ಕಲಾವಿದೆಯೊಬ್ಬರು ರಾಜಕೀಯಕ್ಕೆ ಬಂದರೆ ಏನೇನೆಲ್ಲ ಎದುರಿಸಬಹುದೋ ಅದೆಲ್ಲವನ್ನೂ ರೋಜಾ ಎದುರಿಸುತ್ತಿದ್ದಾರೆ. ನಟಿ ರೋಜಾ ದಕ್ಷಿಣ ಭಾರತದ ಖ್ಯಾತ ನಟಿಯಷ್ಟೇ ಅಲ್ಲ, ವರ್ಣರಂಜಿತ ರಾಜಕಾರಣಿಯೂ ಹೌದು. ಕನ್ನಡದಲ್ಲಿ ವಿಶೇಷವಾಗಿ ರವಿಚಂದ್ರನ್ ಅವರೊಂದಿಗೆ ನಟಿಸಿರುವ ರೋಜಾ, ವಿಷ್ಣುವರ್ಧನ್, ಶಿವಣ್ಣ ಜೊತೆಯಲ್ಲೂ ನಟಿಸಿದ್ದಾರೆ. ಪುನೀತ್ ಅವರಿಗೆ ಮೌರ್ಯ ಚಿತ್ರದಲ್ಲಿ ತಾಯಿಯಾಗಿ ನಟಿಸಿದ್ದ ರೋಜಾ, ತಮಿಳು, ತೆಲುಗು, ಮಲಯಾಳಂನಲ್ಲೂ ನಟಿಸಿದ್ದಾರೆ. ಇದೀಗ ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ಅವರ ಸರ್ಕಾರದಲ್ಲಿ ಸಚಿವೆಯೂ ಆಗಿರುವ ರೋಜಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ನಟಿ ರೋಜಾ ಅವರ ಅಶ್ಲೀಲ ವಿಡಿಯೋಗಳು ನನ್ನ ಬಳಿ ಇವೆ. ಸಮಯ ಬಂದಾಗ ಹೊರಬಿಡುತ್ತೇನೆ ಎಂದು ರಾಜಕಾರಣಿ, ಮಾಜಿ ಸಚಿವ ರೋಜಾ ಸತ್ಯನಾರಾಯಣ ಬೆದರಿಕೆ ಹಾಕಿದ್ದರು. ಈ ಹಿಂದೆಯೂ ಇದೇ ರೀತಿ ಬೆದರಿಕೆಗಳು ಬಂದಿದ್ದವು. ರೋಜಾ ಅವರ ನಕಲಿ ವಿಡಿಯೋಗಳೂ ಪ್ರಸಾರವಾಗಿದ್ದವು. ಆಗಲೂ ಹೋರಾಟ ನಡೆಸಿದ್ದ ರೋಜಾ, ಈ ಬಾರಿಯೂ ಕಂಪ್ಲೇಂಟ್ ಕೊಟ್ಟರು. ಗುಂಟೂರಿನ ನಗರಂಪಲೆಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಕ್ಟೋಬರ್ 2 ರಂದು ಸೋಮವಾರ ಬೆಳಗ್ಗೆಯೇ ವಿಶಾಖಪಟ್ಟಣಂ ಜಿಲ್ಲೆಯ ಪರವಾಡದ ವೆನ್ನಿಲಪಾಲೆಂನಲ್ಲೇ ಬಂಡಾರು ಅವರನ್ನು ಬಂಧಿಸಲಾಗಿದೆ
ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಆಪ್ತರಾಗಿರುವ ಬಂಡಾರು ಅವರು, ನಾಯ್ಡು ಅವರ ಬಗ್ಗೆ ಅವಹೇಳನಕಾರಿಯಾಗಿ ರೋಜಾ ಮಾತನಾಡುವುದನ್ನು ನಿಲ್ಲಿಸದಿದ್ದರೆ ರೋಜಾ ಅವರ ಅಶ್ಲೀಲ ವಿಡಿಯೋವನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ನಟಿ ರೋಜಾ ಅವರ ಅಶ್ಲೀಲ ವಿಡಿಯೋ ಲೀಕ್ ಬೆದರಿಕೆಗಳು ಹೊಸದೇನಲ್ಲ. ಈ ಹಿಂದೆಯೂ ಇಂತಹ ಬೆದರಿಕೆಗಳು ಬಂದಿದ್ದವು. ಕೆಲವು ಲೀಕ್ ಆಗಿದ್ದವು. ಅವುಗಳು ಆಮೇಲೆ ಫೇಕ್ ಎಂದೂ ಆಗಿತ್ತು. ಇದೀಗ ಆಂಧ್ರದಲ್ಲಿ ರೋಜಾ ಅವರು ಸಚಿವೆಯಾಗಿರುವ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಇದೆ. ಟಿಡಿಪಿಯ ಚಂದ್ರಬಾಬು ನಾಯ್ಡು ಅವರೂ ಜೈಲಿನಲ್ಲಿದ್ದು, ಇದೀಗ ಮತ್ತೊಬ್ಬ ಮಾಜಿ ಸಚಿವ ಜೈಲು ಸೇರಿದಂತಾಗಿದೆ.



