ಒಬ್ಬರ ಚಿತ್ರವನ್ನು ಇನ್ನೊಬ್ಬರು ಪ್ರಚಾರ ಮಾಡುವುದು ಕನ್ನಡದಲ್ಲಿ ಹೊಸದೇನಲ್ಲ. ಪ್ರತಿಯೊಬ್ಬರೂ ಇನ್ನೊಬ್ಬ ನಟರ ಸಿನಿಮಾವನ್ನು ಪಬ್ಲಿಸಿಟಿ ಮಾಡಿಕೊಡ್ತಾರೆ. ಡಾ.ರಾಜ್ (Dr.Rajkumar) , ವಿಷ್ಣು (Vishnuvardhan) ಕಾಲದಿಂದಲೂ ಇದ್ದ ಸಂಪ್ರದಾಯವನ್ನು ಇಂದಿನ ಸ್ಟಾರ್ ನಟರೂ ಮುಂದುವರೆಸಿದ್ದಾರೆ. ನಟ ದರ್ಶನ್ ಕೂಡಾ ಹಿಂದೆ ಬಿದ್ದಿಲ್ಲ.
ವಿನೋದ್ ಪ್ರಭಾಕರ್ (vinod Prabhakar ) ಅವರನ್ನು ನಟ ದರ್ಶನ್ (Actor Darshan) ತಮ್ಮನಂತೆಯೇ ಪ್ರೀತಿಸ್ತಾರೆ. ಆ ಪ್ರೀತಿಯ ಪ್ರಭಾವವೇ We are brother from another mother ಆರ್ ಬ್ರದರ್ ಫ್ರಂ ಅನದರ್ ಮದರ್.. ಹಾಡು.. ರಾಬರ್ಟ್ (Robert) ಚಿತ್ರದ ನಂತರ ದರ್ಶನ್ ಅಭಿಮಾನಿಗಳೂ ಅಷ್ಟೇ ಪ್ರೀತಿ ಮಾಡೋ ನಟರಲ್ಲಿ ವಿನೋದ್ ಪ್ರಭಾಕರ್ ಒಬ್ಬರು. ಇದೀಗ ವಿನೋದ್ ಅವರ ಫೈಟರ್ ಚಿತ್ರ ರಿಲೀಸ್ ಆಗ್ತಿದೆ. ಇದೇ ವಾರ ಥಿಯೇಟರಿಗೆ ಬರ್ತಿರೋ ಚಿತ್ರದಲ್ಲಿ ವಿನೋದ್ ಪ್ರಭಾಕರ್, ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಚಾರಕ್ಕೆ ದರ್ಶನ್ ಕೂಡಾ ಕೈ ಜೋಡಿಸಿದ್ಧಾರೆ.
ಪ್ರಭಾಕರ್ (Tiger prabhakar) ಅವರಿಗೆ ಕೊಟ್ಟ ಪ್ರೀತಿಯನ್ನೇ ವಿನೋದ್ಗೂ ಕೊಡಿ. ಫೈಟರ್ ಚಿತ್ರವನ್ನು ಗೆಲ್ಲಿಸಿ ಎಂದು ನಟ ದರ್ಶನ್ ಮನವಿ ಮಾಡಿದ್ದಾರೆ. ವಿನೋದ್ ಪ್ರಭಾಕರ್ ಅವರ ಜೊತೆ ಕುಳಿತು ವಿಡಿಯೋ ಮಾಡಿರುವ ದರ್ಶನ್ ಇದೇ ಶುಕ್ರವಾರ ಫೈಟರ್ ತೆರೆಗೆ ಬರ್ತಾ ಇದೆ. ಎಲ್ಲರೂ ಥಿಯೇಟರಿಗೆ ಬಂದು ನೋಡಿ, ಹಾರೈಸಿ, ಮರಿ ಟೈಗರ್ನ್ನು ಗೆಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.
ನೂತನ್ ಉಮೇಶ್ ನಿರ್ದೇಶನದ ಫೈಟರ್ (Fihter) ಚಿತ್ರದಲ್ಲಿ ಲೇಖಾಚಂದ್ರ ಮತ್ತು ಪಾವನ ಇಬ್ಬರು ಹೀರೋಯಿನ್ಸ್ ಇದ್ದಾರೆ. ಲಾಕಪ್ ಡೆತ್ (Lockup death) ಖ್ಯಾತಿಯ ನಿರೋಷ (actress Nirosha) ಹಲವು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. , ಕಟ್ಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣದಲ್ಲಿ ತಯಾರಾದ ಫೈಟರ್ ಭರ್ಜರಿ ನಿರೀಕ್ಷೆ ಹುಟ್ಟಿಸಿದೆ.



