ಹೆಣ್ಣು ಕೊಡುವಾಗ ಅತ್ತೆ-ಮಾವ ಗಂಡನ ಪಾದ ಪೂಜೆ ಮಾಡೋದು ನೋಡಿದ್ದೀವಿ. ಸ್ವಾಮೀಜಿಗಳ ಪಾದ ಪೂಜೆ ಮಾಡೋದು ಸರ್ವೇ ಸಾಮಾನ್ಯ. ಗೌರಿ ಹಬ್ಬ, ಭೀಮನ ಅಮಾವಾಸ್ಯೆಗಳಲ್ಲಿ ಗಂಡನ ಪಾದ ಪೂಜೆ ಮಾಡುವ ಹೆಂಡತಿಯರೂ ಇದ್ದಾರೆ. ಇಷ್ಟೆಲ್ಲ ಇದ್ರೂ.. ಗಂಡ ಹೆಂಡತಿ ಸರಿ ಸಮಾನರು ಅಂತಿದ್ರೂ ಗಂಡಸರು ಒಂದು ಕೈ ಮೇಲೆ ಅನ್ನೋ ಫೀಲಿಂಗ್ನಲ್ಲೇ ಇರ್ತಾರೆ. ಆದರೆ ನಟ ರಮೇಶ್ ಪಂಡಿತ್ ಹೆಂಡತಿಯ ಪಾದಪೂಜೆ ಮಾಡಿ ಬೇರೆಯದೇ ದಾರಿ ಹಿಡಿದಿದ್ದಾರೆ. ಜೀ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತಿರೋ ಜೋಡಿ ನಂ.1 ರಿಯಾಲಿಟಿ ಶೋನಲ್ಲಿ ನಟ ರಮೇಶ್ ಪಂಡಿತ್, ಪತ್ನಿ ಸುನೇತ್ರಾ ಅವರಿಗೆ ಪಾದಪೂಜೆ ಮಾಡಿದ್ದಾರೆ.
ವೀಕೆಂಡ್‌ನಲ್ಲಿ ಪ್ರಸಾರವಾಗಲಿರುವ ಎಪಿಸೋಡ್‌ನಲ್ಲಿ ರಮೇಶ್ ಪಂಡಿತ್ ಪಾದಪೂಜೆ ಮಾಡಿ ಗಮನ ಸೆಳೆದಿದ್ದಾರೆ. ತುಂಬಾ ಕನಸುಗಳನ್ನು ಕಟ್ಟಿಕೊಂಡಿರುವ ಹುಡುಗಿ ನೀನು. ಕಟ್ಟಿರುವ ತಾಳಿಯ ಎರಡು ತುಂಡು ಬಿಟ್ಟರೆ ನಿನಗೆ ನಾನು ಏನೋ ಕೊಟ್ಟಿಲ್ಲ. ನಿನಗೆ ಒಂದು ಕಾಣಿಕೆಯನ್ನು ಕೊಡುತ್ತೀನಿ ಎನ್ನುತ್ತಾ ಪಾದಪೂಜೆ ಮಾಡುವ ರಮೇಶ್ ಪಂಡಿತ್ ಅವರ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗ್ತಿದೆ.
ಬೆಂಗಳೂರಿನಲ್ಲಿ ಲೈವ್ ಎಡಿಟಿಂಗ್ ಮಾಡಿದ ಮೊದಲ ಮದುವೆ ಇವರದ್ದಂತೆ. ಆದರೆ ಅದನ್ನು ಇವರೇ ನೋಡೋಕೆ ಆಗಲಿಲ್ಲ. ಎಲ್ಲ ಮುಗಿದ ಮೇಲೆ ಫೋಟೋ ಸ್ಟುಡಿಯೋ ಸುಟ್ಟು ಹೋಗಿ ಇವರ ಮದುವೆಯ ವಿಡಿಯೊ ಇರಲಿ, ಒಂದು ಫೋಟೋ ಕೂಡಾ ಇಲ್ಲವಂತೆ. ಹಾಗಂತ ಇಲ್ಲವೇ ಇಲ್ಲ ಅಂತಲ್ಲ, ಮದುವೆಗೆ ಬಂದಿದ್ದ ಗೆಳೆಯರು ರೀಲ್ ಕ್ಯಾಮೆರಾದಲ್ಲಿ ಕ್ಲಿಕ್ ಮಾಡಿದ ಫೋಟೋಗಳಿವೆಯಂತೆ.
ಹೆಂಡತಿ ಸುನೇತ್ರಾ ಅವರಿಗೆ ರಮೇಶ್ ಪಂಡಿತ್ ಪಾದ ಪೂಜೆ ಮಾಡಿದ್ದು ಏಕೆ ಅನ್ನೋದರ ಕಂಪ್ಲೀಟ್ ವಿವರ ಎಪಿಸೋಡ್ನಲ್ಲೇ ಸಿಗಲಿದೆ. ವಿಶೇಷ ಅಂದ್ರೆ, ಈ ಪಾದಪೂಜೆ ನೋಡಿದ, ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬಂದಿದ್ದ ವಿನೋದ್ ಪ್ರಭಾಕರ್ ಅವರ ಪತ್ನಿ ನಿಶಾ, ರಮೇಶ್ ಪಂಡಿತ್ ಅವರನ್ನ ಗ್ರೇಟ್ ಅಂದ್ರೆ, ನಟಿ ಮಾಳವಿಕಾ ಅವಿನಾಶ್ ನಾನೂ ಜೋಡಿಯಾಗಿ ಬರಬೇಕಿತ್ತು ಎಂದಿದ್ದಾರೆ.
ಅಯ್ಯೋ.. ನಾನು ಬದುಕ್ಕೊಂಡ್ನಪ್ಪಾ ಅಂತಾ ಅವಿನಾಶ್ ಹೇಳಿದ್ದು ಸುಳ್ ಸುಳ್ಳೇ ನಿಜವಂತೆ ಅನ್ನೋದು ಫನ್ನಿ.



