ಮುಸ್ಲಿಂ ಉಗ್ರರನ್ನು ಹಿಂದೂ ಉಗ್ರರಂತೆ ಬಿಂಬಿಸಿದೆಯಾ ನೆಟ್ ಫ್ಲಿಕ್ಸ್ʻನಲ್ಲಿ ಪ್ರದರ್ಶನವಾಗುತ್ತಿರೋ ಐಸಿ 814 – ದಿ ಕಂದಹಾರ್ ಹೈಜಾಕ್ ವೆಬ್ ಸಿರೀಸ್..? ಹೀಗೊಂದು ಅನುಮಾನ ಮೂಡೋದಕ್ಕೆ ಕಾರಣವೂ ಇದೆ. ಹೈಜಾಕ್ ಮಾಡಿದ್ದ ಉಗ್ರರ ಹೆಸರುಗಳು ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್ ಸಯೀದ್, ಸನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜಹೂರ್ ಇಬ್ರಾಹಿಂ ಮತ್ತು ಶಾಕಿರ್. ಆದರೆ ಇಡೀ ವೆಬ್ ಸಿರೀಸ್‌ನಲ್ಲಿ ಹೈಜಾಕರ್‌ಗಳ ಹೆಸರನ್ನು “ಭೋಲಾ” ಮತ್ತು “ಶಂಕರ್” ಎಂದು ಬದಲಾಯಿಸಲಾಗಿದೆ. ಆದರೆ ವಾಸ್ತವ ಬೇರೆಯೇ ಇದೆ.
ರಿಯಲ್ ಸ್ಟೋರಿ :
1999ರಲ್ಲಿ ಭಾರತದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ಕಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ 191 ಪ್ರಯಾಣಿಕರಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿದ್ದ ಉಗ್ರರು ಅಫ್ಘಾನಿಸ್ತಾನದ ಕಂದಹಾರ್‌ಗೆ ಕೊಂಡೊಯ್ದಿದ್ದರು. ಪ್ರಯಾಣಿಕರಂತೆ ನಟಿಸುತ್ತಿದ್ದ ಐವರು ಅಪಹರಣಕಾರರು ಟೇಕ್-ಆಫ್ ಆದ ಕೂಡಲೇ, ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ವಿಮಾನವನ್ನು ಅಮೃತಸರ, ಲಾಹೋರ್ ಮತ್ತು ದುಬೈನಲ್ಲಿ ಲ್ಯಾಂಡಿಂಗ್ ಮಾಡಿ, ಬಳಿಕ ಅಫ್ಘಾನಿಸ್ತಾನದ ಕಂದಹಾರ್‌ಗೆ ಕೊಂಡೊಯ್ದಿದ್ದರು. ಆಗ ಅಫ್ಘಾನಿಸ್ತಾನದಲ್ಲಿ ಇದ್ದದ್ದು ತಾಲಿಬಾನ್ ಸರ್ಕಾರ. ಹೈಜಾಕ್ ಮಾಡಿದ್ದ ಉಗ್ರರ ಹೆಸರುಗಳು ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್ ಸಯೀದ್, ಸನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜಹೂರ್ ಇಬ್ರಾಹಿಂ ಮತ್ತು ಶಾಕಿರ್. ಅವರು ಆಗಿನ ವಾಜಪೇಯಿ ಸರ್ಕಾರದ ಮೇಲೆ ಒತ್ತಡ ಹೇರಿ ಮೂವರು ಕುಖ್ಯಾತ ಭಯೋತ್ಪಾದಕರಾದ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಅವರನ್ನು ಭಾರತೀಯ ಜೈಲಿನಿಂದ ಬಿಡುಗಡೆ ಮಾಡಲು ಒತ್ತಡ ತಂದಿದ್ದರು. ಕೊನೆಗೆ ಉಗ್ರರ ಬಿಡುಗಡೆ ಮಾಡಿ ೧೯೧ ಭಾರತೀಯರನ್ನು ರಕ್ಷಿಸಿಕೊಂಡಿತ್ತು ಭಾರತ. ಅದು ಭಾರತ, ಆಗ ಉಗ್ರರ ಜೊತೆ ಮಾತುಕತೆ ನಡೆಸಿದ್ದವರು ಈಗ ರಕ್ಷಣಾ ಸಲಹೆಗಾರರಾಗಿರುವ ಅಜಿತ್ ದೋವಲ್.
