ಸ್ವಾತಿ ಮುತ್ತಿನ ಮಳೆ ಹನಿಯೇ..
ಮೆಲ್ಲ ಮೆಲ್ಲನೆ ಧರೆಗಿಳಿಯೇ..
ಬಣ್ಣದ ಗೆಜ್ಜೆ (Bannada gejje) ಚಿತ್ರದ ಆ ಹಾಡು, ಆ ರೊಮ್ಯಾನ್ಸ್ನ್ನ (romance) ಜನ ಇವತ್ತಿಗೂ ಎಂಜಾಯ್ ಮಾಡ್ತಾರೆ. ರವಿಚಂದ್ರನ್ (ravichandran), ಅಮಲಾ Amala (ತೆಲುಗು ನಟ ನಾಗಾರ್ಜುನ ಪತ್ನಿ Nagarjuna wife) ಚಿತ್ರವನ್ನು ಎಸ್.ವಿ.ರಾಜೇಂದ್ರ ಸಿಂಗ್ ಬಾಬು (S V Rajendra singh babu) ನಿರ್ದೇಶನ ಮಾಡಿದ್ದರು. ನಿರ್ಮಾಪಕರೂ ಅವರೇ. ಕನ್ನಡದಲ್ಲಿ ರವಿಚಂದ್ರನ್, ತೆಲುಗಿನಲ್ಲಿ ನಾಗಾರ್ಜುನ ಹೀರೋ. ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಡು ಮೆಲೋಡಿ ಹಿಟ್ ಆಗಿತ್ತು. ಅದೇ ಹಾಡಿನ ಮೊದಲ ಸಾಲನ್ನು ತಮ್ಮ ನಿರ್ಮಾಣದ ಮೊದಲ ಚಿತ್ರದ ಟೈಟಲ್ ಆಗಿಟ್ಟಿದ್ದರು ರಮ್ಯಾ (Ramya). ಅದು ವಿವಾದವಾಗಿ, ಕೋರ್ಟಿಗೆ ಹೋಗಿ ರಮ್ಯಾ ಗೆದ್ದದ್ದು ಹಳೇ ಕಥೆ. ಇದೀಗ ಸ್ವಾತಿ ಮುತ್ತಿನ ಮಳೆ ಹನಿಯೇ (swathi muttina male haniye) ಚಿತ್ರದ ಥಿಯೇಟರಿಗಿಳಿಯೋ ಸಮಯ ಹತ್ತಿರ ಬಂದಿದೆ.
ಸ್ಯಾಂಡಲ್ʻವುಡ್ ಕ್ವೀನ್ (Sandalwood queen ) ರಮ್ಯಾ ನಿರ್ಮಾಣದ ಮೊದಲ ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಶೂಟಿಂಗ್ ಎಲ್ಲ ಬೇಗಬೇಗನೇ ಮುಗಿದರೂ ರಿಲೀಸ್ ಯಾವಾಗ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇತ್ತು. ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಈ ಸಿನಿಮಾವನ್ನು ನವೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನೇತೃತ್ವದ ಕೆಆರ್ಜಿ ಸ್ಟುಡಿಯೋಸ್ ಈ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾಕ್ಕೆ ರಾಜ್ ಬಿ ಶೆಟ್ಟಿ (Raj B Shetty) ಡೈರೆಕ್ಟರ್. ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಸಿನಿಮಾಗಳ ನಂತರ ರಾಜ್ ಬಿ ಶೆಟ್ಟಿ ನಿರ್ದೇಶಿಸಿರುವ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ. ಮೊದಲು ಕಾಮಿಡಿ, ನಂತರ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾಡಿದ್ದ ರಾಜ್, ಈ ಬಾರಿ ಪ್ಯೂರ್ ಲವ್ ಸ್ಟೋರಿ ಸಿನಿಮಾ ಮಾಡಿರುವುದೇ ವಿಶೇಷ. ನಿರ್ದೇಶಕ ಅಷ್ಟೇ ಅಲ್ಲ, ಚಿತ್ರಕ್ಕೆ ಅವರೇ ಹೀರೋ.
ಉಳಿದಂತೆ, ಬಾಲಾಜಿ ಮನೋಹರ್, ರೇಖಾ ಕೂಡ್ಲಿಗಿ, ಜೆಪಿ ತುಮ್ಮಿನಾಡು, ಸೂರ್ಯ ವಸಿಷ್ಠ, ಗೋಪಾಲಕೃಷ್ಣ ದೇಶಪಾಂಡೆ, ಸ್ನೇಹಾ ಶರ್ಮ ಮೊದಲಾದವರು ನಟಿಸಿದ್ದು, ಎಂದಿನಂತೆ ಮಿಥುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಮೊದಲು ನಾಯಕಿಯಾಗಿ ರಮ್ಯಾ (Divya spandana) ಅವರು ನಟಿಸಬೇಕಿತ್ತು. ಆದರ ಕಾರಣಾಂತರಗಳಿಂದ ರಮ್ಯಾ ಬದಲು ಸಿರಿ ರವಿಕುಮಾರ್ (Siri Ravikumar) ಅವರು ನಾಯಕಿಯಾಗಿ ಎಂಟ್ರಿ ಕೊಟ್ಟರು.



