ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ..
ಕನಸೇ ಇಲ್ಲದ ಹಾದಿಯಲಿ ಹೇಗೇ ನಡೆಯಲಿ..
ಈ ಮಾತನ್ನು ಹಲವು ಸಾಹಿತಿಗಳು ಬರೆದಿದ್ದಾರೆ. ಗಿರೀಶ್ ಕಾರ್ನಾಡ್ ನಾಟಕಗಳಲ್ಲಿ, ರವಿಚಂದ್ರನ್ ಹಾಡುಗಳಲ್ಲಿ ಈ ಸಾಲು ಬಂದು ಹೋಗಿದೆ. ಆದರೆ ಕನಸಿಗೂ ಒಂದು ಶಾಸ್ತ್ರವಿದೆ ಎನ್ನುವುದು ಗೊತ್ತೇ.. ಹೌದು, ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಕಾಣುವ ಕೆಲವು ಘಟನೆಗಳು ಮುಂಬರುವ ಭವಿಷ್ಯದ ಸೂಚನೆಗಳಂತೆ.
ಕನಸುಗಳದ್ದು ಒಂದು ವಿಶಿಷ್ಟ ಲೋಕ. ಕನಸುಗಳು ನಮಗೆ ಭವಿಷ್ಯದಲ್ಲಿ ನಡೆಯುವ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತವೆ. ಸ್ವಪ್ನ ಶಾಸ್ತ್ರದಲ್ಲಿ ನಿಮ್ಮ ಅದೃಷ್ಟವನ್ನು ಬದಲಾಯಿಸಬಲ್ಲ ಕೆಲವು ಕನಸುಗಳ ಬಗ್ಗೆ ತಿಳಿಸಲಾಗಿದೆ. ಕನಸಿನಲ್ಲಿ ಈ ವಿಶೇಷ ವಸ್ತುಗಳನ್ನು ನೋಡುವುದರ ಅರ್ಥ ಶೀಘ್ರದಲ್ಲೇ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ಎಂದೇ.
ಜಲಪಾತ ಕಂಡರೆ..
ಕನಸಿನಲ್ಲಿ ಜಲಪಾತ ಕಂಡರೆ, ಒಳ್ಳೆಯ ಸಮಯ ಪ್ರಾರಂಭವಾಗುತ್ತಿದೆ ಎಂದು ಅರ್ಥ. ಕನಸಿನಲ್ಲಿ ನೀರು ನೋಡುವುದು ತುಂಬಾ ಶುಭ. ಈ ರೀತಿಯ ಕನಸುಗಳು ಬಹಳ ಕಡಿಮೆ ಜನರಿಗೆ ಬರುತ್ತವೆ.
ಆಕಾಶದಲ್ಲಿ ಹಾರುವ ಕನಸು ಬಿದ್ದರೆ..
ಯಾರಾದರೂ ತಮ್ಮನ್ನು ತಾವೇ ಆಕಾಶದಲ್ಲಿ ಹಾರುತ್ತಿರುವುದನ್ನು ಕನಸಿನಲ್ಲಿ ಕಂಡರೆ ಅದು ಶುಭ ತರುತ್ತದೆ.. ಈ ಕನಸು ಮುಂಬರುವ ಸಮಯವು ತುಂಬಾ ಶುಭ ಎಂದರ್ಥ. ಜೀವನದಲ್ಲಿ ಸಂತೋಷಗಳು ಬರುತ್ತವೆ ಮತ್ತು ನಿಮ್ಮ ವೃತ್ತಿಜೀವನವು ಹೊಸ ಎತ್ತರವನ್ನು ತಲುಪುತ್ತದೆ ಎಂಬುದರ ಸಂಕೇತ.
ಶಂಖ ದರ್ಶನ ಮಾಡಿದರೆ..
ಕನಸಿನಲ್ಲಿ ಶಂಖ ಕಂಡರೆ, ಅದನ್ನು ಮಹಾಲಕ್ಷ್ಮಿಯ ಆಶೀರ್ವಾದ ಎಂದೇ ಭಾವಿಸಬೇಕು. ಅಂತಹ ಜನರ ಮೇಲೆ ಲಕ್ಷ್ಮಿ ದೇವಿಯ ಕೃಪೆ ಯಾವಾಗಲೂ ಇರುತ್ತದೆ ಮತ್ತು ಅವರಿಗೆ ಶೀಘ್ರದಲ್ಲೇ ದೊಡ್ಡ ಧನಲಾಭವಾಗುವ ಯೋಗವಿದೆ. ಕನಸಿನಲ್ಲಿ ಶಂಖ ಊದುವುದು ಕೇಳಿದರೆ ಅದು ಇನ್ನೂ ಶುಭ.
