Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Astrology

ಶಾಸ್ತ್ರದ ಪ್ರಕಾರ.. ಯಾವ ರಾಶಿಯ ಸೋದರರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು..?

SpeciallU by SpeciallU
August 13, 2024
in Astrology, News
Reading Time: 1 min read
0 0
0
ಶಾಸ್ತ್ರದ ಪ್ರಕಾರ.. ಯಾವ ರಾಶಿಯ ಸೋದರರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು..?

2024ರ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್‌ 19 ರಂದು ಸೋಮವಾರ ಆಚರಿಸಲಾಗುತ್ತಿದೆ. ಆ ದಿನ ಮಧ್ಯಾಹ್ನ 1.30ರ ನಂತರ ರಕ್ಷಾಬಂಧನ ಕಟ್ಟುವ ಶುಭ ಸಮಯ. ಅದಕ್ಕೂ ಮೊದಲು ರಾಖಿ ಕಟ್ಟಿದರೆ, ಶನಿಯ ಸೋದರಿ ಭದ್ರಾಳ ನೆರಳು ಬೀಳುತ್ತದೆ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಈ ದಿನ ಪ್ರತಿ ರಾಶಿಯವರಿಗೂ ಒಂದು ವಿಶೇಷ ಬಣ್ಣದ ರಾಖಿ ಇರುತ್ತದೆ. ರಕ್ಷಾಬಂಧನದ ದಿನ ಸಹೋದರಿಯರು ತನ್ನ ಸಹೋದರರ ಮಣಿಕಟ್ಟಿನ ಮೇಲೆ ರಕ್ಷಾ ಸೂತ್ರವನ್ನು ಕಟ್ಟುವ ಮೂಲಕ ಸಂತೋಷ ಮತ್ತು ರಕ್ಷಣೆಯ ಜೀವನವನ್ನು ಬಯಸುತ್ತಾರೆ. ರಾಶಿಚಕ್ರ ಚಿಹ್ನೆಯ ಪ್ರಕಾರ, ಬಣ್ಣ ಮತ್ತು ವಿನ್ಯಾಸದ ಆಧಾರದ ಮೇಲೆ ಸಹೋದರನಿಗೆ ರಾಖಿ ಕಟ್ಟುವುದರಿಂದ ಜೀವನದಲ್ಲಿ ಉತ್ತಮ ಬದಲಾವಣೆಗಳು ಉಂಟಾಗುತ್ತದೆ. ಹಾಗೂ ಸಹೋದರನ ಜೀವನದಲ್ಲಿನ ಅದೆಷ್ಟೋ ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.

ಮೇಷ ರಾಶಿ :

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಮೇಷ ರಾಶಿಯ ಸಹೋದರರಿ ಕೆಂಪು ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣವು ಮೇಷ ರಾಶಿಯ ಧೈರ್ಯ ಮತ್ತು ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ.

ವೃಷಭ ರಾಶಿ :

ವೃಷಭ ರಾಶಿಯ ಅಣ್ಣ ಅಥವಾ ತಮ್ಮನಿಗೆ ಬಿಳಿ ಅಥವಾ ಗುಲಾಬಿ ಬಣ್ಣದ ರಾಖಿಯನ್ನು ಕಟ್ಟುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಬಣ್ಣವು ಅವರ ಶಾಂತಿ ಮತ್ತು ತಾಳ್ಮೆಯನ್ನು ಹೆಚ್ಚಿಸುತ್ತದೆ ಮತ್ತು ಅವರಿಗೆ ಮಾನಸಿಕ ಸ್ಥಿರತೆಯನ್ನು ಒದಗಿಸುತ್ತದೆ. ಇದರಿಂದಾಗಿ ಅವರಿಗೆ ತಮ್ಮ ಸಹೋದರಿಯ ಮೇಲೆ ಪ್ರೀತಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ.

ಮಿಥುನ ರಾಶಿ :

ಮಿಥುನ ರಾಶಿಯ ಸಹೋದರನಾಗಿದ್ದರೆ ಅವರಿಗೆ ಹಸಿರು ಬಣ್ಣದ ರಾಖಿಯನ್ನು ಕಟ್ಟಬೇಕು. ಹಸಿರು ಬಣ್ಣವನ್ನು ಮಿಥುನ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣವು ಮಿಥುನ ರಾಶಿಯ ಜನರ ಮನಸ್ಸನ್ನು ಚುರುಕುಗೊಳಿಸುತ್ತದೆ ಮತ್ತು ಅವರ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಕಟಕ ರಾಶಿ :

ಕರ್ಕ ರಾಶಿಯ ಸಹೋದರನಿದ್ದರೆ, ಅವರಿಗೆ ಬಿಳಿ, ಬೆಳ್ಳಿ ಅಥವಾ ನೀಲಿ ಬಣ್ಣದ ರಾಖಿಯನ್ನು ಕಟ್ಟಬೇಕು. ಈ ಬಣ್ಣವು ಅವರ ಭಾವನಾತ್ಮಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತದೆ ಮತ್ತು ಅವರಿಗೆ ಮಾನಸಿಕ ಶಾಂತಿಯನ್ನು ಒದಗಿಸುತ್ತದೆ.

