ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆದ ಮೇಲೆ ಟೀಂ ಇಂಡಿಯಾಗೆ ಚಾಂಪಿಯನ್ಸ್ ಟ್ರೋಫಿ ಗೆಲುವು ಸಿಕ್ಕಿದೆ. ಅದೊಂದನ್ನು ಬಿಟ್ಟರೆ ಕೆಟ್ಟ, ಮರೆಯಲೇಬೇಕು ಎನ್ನುವಂತಹ ವಿಚಿತ್ರ ದಾಖಲೆಗಳನ್ನು ಭಾರತ ಬರೆದಿದೆ. ಈಗ ನ್ಯೂಜಿಲೆಂಡ್ ವಿರುದ್ಧದ ಸರಣಿಯೂ ಅಷ್ಟೇ. 38 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ಭಾರತ, ಸ್ವದೇಶದಲ್ಲಿ ಸರಣಿ ಸೋತಿದೆ. ಅಷ್ಟೇ ಅಲ್ಲ.. ಇಲ್ಲಿ 32 ಕೆಟ್ಟ ದಾಖಲೆಗಳ ಲಿಸ್ಟ್ ಇದೆ. ಮಿಸ್ ಆಗಿದ್ದರೆ ನೀವೂ ಸೇರಿಸಬಹುದು.
ಗಂಭೀರ್ ಅವರ ಅವಧಿಯಲ್ಲಿ ಭಾರತದ ಕೆಲವು ಕೆಟ್ಟ ದಾಖಲೆಗಳನ್ನು ಪಟ್ಟಿ ಮಾಡುವುದಾದರೆ..
- 27 ವರ್ಷಗಳ ನಂತರ ಶ್ರೀಲಂಕಾವ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಸೋತಿದೆ.
- ಮೊದಲ ಬಾರಿಗೆ 3 ಪಂದ್ಯಗಳ ODI ಸರಣಿಯಲ್ಲಿ 30 ವಿಕೆಟ್‌ಗಳನ್ನು ಕಳೆದುಕೊಂಡಿದೆ.
- 45 ವರ್ಷಗಳ ನಂತರ ಕ್ಯಾಲೆಂಡರ್ ವರ್ಷದಲ್ಲಿ ODIಗಳಲ್ಲಿ ಗೆಲುವಿಲ್ಲದೆ ಉಳಿದ ದಾಖಲೆಯೂ ಗಂಭೀರ್ ಕೋಚ್ ಆದ ಮೇಲೆ ಆಗಿದ್ದು.
- 36 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ಸ್ವದೇಶದಲ್ಲಿ ಟೆಸ್ಟ್ ಸರಣಿ ಸೋತಿದೆ.
- 19 ವರ್ಷಗಳ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೆಸ್ಟ್ ಸೋತಿದೆ.
- ಮೊದಲ ಬಾರಿಗೆ ಸ್ವದೇಶದಲ್ಲಿ ಟೆಸ್ಟ್ ಪಂದ್ಯದಲ್ಲಿ 50 ರನ್‌ಗಳಿಗಿಂತ ಕಡಿಮೆಗೆ ಆಲ್‌ಔಟ್ ಆಗಿದ್ದು.
- ಮೊದಲ ಬಾರಿಗೆ NZ ವಿರುದ್ಧ ಮನೆಯಲ್ಲಿ ಟೆಸ್ಟ್ ಸರಣಿ ಸೋತಿತ್ತು.
- 2 ವರ್ಷಗಳ ನಂತರ ಸ್ವದೇಶದಲ್ಲಿ ಟೆಸ್ಟ್ ಸರಣಿ ಸೋತಿತ್ತು.
12 ವರ್ಷಗಳ ನಂತರ ಸತತ ಎರಡು ಮನೆಯ ಟೆಸ್ಟ್‌ಗಳನ್ನು ಸೋತಿದೆ.
- 12 ವರ್ಷಗಳ ನಂತರ ವಾಂಖೆಡೆಯಲ್ಲಿ ಟೆಸ್ಟ್ ಪಂದ್ಯ ಸೋತಿದೆ.
- 47 ವರ್ಷಗಳ ನಂತರ ಸ್ವದೇಶದಲ್ಲಿ ಸತತ 3 ಟೆಸ್ಟ್‌ಗಳನ್ನು ಸೋತಿದೆ.
- ಮೊದಲ ಬಾರಿಗೆ ಸ್ವದೇಶದಲ್ಲಿ 200ಕ್ಕಿಂತ ಕಡಿಮೆ ಗುರಿ (147, ವಾಂಖೆಡೆ) ಚೇಸ್ ಮಾಡಲು ವಿಫಲವಾಗಿ, ಸೋತಿತ್ತು.
- ಮೊದಲ ಬಾರಿಗೆ ಮನೆಯಲ್ಲಿ 3-0 ರಿಂದ ಟೆಸ್ಟ್ ಸರಣಿ ವೈಟ್‌ವಾಶ್ ಆಗಿತ್ತು.
- 13 ವರ್ಷಗಳ ನಂತರ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಟೆಸ್ಟ್ ಸೋತಿದ್ದು
- 10 ವರ್ಷಗಳ ನಂತರ ಸತತ ಎರಡು ಟೆಸ್ಟ್ ಸರಣಿಗಳನ್ನು ಸೋತಿದ್ದು
- 10 ವರ್ಷಗಳ ನಂತರ ಬಾರ್ಡರ್-ಗಾವಸ್ಕರ್ ಟ್ರೋಫಿ ಸೋತಿದ್ದು
- 12 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ 3 ಟೆಸ್ಟ್‌ಗಳನ್ನು ಸೋತಿದೆ.