ವೆಬ್ ಸಿರೀಸ್‌ನಲ್ಲಿ ಏನಿದೆ..?
ಈಗ ಆ ಘಟನೆ ಆಧರಿಸಿ ‘IC 814 – ದಿ ಕಂದಹಾರ್ ಹೈಜಾಕ್’ ಅನ್ನೋ ವೆಬ್ ಸಿರೀಸ್ ನೆಟ್ ಫ್ಲಿಕ್ಸ್ʻನಲ್ಲಿ ರಿಲೀಸ್ ಆಗಿದೆ. ವೆಬ್ ಸರಣಿಯ ತಯಾರಕರು ಹೈಜಾಕರ್‌ಗಳ ಹೆಸರನ್ನು “ಭೋಲಾ” ಮತ್ತು “ಶಂಕರ್” ಎಂದು ಬದಲಾಯಿಸಿದ್ದಾರೆ. ಅನುಭವ್ ಸಿನ್ಹಾ ನಿರ್ದೇಶನದ ವೆಬ್ ಸರಣಿಯು, ವಿಮಾನದ ಕ್ಯಾಪ್ಟನ್ ದೇವಿ ಶರಣ್ ಮತ್ತು ಪತ್ರಕರ್ತ ಸೃಂಜಯ್ ಚೌಧರಿ ಬರೆದಿರುವ ‘ಫ್ಲೈಟ್ ಇನ್ಟು ಫಿಯರ್: ದಿ ಕ್ಯಾಪ್ಟನ್ಸ್ ಸ್ಟೋರಿ’ ಪುಸ್ತಕದಿಂದ ಸ್ಫೂರ್ತಿ ಪಡೆದಿದೆ. ಇದರಲ್ಲಿ ನಾಸಿರುದ್ದೀನ್ ಶಾ, ವಿಜಯ್ ವರ್ಮಾ ಮತ್ತು ಪಂಕಜ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ವಿಚಾರವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್‌ಫ್ಲಿಕ್ಸ್ ಇಂಡಿಯಾ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್ ಅವರಿಗೆ ಸಮನ್ಸ್ ನೀಡಿದೆ.
ವಾಸ್ತವ ಏನು ಅನ್ನೋದನ್ನು ಹೇಳಿರುವ ಅನುಭವ್ ಸಿನ್ಹಾ ಹೈಜಾಕರ್‌ಗಳು ತಮ್ಮ ನಡುವಿನ ಸಂವಹನದಲ್ಲಿ ತಮ್ಮನ್ನು (1)ಚೀಫ್, (2) ಡಾಕ್ಟರ್, (3) ಬರ್ಗರ್, (4) ಭೋಲಾ ಮತ್ತು (5) ಶಂಕರ್ ಎಂಬ ಸಾಂಕೇತಿಕ ಹೆಸರುಗಳಿಂದ ಕರೆದುಕೊಳ್ಳುತ್ತಿದ್ದರು. ಕೊನೆಗೆ ಅವರ ಹೆಸರು ಗೊತ್ತಾಗಿತ್ತು. ಅದನ್ನೇ ಸರಣಿಯಲ್ಲಿ ತೋರಿಸಲಾಗಿದೆ ಎಂದು ವಾದಿಸಿದ್ದಾರೆ. ಆದರೆ ವಿಷಯ ಅದಿಷ್ಟೇ ಅಲ್ಲ,
ವೆಬ್ ಸರಣಿಯಲ್ಲಿ ಪಾಕಿಸ್ತಾನದ ಐಎಸ್‌ಐ ಕೈವಾಡ ಇದ್ದ ವಿಷಯವನ್ನು ಬೇಕೆಂದರೆ ಮುಚ್ಚಿಡಲಾಗಿದೆ. ಹೈಜಾಕ್ ಮಾಡಿಸಿದ್ದವನು ಒಸಾಮಾ ಬಿನ್ ಲಾಡೆನ್ ಎಂಬಂತೆ ತೋರಿಸಲಾಗಿದೆ. ಆದರೆ ವಾಸ್ತವವಾಗಿ ಅದು ಸುಳ್ಳು.
