ನಟ ಶ್ರೀಮುರಳಿ ಮತ್ತೆ ಗಾಯಗೊಂಡಿದ್ದಾರೆ. ಬಘೀರ ಚಿತ್ರದ ಚಿತ್ರೀಕರಣ ವೇಳೆಯಲ್ಲಿಯೇ ಈ ಅವಘಡ ಸಂಭವಿಸಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮುರಳಿಗೆ ಈ ರೀತಿ ಗಾಯವಾಗುತ್ತಿರುವುದು ಹೊಸದೇನಲ್ಲ. ಬಘೀರ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಈ ಘಟನೆಯ ನಂತರ ಬಘೀರ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಮೈಸೂರಿನಲ್ಲಿ ಬಘೀರ ಚಿತ್ರಿಕರಣದ ನಡೆಯುತ್ತಿತ್ತು. ಈ ವೇಳೆ ಪ್ರಮುಖ ಫೈಟ್ ಚಿತ್ರೀಕರಣದ ವೇಳೆ ಶ್ರೀಮುರಳಿ ಅವರ ಕಾಲಿಗೆ ಪೆಟ್ಟಾಗಿದೆ. ಈ ಮೊದಲು ಕೂಡಾ ಶ್ರೀಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. . ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ.
2021ರ ‘ಮದಗಜ’ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.ಬಘೀರ ಒಂದೇ. ಬಘೀರ’ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್’ ಬಂಡವಾಳ ಹೂಡಿದ್ದು, ಡಾ.ಸೂರಿ ನಿರ್ದೇಶನ ಇದೆ. . ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಂಗಾಯಣ ರಘು ಮೊದಲಾದವರು ನಟಿಸುತ್ತಿರುವ ಬಘೀರ ಚಿತ್ರಕ್ಕೆ ಪ್ರಶಾಂತ್ ನೀಲ್ ಹಾಗೂ ಸೂರಿ ಕಥೆ ಬರೆದಿದ್ದಾರೆ.