ಮಳೆಯನ್ನು ನೋಡಿದರೆ..
ಕನಸಿನಲ್ಲಿ ಮಳೆ ನೋಡುವುದು ಕೂಡ ಶುಭ ತರುವ ಸೂಚನೆ. ನೀರು ಸ್ವಚ್ಛವಾಗಿದ್ದರೆ ಇನ್ನೂ ಒಳ್ಳೆಯದು. ಮಳೆಯಲ್ಲಿ ನೆನೆಯುವುದನ್ನು ನೋಡುವುದರ ಅರ್ಥ ದೇವರ ಅನುಗ್ರಹ ನಿಮ್ಮ ಮೇಲಿದೆ.
ಮಳೆಬಿಲ್ಲು ಕಂಡರೆ..
ಮಳೆಬಿಲ್ಲು ಅಂದರೆ ಕಾಮನಬಿಲ್ಲು ಕಂಡರೆ, ನಿಮ್ಮ ಜೀವನದಲ್ಲಿ ಸುಖ-ಸಮೃದ್ಧಿ ಇರುತ್ತದೆ ಮತ್ತು ಸಮಾಜದಲ್ಲಿ ಗೌರವ ಸಿಗುತ್ತದೆ. ಅಂತಹ ಕನಸುಗಳು ವೃತ್ತಿಜೀವನದಲ್ಲಿ ಯಶಸ್ಸಿನ ಸಂಕೇತವನ್ನೂ ನೀಡುತ್ತವೆ.
ಹೆತ್ತವರು ನೀರು ಕುಡಿಯುವ ಕನಸು ಬಿದ್ದರೆ..
ಕನಸಿನಲ್ಲಿ ಪೋಷಕರು ಅಥವಾ ಹೆತ್ತವರು ನೀರು ಕುಡಿಯುವುದನ್ನು ನೋಡುವುದು ಶುಭವೆಂದು ಪರಿಗಣಿಸಲಾಗಿದೆ. ಇದರರ್ಥ ನೀವು ಶೀಘ್ರದಲ್ಲೇ ಬಡ್ತಿ ಪಡೆಯಬಹುದು. ಆದರೆ ಈ ಕನಸನ್ನು ನೀವು ಯಾರೊಂದಿಗೂ ಹೇಳಬೇಡಿ.
ಬೆಳ್ಳಿ ಪಾತ್ರೆ ಕಂಡರೆ..
ಕನಸಿನಲ್ಲಿ ಬೆಳ್ಳಿ ತುಂಬಿದ ಪಾತ್ರೆಯನ್ನು ನೋಡುವುದು ಶುಭವೆಂದು ಪರಿಗಣಿಸಲಾಗಿದೆ. ಇದನ್ನು ನೋಡುವುದರಿಂದ ಶೀಘ್ರದಲ್ಲೇ ನೀವು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲಿದ್ದೀರಿ ಎಂದರ್ಥ. ಇದರರ್ಥ ಹಠಾತ್ ಸಂಪತ್ತನ್ನು ಸ್ವೀಕರಿಸುವುದು.
ದೇವರ ದರ್ಶನವಾದರೆ..
ಕನಸಿನಲ್ಲಿ ದೇವರನ್ನು ನೋಡುವುದು ಶುಭವೆಂದು ಪರಿಗಣಿಸಲಾಗಿದೆ. ದೇವರನ್ನು ನೋಡುವುದು ಎಂದರೆ ನಿಮ್ಮ ಜೀವನದ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ಕೊನೆಗೊಳ್ಳುತ್ತವೆ ಎಂದರ್ಥ.
ಕೆಟ್ಟ ಕನಸು ಬಿದ್ದರೆ..
ಕೆಟ್ಟ ಕನಸು ಬಿದ್ದರೆ.. ಬೇರೇನು ಮಾಡಬೇಕಿಲ್ಲ. ಮನೆ ದೇವರಿಗೆ ಪೂಜಿಸಿ. ಹಸು, ಪಕ್ಷಿಗಳಿಗೆ ಆಹಾರ ನೀಡಿ ಕೈಮುಗಿಯಿರಿ. ನಿಮ್ಮ ಇಷ್ಟದೇವರ ಮಂತ್ರ ಪಠಣೆ ಮಾಡಿ.