ಒಂದು ಮದುವೆಯಾದವರ ಕಥೆಗಳೇ ಚಿತ್ರ ವಿಚಿತ್ರವಾಗಿರುತ್ತವೆ. ಆದ್ರೂ ಒಂದು ಮದುವೆ ಓಕೆ, ಎರಡು ಮದುವೆ ಅಪರಾಧ. ಹಿಂದೂಗಳಲ್ಲಿ ಪತ್ನಿ ಇರುವಂತೆಯೇ ಇನ್ನೊಬ್ಬರೊಂದಿಗೆ (Hindu Marriage act) ಮದುವೆಯಾಗುವಂತಿಲ್ಲ. ಕ್ರೈಸ್ತರಲ್ಲೂ (Christian marriage act) ಕೂಡಾ ಒಂದೇ ಮದುವೆ. ಮುಸ್ಲಿಮರಲ್ಲಿ (muslima) ಮಾತ್ರ ಬಹುಪತ್ನಿತ್ವಕ್ಕೆ ಅವಕಾಶ ಇದೆ. ಆದರೆ ಅದೂ ಕೂಡಾ ನಾಲ್ಕು ಮದುವೆಯವರೆಗೆ ಅಷ್ಟೆ. ಹೀಗಿರುವಾಗ ಇಲ್ಲೊಬ್ಬ ಯುವಕ ಒಟ್ಟಿಗೇ 7 ಯುವತಿಯರನ್ನು ಮದುವೆಯಾಗಿದ್ದಾರೆ.
ಈ ವಿಚಿತ್ರ ಮದುವೆ ಉಗಾಂಡಾದ (Uganda) ಉಗಾಂಡಾದ ಮುಕೊನೊ ಜಿಲ್ಲೆಯ ಬುಗೆರೆಕಾ (bugarekha) ಗ್ರಾಮದಲ್ಲಿ ಸೆಪ್ಟೆಂಬರ್ 10 ರಂದು ನಡೆದಿದೆ. ಹಜ್ ಹಬೀಬ್ ಎನ್ಸಿಕೊನ್ನೆನ್ (habib) ಎಂಬ ವ್ಯಕ್ತಿ ಏಕಕಾಲಕ್ಕೆ ಏಳು ಯುವತಿಯರನ್ನು ಮದುವೆಯಾಗಿದ್ದು, ಮತ್ತೆ ಇನ್ನಷ್ಟು ಯುವತಿಯರನ್ನು ಮದುವೆ ಆಗುವ ಯೋಚನೆ ಇದೆ ಎಂದು ಘೋಷಣೆ ಮಾಡಿದ್ದಾನೆ. ಇವರೆಲ್ಲರ ಜೊತೆ ಈಗ ಸಾಯುವವರೆಗೂ ಸಂಸಾರ ಮಾಡ್ತಾನಂತೆ. ಅಷ್ಟೇ ಅಲ್ಲ, ಈ 7 ಯುವತಿಯರ ಜೊತೆ ಮತ್ತೆ ಮುಂದೆ ಮದುವೆಯಾಗುವ ಎಲ್ಲರ ಜೊತೆಯಲ್ಲೂ ಸಂಸಾರ ಮಾಡ್ತಾನಂತೆ. ಸಾಯುವವರೆಗೆ.
ಏಳೂ ಜನರನ್ನು ಒಂದೇ ದಿನ ಮದುವೆಯಾಗಿದ್ದೇಕೆ ಎಂದರೆ, ಹೆಂಡತಿಯರಲ್ಲಿ ಅಸೂಯೆ, ದ್ವೇಷ, ಹೊಟ್ಟೆಕಿಚ್ಚು ಇರಬಾರದು. ಬೆಳೆಯಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಅನ್ನೋ ಕಾರಣಕ್ಕೆ ಒಟ್ಟಿಗೇ ಮದುವೆಯಾದೆ ಎಂದಿದ್ದಾನೆ. ಆದರೆ ಹೀಗೆ ಮದುವೆಯಾದವರಲ್ಲಿ ಇಬ್ಬರು ಇವನಿಗೆ ತಂಗಿಯರಾಗಬೇಕಂತೆ. ಆದರೆ ನಮ್ಮಲ್ಲಿ ತಂಗಿಯರನ್ನು ಮದುವೆಯಾಗುವ ಪದ್ಧತಿ ಇದೆ ಅನ್ನೋದು ಈತ ಕೊಟ್ಟಿರುವ ಕ್ಲಾರಿಫಿಕೇಷನ್.
