ಇತ್ತೀಚೆಗಷ್ಟೇ ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳ ತಡೆಯೋಕೆ ಸಾಧ್ಯವಾಗುತ್ತಿಲ್ಲ ಎಂದು ಕಲ್ಬುರ್ಗಿಯಲ್ಲೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದರು ಸಚಿವ ಶರಣ ಪ್ರಕಾಶ್ ಪಾಟೀಲರು ಹಾಗೂ ಅವರ ಬೆಂಬಲಿಗರ ಹೆಸರು ಕೇಳಿ ಬಂದಿತ್ತು. ಆದರೆ ಶರಣ ಪ್ರಕಾಶ್ ಪಾಟೀಲ್ ಅದನ್ನು ನಿರಾಕರಿಸಿದ್ದರು. ಇದೀಗ ಮತ್ತೊಂದು ಆತ್ಮಹತ್ಯೆ ಸುದ್ದಿ ಬಂದಿದೆ. ಈತ ಹಿಂದೂ ದೇವರನ್ನು ನಿಂದಿಸಿದ್ದ ವ್ಯಕ್ತಿಯೊಬ್ಬನ ಬಣ್ಣ ಬಯಲು ಮಾಡಿದ್ದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ಹುಡುಗ. ಹೆಸರು ಮಾರುತಿ ನಾಯ್ಕ. ವಯಸ್ಸು ಕೇವಲ 35.
ಘಟನೆಯ ವಿವರ : ಮಾರುತಿ ನಾಯ್ಕ ಶುಕ್ರವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಕೆಲಸಕ್ಕೆ ತೆರಳಿ, ಮಕ್ಕಳು ಹೊರಗೆ ಆಟವಾಡುತ್ತಿದ್ದ ವೇಳೆ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾನೆ. ಮನೆಗೆ ಬಂದಾಗ ಪತಿ ನೇಣು ಬಿಗಿದುಕೊಂಡಿದ್ದನ್ನು ನೋಡಿದ ಪತ್ನಿ ಆತನನ್ನು ಇಳಿಸಿ ಸ್ಥಳೀಯರ ಸಹಕಾರದಿಂದ ಕೂಡಲೇ ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದಳು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಾರುತಿ ನಾಯ್ಕ ಸಾವಿವೀಡಾಗಿದ್ದು, ಕಾರವಾರ ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಸಂಘಟನೆಯಲ್ಲಿ ಗುರುತಿಸಿಕೊಳ್ಳುತ್ತಿದ್ದ ಮಾರುತಿ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದು ಹಾಗೂ ಆತನ ಹಣೆ ಭಾಗದಲ್ಲಿ ರಕ್ತ ಸುರಿಯುತ್ತಿದ್ದ ವಿಚಾರ ಸಾಕಷ್ಟು ಜನರಲ್ಲಿ ಅನುಮಾನ ಮೂಡಿಸಿತ್ತು. ಆದರೆ, ಆತ್ಮಹತ್ಯೆಗೂ ಮುನ್ನ ತನ್ನ ಪುತ್ರನ ಚಡ್ಡಿಯ ಕಿಸೆಯಲ್ಲಿ ಇಟ್ಟಿದ್ದ ಸುಸೈಡ್ ನೋಟ್ ಆತ್ಮಹತ್ಯೆಯ ಹಿಂದಿನ ಪ್ರಮುಖ ಕಾರಣವನ್ನು ಬಯಲಿಗೆಳೆದಿದೆ. ಯಾವಾಗ ದಲಿತ ಮುಖಂಡನ ಬಂಡವಾಳವನ್ನು ಈ ಯುವಕ ಬಯಲು ಮಾಡಿದ್ನೋ ಅಂದಿನಿಂದ ಪೊಲೀಸರ ಹಾಗೂ ದಲಿತ ಮುಖಂಡನ ಕುಟುಂಬಸ್ಥರ, ಆಪ್ತರ ಕಾಟ ತಪ್ಪಿರಲಿಲ್ಲ.
ಇದರಿಂದಾಗಿ ತನ್ನ ಪತಿಯದ್ದು ಆತ್ಮಹತ್ಯೆಯಲ್ಲ, ಕೊಲೆ. ಮೊದಲಿಂದ್ಲೂ ಪತಿಗೆ ಜೀವ ಬೆದರಿಕೆ ಹಾಕ್ತಿದ್ರು. ಪೊಲೀಸರು, ಬಸವರಾಜ, ಸುರೇಶ್, ನಾಗಮ್ಮ ಮುಂತಾದವರು ಇದರಲ್ಲಿ ಶಾಮೀಲಾಗಿದ್ದಾರೆ. ನನ್ನ ಗಂಡನ ಮೇಲೆ ಹಲ್ಲೆಯಾಗಿದ್ರೂ ಪೊಲೀಸರು ಆರೋಪಿಗಳಿಗೆ ಭದ್ರತೆ ನೀಡಿ ನಮ್ಮನ್ನು ಹೆದರಿಸ್ತಿದ್ರು. ಅವರ ವಿರುದ್ಧ ಕಠಿಣ ಕ್ರಮವಾಗಬೇಕೆಂದು ಮೃತನ ಪತ್ನಿ ರಾಧಾ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಆತ್ಮಹತ್ಯೆ ಮಾಡುವ ಮುನ್ನ ತನ್ನ ಪುಟ್ಟ ಮಗನ ಕೈಯಲ್ಲಿ ತಾಯಿಗೆ ನೀಡುವಂತೆ ಕೊಟ್ಟಿದ್ದ ಸುಸೈಡ್ ನೋಟನ್ನು ಮೃತ ಮಾರುತಿ ನಾಯ್ಕ್ ಪತ್ನಿ ರಾಧಾ ಮಾಧ್ಯಮದ ಮುಂದೆ ಬಿಡುಗಡೆಗೊಳಿಸಿದ್ದಾರೆ.
ಡೆತ್ ನೋಟ್ʻನಲ್ಲಿ ಏನಿದೆ?




ಹಿನ್ನೆಲೆ ಏನು?
ದಲಿತ ಮುಖಂಡ ಎಲಿಷಾ ಎಲಕಪಾಟಿ ಹಿಂದೂ ದೇವರು, ದೇವತೆಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಡಿಯೋ ಮಾರುತಿ ನಾಯ್ಕ್ನಿಂದಲೇ ಬೆಳಕಿಗೆ ಬಂದಿತ್ತು. ಬಳಿಕ ಎಲಿಷಾ ಎಲಕಪಾಟಿ ಕುಟುಂಬಸ್ಥರು ಮಾರುತಿ ನಾಯ್ಕ್ ಮೇಲೆ ಹಲ್ಲೆ ಕೂಡಾ ನಡೆಸಿದ್ದರು. ಬಳಿಕ ಪೊಲೀಸರು ಮಾರುತಿ ನಾಯ್ಕ್ ಹೆದರಿಸಿ, ಬೆದರಿಸಿ, ಹಲ್ಲೆ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ.



