ಒಂದು ಕಾಲದಲಿ ಬೇಕಾಬಿಟ್ಟಿ ಬಟ್ಟೆ ಬಿಚ್ಚಿ ನಟಿಸುತ್ತಿದ್ದ, ಅರೆಬೆತ್ತಲೆಯಾಗಿ ಪೋಸು ಕೊಡುತ್ತಿದ್ದ, ಒಂದು ಬ್ರಾ, ಕಾಚಾದಲ್ಲಿ ನಟಿಸುತ್ತಿದ್ದ ನಟಿ ಮಮತಾ ಕುಲಕರ್ಣಿ. ತೀರಾ ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇತ್ತೀಚೆಗೆ ಸನ್ಯಾಸತ್ವ ಸ್ವೀಕರಿಸಿದ್ದರು. ಸನ್ಯಾಸತ್ವ ನೀಡಿ, ಮಹಾಮಂಡಲೇಶ್ವರಿಯನ್ನಾಗಿಸಿದ್ದ ಕಿನ್ನರ ಅಕಾರದವರೇ ಈಗ ಮಮತಾ ಕುಲಕರ್ಣಿಯನ್ನು ಹೊರ ಹಾಕಿದ್ದಾರೆ. ವಿಶೇಷ ಏನೆಂದರೆ ಮಮತಾ ಕುಲಕರ್ಣಿಯನ್ನು ಅಖಾಡಕ್ಕೆ ಸೇರಿಸಿಕೊಂಡಿದ್ದರ ಹಿಂದೆ ದುಡ್ಡು ಕೆಲಸ ಮಾಡಿದ್ದರೆ, ಹೊರಹಾಕಿದ್ದರ ಹಿಂದೆ ಕೆಲಸ ಮಾಡಿರುವುದು ದೇಶಪ್ರೇಮ.
ಕಿನ್ನರ ಅಖಾಡದ ಸಂಸ್ಥಾಪಕರಾಗಿರುವ ಋಷಿ ಅಜಯ್ ದಾಸ್ ಅವರು ಮಹಾಮಂಡಲೇಶ್ವರ ಸ್ಥಾನದಿಂದ ಮಮತಾ ಕುಲಕರ್ಣಿಯನ್ನು ವಜಾ ಮಾಡಿದ್ದಾರೆ. ಮಮತಾ ಕುಲಕರ್ಣಿಯನ್ನು ಅಖಾಡದಿಂದಲೇ ಹೊರಗೆ ಹಾಕಿದ್ದಾರೆ. ಶೀಘ್ರದಲ್ಲಿಯೇ ಕಿನ್ನರ ಅಖಾಡಕ್ಕೆ ಹೊಸ ಮಹಾಮಂಡಲೇಶ್ವರ ಸಿಗಲಿದ್ದು, ಹೊಸ ಅಖಾಡವನ್ನು ಪುನರ್ ಸಂಘಟನೆ ಮಾಡಲಾಗುವುದು ಎಂದು ಋಷಿ ಅಜಯ್ ದಾಸ್ ಹೇಳಿದ್ದಾರೆ.
ಸನ್ಯಾಸತ್ವ ಸ್ವೀಕರಿಸಿದ ಬಳಿಕ ಮಮತಾ ಕುಲಕರ್ಣಿ ಅವರಿಗೆ ‘ಶ್ರೀ ಯಮಯಿ ಮಮತಾ ನಂದ ಗಿರಿ’ ಎಂದು ನಾಮಕರಣ ಮಾಡಲಾಗಿತ್ತು. ನಂತರ ಕಿನ್ನರ ಅಖಾಡದ ಮಹಾಮಂಡಲೇಶ್ವರ ಸ್ಥಾನಕ್ಕೆ ನಿಯೋಜನೆ ಮಾಡಲಾಗಿತ್ತು.