ಸಿಂಹ ರಾಶಿ :

ಸಿಂಹ ರಾಶಿಯ ಅಣ್ಣತಮ್ಮಂದಿರಿಗೆ ಕೆಂಪು, ಕಿತ್ತಳೆ ಅಥವಾ ಚಿನ್ನದ ಬಣ್ಣದ ರಾಖಿಯನ್ನು ಕಟ್ಟುವುದು ಒಳ್ಳೆಯದು. ಈ ಬಣ್ಣವು ಅವರ ಸ್ವಾಭಿಮಾನ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅವರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಇದು ಅವರಿಗೆ ಸೂರ್ಯ ದೇವನ ಆಶೀರ್ವಾದ ನೀಡುತ್ತಾನೆ ಎನ್ನುವ ನಂಬಿಕೆಯಿದೆ.

ಕನ್ಯಾ ರಾಶಿ :

ಕನ್ಯಾ ರಾಶಿಯವರಿಗೆ ಹಸಿರು ಅಥವಾ ತಿಳಿ ಹಳದಿ ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರ.  ಈ ಬಣ್ಣವು ಅವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ.

ತುಲಾ ರಾಶಿ :

ತುಲಾ ರಾಶಿಯವರಿಗೆ ಸಹೋದರಿಯರು ಗುಲಾಬಿ, ಬಿಳಿ ಅಥವಾ ನೀಲಿ ಬಣ್ಣದ ರಾಖಿಯನ್ನು ಕಟ್ಟಬಹುದು. ತುಲಾ ರಾಶಿಯವರಿಗೆ ಈ ಬಣ್ಣದ ರಾಖಿ ಕಟ್ಟುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಸೌಂದರ್ಯ ಮತ್ತು ಸಮತೋಲನವನ್ನು ಪ್ರತಿನಿಧಿಸುವ ಈ ಬಣ್ಣಗಳು ತುಲಾ ರಾಶಿಯವರಿಗೆ ಶಾಂತಿಯನ್ನು ನೀಡುತ್ತವೆ.

ವೃಶ್ಚಿಕ ರಾಶಿ :

ವೃಶ್ಚಿಕ ರಾಶಿಯವರಿಗೆ ಕೆಂಪು ಅಥವಾ ಮರೂನ್ ಬಣ್ಣದ ರಾಖಿಯನ್ನು ಕಟ್ಟಬಹುದು. ಈ ಬಣ್ಣವು ಅವರ ಧೈರ್ಯ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.

ಧನು ರಾಶಿ :

ಧನು ರಾಶಿಯವರು ಹಳದಿ ಅಥವಾ ಕಿತ್ತಳೆ ಬಣ್ಣದ ರಾಖಿಯನ್ನು ಕಟ್ಟಬೇಕು. ಈ ಬಣ್ಣವು ಧನು ರಾಶಿ ಜನರ ಉತ್ಸಾಹ ಮತ್ತು ಆಶಾವಾದವನ್ನು ಹೆಚ್ಚಿಸುತ್ತದೆ ಮತ್ತು ಪ್ರಗತಿಯ ಹೊಸ ಮಾರ್ಗವನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.

ಮಕರ ರಾಶಿ :

ಮಕರ ರಾಶಿಯವರಿಗೆ ಕಪ್ಪು, ಕಂದು ಅಥವಾ ನೀಲಿ ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಬಣ್ಣವು ಅವರ ತಾಳ್ಮೆ ಮತ್ತು ಸಂತೋಷ ಹಾಗೂ ಸಮೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ಅವರ ಗುರಿಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಉತ್ತಮ ಬದಲಾವಣೆಯನ್ನು ಕೂಡ ತರುತ್ತದೆ.

ಕುಂಭ ರಾಶಿ :

ನೀಲಿ ಬಣ್ಣದ ರಾಖಿಯನ್ನು ಕಟ್ಟಬೇಕು. ಈ ಬಣ್ಣವು ಅವರ ಸ್ವಾತಂತ್ರ್ಯ ಮತ್ತು ಸ್ವಂತಿಕೆಯನ್ನು ಉತ್ತೇಜಿಸುತ್ತದೆ ಮತ್ತು ನವೀನ ಆಲೋಚನೆಗಳೊಂದಿಗೆ ಅವರನ್ನು ಪ್ರೇರೇಪಿಸುತ್ತದೆ.

ಮೀನ ರಾಶಿ :

ಮೀನ ರಾಶಿಯ ಸಹೋದರರಿಗೆ ಹಳದಿ ಅಥವಾ ತಿಳಿ ಹಸಿರು ಬಣ್ಣದ ರಾಖಿಯನ್ನು ಕಟ್ಟುವುದು ಶುಭದಾಯಕ. ಈ ಬಣ್ಣದ ರಕ್ಷಾಬಂಧನವು ಸೋದರರ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಹಾಗೂ ಮಾನಸಿಕವಾಗಿ ಪ್ರಬಲರನ್ನಾಗಿ ಮಾಡುತ್ತದೆ.

Tags: #ರಕ್ಷಾಬಂಧನ #ರಾಖಿ #ಜ್ಯೋತಿಷ್ಯಶಾಸ್ತ್ರ #ಬಣ್ಣ #ರಾಶಿ #RakshaBandhana #Rakhi #Astrology #Color #Rashi #zodiacsign
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.