಿಸಿಕೊಂಡಿಲ್ಲ. ಆದರೆ, ಆ ಪೌಂಡ್ ಕುಸಿದಾಗ ಹಿಂಡನ್ ಬರ್ಗ್‌ನವರಿಗೆ ಲಾಭವಾಗಿತ್ತು. ಆವತ್ತಿನಿಂದ ಈ ಕಂಪೆನಿ ಮೇಲೆ ಒಂದು ಡೌಟ್ ಅಂತೂ ಇದೆ.
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಮಾಡೋಕೆ ಇನ್ನೇನು ಕೆಲವೇ ಕೆಲವು ದಿನಗಳಿವೆ ಅನ್ನೋವಾಗ ಈ ನಿರ್ಧಾರ ಮಾಡಿ, ಕ್ಲೋಸ್ ಕೂಡಾ ಮಾಡಿದೆ ಹಿಂಡನ್ ಬರ್ಗ್. ಕಾರಣ ಇಷ್ಟೇ, ಟ್ರಂಪ್, ಈ ಕಂಪೆನಿನೂ ಸೇರಿದಂತೆ ಕೆಲವು ಕಂಪೆನಿಗಳ ಆಕ್ಟಿವಿಟಿ ಬಗ್ಗೆ ಸೀರಿಯಸ್ಸಾಗಿ ತನಿಖೆ ಮಾಡ್ಸೋದಾಗಿ ಘೋಷಿಸಿದ್ದಾರೆ. ಆ ತನಿಖೆಗೆ ಹೆದರಿ ಈ ಕಂಪೆನಿ ಇನ್ಮೇಲೆ ಕೆಲಸ ಮಾಡಲ್ಲ, ಕಂಪೆನಿಯೂ ಇರಲ್ಲ ಅಂತಾ ಹೇಳ್ತಾ ಗೊತ್ತಿಲ್ಲ.
ಅಂದಹಾಗೆ ಈ ಕಂಪೆನಿ ಯಾವ ಕಂಪೆನಿಗಳ ಬಗ್ಗೆ ನೆಗೆಟಿವ್ ರಿಪೋರ್ಟ್ ಮಾಡುತ್ತೋ.. ಆ ಕಂಪೆನಿಯ ಷೇರುಗಳು ಢಮಾರ್ ಆಗ್ತವೆ. ಆಮೇಲೆ ಪಿಕಪ್ ಆಗ್ತವೆ. ಲಾಭ ಮಾಡ್ತವೆ. ಆ ಲಾಭ ಮಾಡ್ಕೊಳ್ಳೋ ಕಂಪೆನಿಗಳು ಯಾವುವು ಅಂದ್ರೆ, ಇದೇ ಹಿಂಡನ್ ಬರ್ಗ್ ಕಂಪೆನಿಯಲ್ಲಿರೋವ್ರ ಅಥವಾ ಕಾಂಟ್ಯಾಕ್ಟಿನಲ್ಲಿರೋ ಕಂಪೆನಿಗಳು. ಒಟ್ನಲ್ಲಿ ಹಿಂಡನ್ ಬರ್ಗ್ ಬಾಗಿಲು ಹಾಕ್ಕೊಂಡಿದೆ. ಅಷ್ಟೇ ಮ್ಯಾಟ್ರು.