ನಟ ದರ್ಶನ್ (Darshan) ಮತ್ತು ರಾಜ್ ಕುಟುಂಬದ (Raj family) ಅಭಿಮಾನಿಗಳ ಮಧ್ಯೆ ಗಲಾಟೆ ಇವತ್ತಿನದ್ದಲ್ಲ. ಅದಕ್ಕೆ ಅವರವರ ಕೊಡುಗೆಯೂ ಇದೆ ಅನ್ನೋದೂ ನಿಜ. ಹೀಗಾಗಿಯೇ.. ನಟ ಶಿವ ರಾಜ್ಕುಮಾರ್ (Shiva Raj kumar) ಮತ್ತು ದರ್ಶನ್ ನಡುವೆ ಏನೋ ಇದೆ.. ದೊಡ್ಮನೆ (Dodmane) ಕಂಡರೆ ದರ್ಶನ್ ಅವರಿಗೆ ಆಗಲ್ಲ ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿ (Social media) ಹರಡುತ್ತಿರುವ ಕಥೆ. ಅಂಥದ್ದೇನೂ ಇಲ್ಲ ಎಂದು ದರ್ಶನ್ ಅವರು ಹೇಳಿದ್ದಾರಾದರೂ, ವದಂತಿಗಳಿಗೆ ಕೊನೆ ಬಿದ್ದಿಲ್ಲ. ಅದಕ್ಕೆ ತಕ್ಕಂತೆ ಸೋಷಿಯಲ್ ಮೀಡಿಯಾದಲ್ಲಿ ವಿವಾದಗಳು ಹುಟ್ಟುವುದು, ಸುಳ್ಳುಗಳೇ ವಿಜೃಂಭಿಸುವುದು ನಡೆಯುತ್ತಲೇ ಇದೆ. ಆದರೆ ಇದೀಗ ದರ್ಶನ್ ಅವರು ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ಕಾವೇರಿ ಹೋರಾಟದಲ್ಲಿ ಭಾಗವಹಸಿದ್ದ ನಟ ದರ್ಶನ್ ಅವರು ಈಗಾಗಲೇ ಒಂದು ವಿವಾದ ಹುಟ್ಟುಹಾಕಿದ್ದೂ ಆಗಿದೆ. ಹೋರಾಟಕ್ಕೆ ಮಾತ್ರ ಕನ್ನಡ ನಟರು ಬೇಕು, ಆದರೆ ಕರ್ನಾಟಕದಲ್ಲಿ ತಮಿಳು ಚಿತ್ರಗಳೇ ಹೆಚ್ಚು ಬಿಸಿನೆಸ್ ಮಾಡ್ತಿವೆ ಎಂದು ಹೋರಾಟಗಾರರನ್ನೇ ತರಾಟೆಗೆ ತೆಗೆದುಕೊಂಡಿದ್ದರು ನಟ ದರ್ಶನ್. ಅದು ಹೋರಾಟಗಾರರಿಗೆ ಇರಿಸುಮುರಿಸು ಉಂಟು ಮಾಡಿದ್ದೂ ಸತ್ಯ.
ಇದೀಗ ಫಿಲ್ಮ್ ಚೇಂಬರ್ (film chamber) ಎದುರು ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ದರ್ಶನ್ ಶಿವಣ್ಣನ ಕಾಲಿಗೆ ನಮಸ್ಕಾರ ಮಾಡಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆಯೇ ಶಿವಣ್ಣ ಅವರಿಗೆ ನಮಸ್ಕರಿಸುವ ದರ್ಶನ್, ನಟ ಶಿವಣ್ಣ, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರ ಕಾಲಿಗೆ ಬಿದ್ದಿದ್ದಾರೆ.
