ಸೂರಿ ( Dunia soori ) ಚಿತ್ರ ಎಂದ ಮೇಲೆ ಅಲ್ಲೊಂದಿಷ್ಟು ಹಿಂಸೆ, ರಕ್ತಪಾತ ಇರಲೇಬೇಕು. ಸೂರಿ ತಮ್ಮ ಎಲ್ಲ ಚಿತ್ರಗಳಲ್ಲೂ ಹಿಂಸೆ, ರಕ್ತ, ರೌಡಿಸಂ ಎಲ್ಲವನ್ನೂ ಹಸಿಹಸಿಯಾಗಿ ತೋರಿಸಿಯೇ ಫೇಮಸ್ ಆದವರು. ಅಷ್ಟೇ ಒರಟು ಭಾಷೆಯನ್ನು ಸಿನಿಮಾಗಳಲ್ಲಿ ಯಥಾವತ್ ಆಗಿ ಬಳಸಿದವರು. ಅದು ಬ್ಯಾಡ್ ಮ್ಯಾನರ್ಸ್ ( bad manners ) ಚಿತ್ರದಲ್ಲೂ ರಿಪೀಟ್ ಆಗಿದೆ.
ಬ್ಯಾಡ್ ಮ್ಯಾನರ್ಸ್ ( bad manners ) ಚಿತ್ರದ ಒಂದು ಸನ್ನಿವೇಶದಲ್ಲಿ ‘ಮೆಂಟಲ್’ ( mental ) ಎನ್ನುವ ಡೈಲಾಗ್ ಬರುತ್ತೆ. ಆ ಪದಕ್ಕೆ ಮ್ಯೂಟ್ ಮಾಡುವಂತೆ ಹೇಳಿದೆ ಸೆನ್ಸಾರ್ ಬೋರ್ಡ್ ( censor board ). ಬಿಯರ್ ಬಾಟಲಿ ಮೇಲಿನ ಬ್ರ್ಯಾಂಡ್ ಹೆಸರು ಬ್ಲರ್ ಮಾಡುವಂತೆಯೂ ಸೂಚನೆ ನೀಡಿದೆ. ಮತ್ತೊಂದು ಸನ್ನಿವೇಶದಲ್ಲಿ ಡ್ರಗ್ಸ್ ತೋರಿಸುವಾಗ ಡ್ರಗ್ಸ್ ಸೇವಿಸುವುದು ಜೀವಕ್ಕೆ ಹಾನಿಕರ ಹಾಗೂ ಅಪರಾಧ ಎಂದು ಡಿಸ್‍ಕ್ಲೇಮರ್ ಹಾಕುವಂತೆ ಸೂಚಿಸಿದೆ. ಅಷ್ಟೇ ಅಲ್ಲ, ಚಿತ್ರದಲ್ಲಿ ತಲೆಯಿಂದ ರಕ್ತ ಸೋರುವ, ತ್ರಿಶೂಲವನ್ನು ಕುತ್ತಿಗೆಗೆ ಚುಚ್ಚುವ, ಬಾಯಿಯೊಳಗೆ ಗನ್ ಇಟ್ಟು ಶೂಟ್ ಮಾಡುವ ದೃಶ್ಯಗಳಿಗೆ ಕತ್ತರಿ ಹಾಕಿದೆ. ಸದ್ಯ ಸಿನಿಮಾ ಸೆನ್ಸಾರ್ ಕಂಪ್ಲೀಟ್ ಆಗಿದ್ದು ಸಿಕ್ಕಾಪಟ್ಟೆ ವೈಲೆಂಟ್ ಆಗಿರುವ ಒಂದಷ್ಟು ಸನ್ನಿವೇಶಗಳಿಗೆ ಸೆನ್ಸಾರ್ ಕಟ್ ಹೇಳಿ ಯು/ಎ ಸರ್ಟಿಫಿಕೇಟ್ ನೀಡಿದೆ.
ದುನಿಯಾ ಸೂರಿ ( Dunia Suri ) ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾ ರಿಲೀಸ್ಗೆ ರೆಡಿ ಆಗ್ತಿದೆ. ಇದು ಅಭಿಷೇಕ್ ಅಂಬರೀಷ್ ( Abhishek ambareesh ) ಅಭಿನಯದ 2ನೇ ಸಿನಿಮಾ. ಅಭಿಗೆ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ‘ಪಾಪ್ಕಾರ್ನ್ ಮಂಕಿ ಟೈಗರ್’ ( Pop corn monkey tiger ) ಬಳಿಕ ದುನಿಯಾ ಸೂರಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿಷೇಕ್ ( Abhishek ambareesh ) ಅಬ್ಬರಿಸಿದ್ದಾರೆ.
ಸೆನ್ಸಾರ್ ವೇಳೆ ಚಿತ್ರದ ಕೆಲವು ಸನ್ನಿವೇಶ, ಸಂಭಾಷಣೆಗಳಿಗೆ ಕತ್ತರಿ ಹಾಕುವುದಕ್ಕೆ ಹಾಗೂ ಮ್ಯೂಟ್ ಮಾಡುವುದಕ್ಕೆ ಸೂಚಿಸಲಾಗಿದೆ.
ಅಭಿಷೇಕ್ ಅಂಬರೀಷ್ ( Abhishek ambareesh ) ಅವರಿಗೆ ಬ್ಯಾಡ್ ಮ್ಯಾನರ್ಸ್ ಮೇಲೆ ಭಾರಿ ನಿರೀಕ್ಷೆ ಇದೆ. ಸೂರಿ ಎಂದಿನಂತೆ ವಿಭಿನ್ನ ಪಾತ್ರಗಳನ್ನು ಸೃಷ್ಟಿಸಿ, ಅದಕ್ಕೆ ವಿಚಿತ್ರ ಹೆಸರುಗಳನ್ನಿಟ್ಟು ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ( Abhishek ambareesh ) ಅಭಿ- ರಚಿತಾ (Rachitha ram ) ಕಾಂಬಿನೇಷನ್ ಕೂಡ ನಿರೀಕ್ಷೆ ಮೂಡಿಸಿರೋದು ಸುಳ್ಳಲ್ಲ. ಪ್ರಿಯಾಂಕಾ ಕುಮಾರ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಒಂದು ರಗಡ್ ಕತೆಗೆ ಸೂರಿ ಸುಕ್ಕಾ ಟ್ರೀಟ್ಮೆಂಟ್ ನೋಡೋಕೆ ಅಭಿಮಾನಿಗಳಂತೂ ಕಾಯುತ್ತಿದ್ದಾರೆ. ಜೊತೆಗೆ ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿವೆ. ಇವೆಲ್ಲವೂ ಚಿತ್ರಕ್ಕೆ ಪ್ಲಸ್ ಆಗುವ ನಿರೀಕ್ಷೆ ಇದೆ.