ಈತನ ಈ ಬಹುಪತ್ನಿತ್ವಕ್ಕೆ ಈತನ ತಂದೆ ಮತ್ತು ಅಜ್ಜಂದಿರೇ ಸ್ಫೂರ್ತಿಯಂತೆ. ಅಪ್ಪನಿಗೆ ಐವರು ಹೆಂಡತಿಯರಿದ್ದರೆ, ತಾತನಿಗೆ 6 ಜನ ಹೆಂಡತಿಯರಿದ್ದರು. ಇಬ್ಬರನ್ನೂ ಮೀರಿಸಿರುವ ಈತ 7 ಜನರನ್ನು ಮದುವೆಯಾಗಿದ್ದಾನೆ. ಮೊದಲ ಮದುವೆಯಲ್ಲೇ ತಾತ, ಅಜ್ಜಂದಿರನ್ನು ಹಿಂದಿಕ್ಕಿದ್ದಾನೆ. ಇನ್ನೂ ಇನ್ನೂ ಇನ್ನೂ ಮದುವೆಯಾಗುವುದಾಗಿ ಪ್ರತಿಜ್ಞೆಯನ್ನೂ ಮಾಡಿದ್ದಾನೆ.
ಹೆಂಡತಿಯರ ಜೊತೆ ಈತನಿಗೆ 100 ಮಕ್ಕಳ (100 children) ತಂದೆಯಾಗಬೇಕು ಅನ್ನೋ ಆಸೆಯೂ ಇದೆ. ಇನ್ನೂ ಇನ್ನೂ ಮದುವೆಯಾಗುತ್ತಿರುವುದು ಆ ಕಾರಣಕ್ಕೇ ಅಂತೆ. ನನಗೆ ಮನೆ ತುಂಬಾ ಮಕ್ಕಳಿರಬೇಕು. ಹೆಂಡತಿಯರೂ ಇರಬೇಕು ಎಂದಿರುವ ಈತ ಈಗ ಹೊಸ ಹೊಸ ಹುಡುಗಿಯರ ಹುಡುಕಾಟದಲ್ಲಿದ್ದಾನೆ. ವಿಚಿತ್ರವೆಂದರೆ ಈಗ ಮದುವೆಯಾಗಿರುವ ಏಳಕ್ಕೆ ಏಳೂ ಹೆಂಡತಿಯರು ಗಂಡನ ಈ ಹೆಂಡತಿ ಮತ್ತು ಮಕ್ಕಳ ಸಾಹಸಕ್ಕೆ ಓಕೆ ಎಂದಿದ್ದಾರಂತೆ.
ಹಬೀಬ್ ಬಡವನಲ್ಲ. ಶ್ರೀಮಂತನೇ. ಇನ್ನೂ ನೂರು ಹೆಂಡತಿಯರು ಬಂದರೂ ಸಾಕುವ ಸಾಮಥ್ರ್ಯ, ಆರ್ಥಿಕ ಶಕ್ತಿಯೂ ಇದೆ. ಹೀಗಾಗಿಯೇ ಮದುವೆಯಾಗಿದ್ದಾನೆ. ತಪ್ಪೇನು ಅನ್ನೋದು ಏಳು ಹೆಂಡಿರ ಮುದ್ದಿನ ಗಂಡ ಹಬೀಬ್ ಅಪ್ಪನ ವಾದ. ಅಂದಹಾಗೆ ಉಗಾಂಡದಲ್ಲಿ ಬಹುಪತ್ನಿತ್ವಕ್ಕೆ ಕಾನೂನಿನ ಮಾನ್ಯತೆ ಇದೆ. ಹೆಚ್ಚು ಮದುವೆಯಾಗುವುದು ಅಪರಾಧ ಅಲ್ಲ. ಕಾನೂನು ಪ್ರಕಾರ ಸರಿ. ಹೆಂಡತಿಯರ ಪ್ರಕಾರವೂ ಸರಿ ಇದ್ದ ಮೇಲೆ, ತಪ್ಪೇನಿದೆ ಅಲ್ವಾ..



