ಅಭಿಷೇಕ್ ಅಂಬರೀಷ್ (abhishek ambareesh). ಅಮರ್ (Amar) ರಿಲೀಸ್ ಆಗಿ ಕೆಲವು ವರ್ಷಗಳ ನಂತರ 2ನೇ ಸಿನಿಮಾ ಬರುತ್ತಿದೆ. ಎರಡು ಸಿನಿಮಾ ರಿಲೀಸ್ ಮಧ್ಯೆ ಅಭಿಷೇಕ್ ಮದುವೆಯಾಗಿ ಸಂಸಾರಸ್ಥನಾಗಿದ್ಧಾರೆ. ಅಮರ್ ಚಿತ್ರ ರಿಲೀಸ್ ಆಗಿದ್ದು ಸುಮಲತಾ ಅಂಬರೀಷ್ (sumalatha ambareesh) ಮಂಡ್ಯ ಕ್ಷೇತ್ರದ ಸಂಸದೆಯಾಗುವುದಕ್ಕೂ ಮುನ್ನ. ಈಗ ಮಂಡ್ಯ ಕ್ಷೇತ್ರದ ಸಂಸದೆಯ ಸ್ಥಾನದ ಅವಧಿ ಮುಕ್ತಾಯದ ಹೊತ್ತಿನಲ್ಲಿ ಎರಡನೇ ಸಿನಿಮಾ ಬರುತ್ತಿದೆ. ಅಭಿಷೇಕ್ ಅಂಬರೀಷ್, ರಚಿತಾ ರಾಮ್ (Rachitha ram) ಅಭಿನಯದ ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ನವೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಟ್ರೆಂಡ್ ಆಗಿವೆ. ಚಿತ್ರದ ಟೈಟಲ್ ಟ್ರ್ಯಾಕ್, ರೊಮೈಾಂಟಿಕ್ ದೃಶ್ಯಗಳುಳ್ಳ ಹಾಡುಗಳು ಹಬ್ಬ ಮಾಡುತ್ತಿವೆ. ಅಷ್ಟೇ ಭರ್ಜರಿ ಆಕ್ಷನ್ ಚಿತ್ರವಾಗಿಯೂ ಬ್ಯಾಡ್ ಮ್ಯಾನರ್ಸ್ (bad maners) ಗಮನ ಸೆಳೆಯುತ್ತಿದೆ. ಅಭಿಷೇಕ್ ಅಂಬರೀಷ್ ನಟಿಸಿರುವ ಎರಡನೇ ಸಿನಿಮಾ ಬ್ಯಾಡ್ ಮ್ಯಾನರ್ಸ್.
ಸೂರಿ (dunia soori) ತಮ್ಮ ಪ್ರತಿ ಸಿನಿಮಾದಲ್ಲಿಯೂ ಸಮಾಜದಲ್ಲಿ ನಡೆಯುವ ವಿಷಯವನ್ನು ಕಮರ್ಷಿಯಲ್ ದೃಷ್ಟಿಯಿಂದ ಹೇಳುತ್ತಾರೆ. ಸಣ್ಣ ವಿಷಯಗಳೇ ಆದರೂ ಅದರ ಎಫೆಕ್ಟ್ ಜಾಸ್ತಿ ಇರುತ್ತದೆ. ಈಗ ಅಂತಹದ್ದೇ ಒಂದು ವಿಷಯವನ್ನು ‘ಬ್ಯಾಡ್ ಮ್ಯಾನರ್ಸ್’ನಲ್ಲಿಯೂ ಅಂತದ್ದೇ ಕಥೆ ಇಟ್ಟುಕೊಂಡಿದ್ಧಾರೆ.
ಸಮಾಜವನ್ನು ಕ್ಲೀನ್ ಮಾಡಲು ಪೊಲೀಸ್ ಅಧಿಕಾರಿಗಳಿಗೆ ‘ಬ್ಯಾಡ್ ಮ್ಯಾನರ್ಸ್’ ಇದ್ದರೆ ಮಾತ್ರ ಸಾಧ್ಯ ಎಂಬ ಥೀಮ್ ಮೇಲೆ ಸಿನಮಾ ಮಾಡ್ತಿರೋದಾಗಿ ದುನಿಯಾ ಸೂರಿ ಚಿತ್ರದ ಶುರುವಾದಾಗ ಹೇಳಿದ್ದರು. ಮನುಷ್ಯನಿಗೆ ಆಹಾರ, ನೀರು, ಮಾತು ಬಹಳ ಮುಖ್ಯ. ಅದರಲ್ಲಿಯೂ ಮಾತು ಎಂಬುದು ಬಹಳ ದೊಡ್ಡ ಅಸ್ತ್ರ. ಎಷ್ಟೋ ಯುದ್ಧಗಳು ಮಾತಿನಿಂದಲೇ ನಿಂತು ಹೋಗುತ್ತವೆ ಮತ್ತು ಆರಂಭವಾಗುತ್ತವೆ. ಹಾಗಾಗಿ ನಾವು ಆಡುವ ಮಾತು ಬಹಳ ಮುಖ್ಯ ಎಂಬ ವಿಷಯವನ್ನು ಸಹ ಇಲ್ಲಿ ಹೇಳುತ್ತಿದ್ದೇನೆ ಎಂದೂ ಆಗ ಹೇಳಿದ್ದರು ಸೂರಿ. ಇದೀಗ ಸಿನಿಮಾ ರಿಲೀಸ್ ಆಗುವುದಕ್ಕೆ ಸಿದ್ಧವಾಗಿದ್ದು, ನವೆಂಬರ್ 24ಕ್ಕೆ ತೆರೆಯ ಮೇಲೆ ಪ್ರತ್ಯಕ್ಷವಾಗಲಿದೆ ಬ್ಯಾಡ್ ಮ್ಯಾನರ್ಸ್.