ನಟ ದರ್ಶನ್ ಆರಂಭದ ದಿನಗಳಲ್ಲಿ ದೇವರ ಮಗ (devara maga) ಚಿತ್ರದಲ್ಲಿ ಶಿವಣ್ಣ ಎದುರು ಪುಟ್ಟ ಪಾತ್ರದಲ್ಲಿ ನಟಿಸಿದ್ದರು. ಜನುಮದ ಜೋಡಿ (janumada jodi) ಸೇರಿದಂತೆ ಅವರ ಚಿತ್ರಗಳಲ್ಲಿ ಲೈಟ್ ಬಾಯ್ ಆಗಿಯೂ ಕೆಲಸ ಮಾಡಿದ್ದರು. ಅದಾದ ಮೇಲೆ ಮೆಜೆಸ್ಟಿಕ್ (mejestic) ಸಿನಿಮಾ ದರ್ಶನ್ ಅವರ ವೃತ್ತಿ ಬದುಕನ್ನೇ ಬದಲಿಸಿದ್ದು ಇತಿಹಾಸ.
ಅದಾದ ಮೇಲೂ ರಾಜ್ ಕುಟುಂಬ ಮತ್ತು ದರ್ಶನ್ ನಡುವೆ ಉತ್ತಮ ಬಾಂಧವ್ಯ ಇದೆ. ದರ್ಶನ್ ಅವರ ತಾಯಿ ಮೀನಾ ರಾಜ್ ಕುಟುಂಬದ ಬಗ್ಗೆ ಇವತ್ತಿಗೂ ಅಭಿಮಾನದಿಂದ ಮಾತನಾಡ್ತಾರೆ. ನಟ ದರ್ಶನ್ ಅವರು ಮೊದಲಿನಿಂದಲೂ ನಮ್ಮದು ದೊಡ್ಮನೆಯ ಅನ್ನ ತಿಂದು ಬೆಳೆದ ಕುಟುಂಬ ಎಂದು ಹೇಳುತ್ತಲೇ ಬಂದವರು. ಪುನೀತ್ (Puneeth raj kumar) ಅವರ ಅರಸು (Arasu) ಚಿತ್ರದಲ್ಲಿ ಸಂಭಾವನೆ ಪಡೆಯದೆ ಅತಿಥಿ ನಟರಾಗಿ ನಟಿಸಿದ್ದ ದರ್ಶನ್, ಅದಾದ ಮೇಲೆ ಬದಲಾದರು ಎನ್ನುವುದು ಫ್ಯಾನ್ಸ್ ಆರೋಪ.
ಅದಕ್ಕೆ ತಕ್ಕಂತೆ ತಾವು ವಿವಾದ ಮಾಡಿಕೊಂಡಾಗ ದರ್ಶನ್ ಅಗತ್ಯ ಇಲ್ಲದಿದ್ದರೂ ರಾಜ್ ಕುಟುಂಬದವರನ್ನು ಎಳೆದು ತರುತ್ತಾರೆ ಎಂಬ ಕೋಪ ದೊಡ್ಮನೆ ಅಭಿಮಾನಿಗಳಲ್ಲಿದೆ. ದರ್ಶನ್ ಮಾಡದಿದ್ದರೂ ಅದನ್ನು ಅಭಿಮಾನಿಗಳು ಮಾಡ್ತಾರೆ.
ಇದೀಗ ದರ್ಶನ್ ಶಿವಣ್ಣ ಕಾಲಿಗೆ ನಮಸ್ಕರಿಸಿದ್ದಾರೆ. ಕಾಲಿಗೆ ನಮಸ್ಕರಿಸುವುದು ಎಂದರೆ ಸುಮ್ಮನೆ ಮಾಡುವುದಲ್ಲ. ಹೃದಯದಲ್ಲಿ ಗೌರವ ಇದ್ದರಷ್ಟೇ ಆಗುವ ವಿಷಯ ಇದು. ಇನ್ನಾದರೂ ಕೊನೆಯಾಗುತ್ತಾ ಫ್ಯಾನ್ಸ್ ವಾರ್?



