ಭಯಂಕರ ಮತ್ತು ಸ್ಟೈಲಿಷ್.. ಎರಡೂ ಆಗುವುದು ಹೇಗೆ ಸಾಧ್ಯ. ಇದು ಸುದೀಪ್ ಅವರ ಅಭಿಮಾನಿಗಳ ಪ್ರಶ್ನೆ. ಸುದೀಪ್ ಅವರು ಸ್ಟೈಲಿಷ್ ಕೂಡಾ ಹೌದು. ರಕ್ತ ಸುರಿದುಕೊಂಡರೆ ನೋಡುವುದಕ್ಕೆ ಭಯಂಕರವೂ ಹೌದು. ಮ್ಯಾಕ್ಸ್ ಚಿತ್ರದಲ್ಲಿ ಅವೆರಡೂ ಇದೆ.
ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಪೊಲೀಸ್ ಆಫೀಸರ್. ಅರ್ಜುನ್ ಮಹಾಕ್ಷಯ್ ಅನ್ನೋ ಹೆಸರಿನ ಖಡಕ್ ಪೊಲೀಸ್ ಪಾತ್ರ. ವೀರ ಮದಕರಿ, ಕೆಂಪೇಗೌಡ ಚಿತ್ರದ ನಂತರ ಮತ್ತೊಮ್ಮೆ ಖಾಕಿ ತೊಟ್ಟಿದ್ಧಾರೆ ಸುದೀಪ್.
ಈಗ ಈ ಚಿತ್ರಕ್ಕೆ ಜೈಲರ್ ಚಿತ್ರದ ಸ್ಟಂಟ್ ಮಾಸ್ಟರ್ ಕೆವಿನ್ ಎಂಟ್ರಿ ಕೊಟ್ಟಿದ್ದಾರೆ. . ಖ್ಯಾತ ಫೈಟ್ ಮಾಸ್ಟರ್ ಸ್ಟನ್ ಶಿವ ಪುತ್ರ ಕೆವಿನ್, ತಂದೆಗಿಂತ ಡಿಫರೆಂಟ್ ಆಗಿ ಫೈಟ್ಸ್ ಕಂಪೋಸ್ ಮಾಡ್ತಾರೆ. ಮಾರ್ಷಲ್ ಆರ್ಟ್ಸ್ ಪಾರಂಗತರಾಗಿರುವ ಕೆವಿನ್, ‘ಮ್ಯಾಕ್ಸ್’ ಚಿತ್ರದಲ್ಲಿ ಕೆವಿನ್ ಒಂದು ಫೈಟ್ ಮಾತ್ರ ಕಂಪೋಸ್ ಮಾಡಿದ್ದಾರೆ. ಇನ್ನುಳಿದ ಆಕ್ಷನ್ ಸೀಕ್ವೆನ್ಸ್ ಚೇತನ್ ಡಿಸೋಜಾ ಮಾರ್ಗದರ್ಶನದಲ್ಲಿ ಮೂಡಿ ಬಂದಿದೆ.
‘ಜೈಲರ್’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ರಜನಿಕಾಂತ್ ಸಿಗರೇಟ್ ಸ್ಟೈಲ್ ಕಂಪೋಸ್ ಮಾಡಿದ್ದು ಇದೇ ಕೆವಿನ್. ತೆಲುಗಿನ ಅಖಂಡ ಚಿತ್ರದ ಸ್ಟಂಟ್ಸ್‌ಗಳ ಹಿಂದಿನ ಮೆದುಳು ಕೆವಿನ್ ಅವರದ್ದೇ. ಮಹಾಬಲಿಪುರಂನ ಸೆಟ್ಸ್‌ನಲ್ಲಿ ಐದು ದಿನ ಚಿತ್ರೀಕರಣವಾಗಿದೆ.
ವಿಜಯ್ ಕಾರ್ತಿಕೇಯ ನಿರ್ದೇಶನದ ಮ್ಯಾಕ್ಸ್ ಚಿತ್ರದಲ್ಲಿ ಸಂಯುಕ್ತಾ ಹೊರನಾಡು, ವಂಶಿ ಕೃಷ್ಣ, ವರಲಕ್ಷ್ಮಿ ಶರತ್ ಕುಮಾರ್ ನಟಿಸಿದ್ದಾರೆ.
ಈ ಚಿತ್ರ ರವಿತೇಜ್, ಶೃತಿ ಹಾಸನ್, ವರಲಕ್ಷ್ಮಿ, ಸಮುದ್ರಕಿಣಿ ನಟಿಸಿದ್ದ ಕ್ರಾಕ್ ಚಿತ್ರದ ರೀಮೇಕ್ ಎನ್ನಲಾಗಿದೆ. ಕ್ರಾಕ್ ಚಿತ್ರದ ಕ್ಲೈಮಾಕ್ಸ್ʻನಲ್ಲಿ ಪ್ರಾಣಿಗಳ ಹಸಿ ರಕ್ತ ಕುಡಿಯುವವರ ಜೊತೆ ಭಯಾನಕ ಫೈಟ್ ಇದೆ. ಇದೂ ಕೂಡಾ ಅಂತಹುದ್ದೇ ಫೈಟ್ಸ್ ಇರಬಹುದಾ..? ಕುತೂಹಲವಂತೂ ಇದ್ದೇ ಇದೆ. ವಿಚಿತ್ರವೆಂದರೆ.. ತೆಲುಗಿನ ಕ್ರಾಕ್ ಚಿತ್ರ ಕೂಡಾ ತಮಿಳಿನ ಸೇತುಪತಿ ಚಿತ್ರದ ಕಥೆಯಿಂದ ಸ್ಫೂರ್ತಿ ಪಡೆದು ಸಿದ್ಧವಾಗಿದ್ದ ಸಿನಿಮಾ.