ಉಗ್ರರಲ್ಲಿ ಮಾನವೀಯತೆಯೂ ಇತ್ತು ಎಂಬಂತೆ ತೋರಿಸಲಾಗಿದೆ. ಹೈಜಾಕ್ ಮಾಡಿದ್ದ ಉಗ್ರರನ್ನು ಒಬ್ಬ ಏರ್ ಹೋಸ್ಟೆಲ್ ಲವ್ ಮಾಡುತ್ತಿದ್ದರು ಎಂಬಂತೆ ಚಿತ್ರಿಸಲಾಗಿದೆ.
ಅಲ್ಲದೆ ಅಜಿತ್ ದೋವಲ್ ಅವರನ್ನು ವೆಬ್ ಸಿರೀಸ್ʻನಲ್ಲಿ ಜೋಕರ್ ರೀತಿ ಬಿಂಬಿಸಲಾಗಿದೆ ಎನ್ನುವ ಆಕ್ರೋಶವೂ ಸಾಮಾಜಿಕ ಜಾಲತಾಣದ್ದು.
ಅಲ್ಲದೆ ಚಿತ್ರದಲ್ಲಿ ಕ್ಯೂಟ್ ಹೈ, ಆವ್.., ವಾಷ್ ರೂಂ.. ಮುಂತಾದ ಪದಗಳ ಬಳಕೆ ಇದೆ. ೨೫ ವರ್ಷಗಳ ಹಿಂದೆ ಅಂತಹ ಪದಗಳ ಬಳಕೆಯೇ ಇರಲಿಲ್ಲ. ಇದೊಂದು ರಬ್ಬಿಷ್ ಸಿರೀಸ್ ಎಂದು ಆ ವಿಮಾನದಲ್ಲಿದ್ದ ಸಿಬ್ಬಂದಿಯೇ ಆರೋಪಿಸಿದ್ದಾರೆ.
ರಿಯಾಲಿಟಿ ಏನು..?
ಆ ಉಗ್ರರು ಹಿಂದೂಗಳು ಎನ್ನುವಂತೆ ಹೈಜಾಕ್ ಮಾಡಿದ್ದ ಉಗ್ರರು ಬಿಂಬಿಸಿಕೊಂಡಿದ್ದರು. ತಮ್ಮ ತಮ್ಮ ಹೆಸರನ್ನು ಹಿಂದೂಗಳಂತೆಯೇ ಕರೆದುಕೊಳ್ಳುತ್ತಿದ್ದರು. ಆದರೆ.. ಅದು ನಾಟಕ ಎನ್ನುವುದು ಕೂಡಾ ಗೊತ್ತಾಗಿತ್ತು. ಉಗ್ರರು ರಿಲೀಸ್ ಮಾಡಿಸಿಕೊಂಡಿದ್ದ ಉಗ್ರರ ಲಿಸ್ಟಿನಲ್ಲಿ ಈಗಲೂ ಭಾರತವನ್ನೂ ಕಾಡುತ್ತಿರುವ ಅಜರ್ ಮಸೂದ್ ಕೂಡಾ ಇದ್ದಾನೆ. ಅವರ ರಿಯಲ್ ಹೆಸರುಗಳನ್ನು ಭಾರತ ಸರ್ಕಾರ ಅಧಿಕೃತ ದಾಖಲೆಯಲ್ಲಿ ಪ್ರಕಟಿಸಿದೆ. ಇನ್ನು ವೆಬ್ ಸಿರೀಸ್‌ನಲ್ಲಿ ಅನಗತ್ಯವಾಗಿ ಹಿಂದೂಗಳನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಪಾಕಿಸ್ತಾನದ ಕೈವಾಡ ಇದ್ದದ್ದೇ ಸುಳ್ಳು ಎಂಬಂತೆ ತೋರಿಸಲಾಗಿದೆ. ಬಿಡುಗಡೆಗೊಂಡ ಅಜರ್ ಮಸೂದ್ ಈಗಲೂ.. ಈ ಕ್ಷಣಕ್ಕೂ ಇರುವುದು ಪಾಕಿಸ್ತಾನದಲ್ಲಿ ಎನ್ನುವುದನ್ನು ವೆಬ್ ಸಿರೀಸ್ ಹೇಳೋದಿಲ್ಲ.