- ಮೊದಲ ಬಾರಿಗೆ WTC ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ.
- 5 ಸೆಂಚುರಿಗಳನ್ನು ಸಿಡಿಸಿದ ನಂತರವೂ ಟೆಸ್ಟ್ ಸೋತ ಮೊದಲ ತಂಡ. ಲೀಡ್ಸ್ ಟೆಸ್ಟ್.
- 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 350+ ರನ್‌ಗಳನ್ನು ಡಿಫೆಂಡ್ ಮಾಡಲು ವಿಫಲವಾದ ಎರಡನೇ ಬಾರಿ (ಲೀಡ್ಸ್).
- ಇಂಗ್ಲೆಂಡ್ ವಿರುದ್ಧ 200ಕ್ಕಿಂತ ಕಡಿಮೆ ಗುರಿ (190, ಲಾರ್ಡ್ಸ್) ಚೇಸ್ ಮಾಡಲು ವಿಫಲವಾದ ಇದು ಎರಡನೇ ಬಾರಿ.
- 11 ವರ್ಷಗಳ ನಂತರ 600+ ರನ್‌ಗಳನ್ನು ಕೊಟ್ಟಿದೆ (ಮ್ಯಾಂಚೆಸ್ಟರ್ ಟೆಸ್ಟ್).
- 17 ವರ್ಷಗಳ ನಂತರ ಅಡಿಲೇಡ್‌ನಲ್ಲಿ ODI ಸೋತಿದೆ.
- 15 ವರ್ಷಗಳ ನಂತರ SA ವಿರುದ್ಧ ಭಾರತದಲ್ಲಿ ಟೆಸ್ಟ್ ಸೋತಿದೆ.
- 8 ವರ್ಷಗಳ ನಂತರ ಈಡನ್ ಗಾರ್ಡನ್ಸ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯ ಸೋತಿದೆ (9 ಗೆಲುವುಗಳ ನಂತರ).
- 124 ಗುರಿ ಚೇಸ್ ಮಾಡಲು ವಿಫಲವಾಗಿದೆ (ಸ್ವದೇಶದಲ್ಲಿ ಅತಿ ಕಡಿಮೆ ವಿಫಲ ಚೇಸ್).
- 25 ವರ್ಷಗಳ ನಂತರ SA ವಿರುದ್ಧ ಹೋಮ್ ಟೆಸ್ಟ್ ಸರಣಿ ಸೋತಿದೆ.
ಅದೂ ಅತಿ ದೊಡ್ಡ ಸೋಲು (408 ರನ್‌ಗಳಿಂದ). ಭಾರತದಲ್ಲಿ ವಿರೋಧಿ ತಂಡದಿಂದ ಅತಿ ದೊಡ್ಡ ಗುರಿ (549).
- 30 ವರ್ಷಗಳ ನಂತರ ಸ್ವದೇಶದ ಟೆಸ್ಟ್ ಸರಣಿಯಲ್ಲಿ ಒಂದೇ ಒಂದು ಸೆಂಚುರಿ ಆಟ ಬರಲಿಲ್ಲ.
- ಮೊದಲ ಬಾರಿಗೆ ಸತತ ಎರಡು ಕ್ಯಾಲೆಂಡರ್ ವರ್ಷಗಳಲ್ಲಿ ಸ್ವದೇಶದಲ್ಲಿ ಟೆಸ್ಟ್ ವೈಟ್ ವಾಶ್.
ಮೊದಲ ಬಾರಿಗೆ SA 300+ ರನ್ ಚೇಸ್ ಮಾಡಿದೆ.
- ಭಾರತದ ವಿರುದ್ಧ SA ಅತಿ ದೊಡ್ಡ ರನ್ ಚೇಸ್ (359).
- ಭಾರತದಲ್ಲಿ ಅತಿ ದೊಡ್ಡ ರನ್ ಚೇಸ್ ಗೆದ್ದ NZ (285).
- ಮೊದಲ ಬಾರಿಗೆ NZ ವಿರುದ್ಧ ಸ್ವದೇಶದಲ್ಲಿ ODI ಸರಣಿ ಸೋತಿದೆ.
- ಮೊದಲ ಬಾರಿಗೆ ಇಂದೋರ್‌ನಲ್ಲಿ ODI ಸೋತಿದೆ.
- ಮೊದಲ ಬಾರಿಗೆ NZ ವಿರುದ್ಧ ODI ಸರಣಿ ಡಿಸೈಡರ್ ಸೋತಿದೆ.
ಗೌತಮ್ ಗಂಭೀರ್ ಕೋಚ್ ಆದ ಮೇಲೆ ಗೆದ್ದಿರುವುದು ಒಂದು ಏಕದಿನ ಟ್ರೋಫಿ. ಚಾಂಪಿಯನ್ಸ್ ಟ್ರೋಫಿ. ಮತ್ತೊಂದು ಏಷ್ಯಾ ಕಪ್. ಅದು ಬಿಟ್ಟರೆ ಕೋಚ್ ಆಗಿ ಗಂಭೀರ್ ಸಕ್ಸಸ್ ಕಂಡಿದ್ದಕ್ಕಿಂತ ಟೀಕೆಗಳನ್ನು ಎದುರಿಸಿದ್ದೇ ಹೆಚ್ಚು.