ಮಮತಾ ಕುಲಕರ್ಣಿ ಅವರಿಗೆ ಮಹಾಮಂಡಲೇಶ್ವರ ಸ್ಥಾನ ನೀಡಿದ್ದಕ್ಕೆ ಕಿನ್ನರ ಅಖಾಡದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು ಮತ್ತು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಮಮತಾ ಕುಲಕರ್ಣಿ ಅವರಿಂದ 40 ಲಕ್ಷ ರೂ. ಹಣ ತೆಗೆದುಕೊಂಡು, ಸಂಪ್ರದಾಯ ಪಾಲಿಸದೆ ಏಕಾಏಕಿ ಮಹಾಮಂಡಲೇಶ್ವರಿ ಸ್ಥಾನ ನೀಡಿದ್ದಾರೆ ಎಂಬ ಆರೋಪ ವಿವಾದ ಸೃಷ್ಟಿಸಿತ್ತು. ನಿನ್ನೆಯವರೆಗೂ ಸಾಂಸಾರಿಕ ಸುಖದಲ್ಲಿದ್ದವರು. ಸನ್ಯಾಸತ್ವ ಸ್ವೀಕರಿಸಿದ ಒಂದೇ ದಿನದಲ್ಲಿಯೇ ಮಹಾಮಂಡಲೇಶ್ವರ ಅಂತಹ ಸ್ಥಾನಮಾನ ಸಿಕ್ಕುವುದು ಹೇಗೆ.. ಎಂದು ಹಲವರು ಪ್ರಶ್ನೆ ಹಾಕಿದ್ದರು.
ಏನಿದು ದೇಶಪ್ರೇಮ ಕಾರಣ..?
ಮಮತಾ ಕುಲಕರ್ಣಿ ಅವರ ವಿರುದ್ಧ ಡ್ರಗ್ಸ್ ಕೇಸ್ ಸೇರಿ, ಹಲವು ಪ್ರಕರಣಗಳಿದ್ದು, ಅವರೊಬ್ಬ ದೇಶದ್ರೋಹಿ ಎಂಬ ಆರೋಪವೂ ಕೇಳಿ ಬಂದಿತ್ತು. ಸಾಧು ಸಂತರು ಯಾವತ್ತೂ ದೇಶದ್ರೋಹಿಗಳ ಜೊತೆ ಕೈಜೋಡಿಸುವುದಿಲ್ಲ ಹಾಗೂ ಕೈಜೋಡಿಸಬಾರದು. ಅವರಿಗೆ ಧರ್ಮ ರಕ್ಷಣೆ ನೀಡಬಾರದು ಎನ್ನುವುದು ನಿಯಮ. ಅಂದರೆ ಸಾಧು ಸಂತರು ಯಾವುದೇ ದೇಶದಲ್ಲಿರಲಿ, ಅಲ್ಲಿನ ಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಜನರನ್ನು ದ್ವೇಷಿಸುವಂತಿದ್ದರೆ, ಕಿರುಕುಳ ನೀಡುತ್ತಿದ್ದ ವಿಷಯಗಳ ಹೊರತಾಗಿ, ತಾವು ಇರುವ ಭೂಮಿಯ ಒಡೆಯರಿಗೆ ನಿಷ್ಠರಾಗಿರಬೇಕು. ಧರ್ಮಕ್ಕೆ ನಿಷ್ಠರಾಗಿರಬೇಕು ಎನ್ನುವುದು ಎಲ್ಲ ಅಕಾಡಗಳ ನಿಯಮ. ದೇಶಕ್ಕೆ, ದೇಶವಾಸಿಗಳಿಗೆ ಪ್ರತಿಕೂಲವಾದ ಯಾವುದೇ ಕೆಲಸ ಮಾಡುವವರ ಕೈಜೋಡಿಸುವುದು, ಅವರನ್ನು ಸನ್ಮಾನಿಸುವುದು ದೇಶದ್ರೋಹ ಮತ್ತು ಧರ್ಮದ್ರೋಹ ಎಂದು ಪರಿಗಣಿಸಲಾಗುತ್ತದೆ.
ಆ ನಿಯಮವನ್ನು ಮಮತಾ ಕುಲಕರ್ಣಿ ಅವರಿಗೆ ಸನ್ಯಾಸತ್ವ ದೀಕ್ಷೆ ನೀಡಿದವರು ಮುರಿದಿದ್ದಾರೆ ಎಂದು ಕಿನ್ನಾರ ಅಖಾಡದವರೇ ವಾದಿಸಿದ್ದರು. ಈಗ ಮಮತಾ ಕುಲಕರ್ಣಿ ಅವರನ್ನು ಅಖಾಡದಿಂದ ಹೊರಹಾಕಲಾಗಿದೆ.



