ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಮುಸ್ಲಿಂ ವಿರೋಧಿ ಎಂದು ಪ್ರತಿಪಕ್ಷಗಳು ಟೀಕಿಸುತ್ತವೆ. ಮೋದಿಯನ್ನು ಸೋಲಿಸಲು ಮತ ನೀಡಿ ಎಂದು ಪ್ರತಿಪಕ್ಷಗಳು ಮುಸ್ಲಿಮರನ್ನು ಒತ್ತಾಯಿಸುತ್ತವೆ. ಪ್ರಚಾರ ಮಾಡುತ್ತವೆ. ಮುಸ್ಲಿಮ್ ನಾಯಕರಂತೂ ಮೋದಿಯ ಹೆಸರು ಕೇಳಿದರೆ ಕೆಂಡವಾಗುತ್ತಾರೆ. ಆದರೆ ಮೋದಿಗೆ ಮುಸ್ಲಿಮರಲ್ಲಿ (Muslim) ಅಭಿಮಾನಿಗಳೂ ಇದ್ಧಾರೆ. ಮೋದಿಗೆ ಪ್ರತಿ ವರ್ಷ ರಾಖಿ ಕಳಿಸಿಕೊಡುವ ಪಾಕಿಸ್ತಾನದ ಮಹಿಳೆ, ತ್ರಿವಳಿ ತಲಾಖ್ ಶಿಕ್ಷೆಯಿಂದ ತಪ್ಪಿಸಿಕೊಂಡ ಮುಸ್ಲಿಂ ಮಹಿಳೆಯರು, ಜಮ್ಮು ಕಾಶ್ಮೀರದಲ್ಲಿ ಗಂಡ, ಮಕ್ಕಳನ್ನು ನೆಮ್ಮದಿಯಿಂದ ನೋಡಿಕೊಳ್ಳುತ್ತಿರುವ ಮಹಿಳೆಯರು. ಮುಸ್ಲಿಮ್ ಸಮುದಾಯದಲ್ಲಿರುವ ಜಾತಿ ವ್ಯವಸ್ಥೆಯಿಂದ ಬೇಸತ್ತು ಹೋಗಿರುವ ಕೆಳ ಜಾತಿಯ ಮುಸ್ಲಿಮರೂ ಸೇರಿದಂತೆ ಹಲವರು ಮೋದಿಯನ್ನು ಇಷ್ಟ ಪಡುವವರಿದ್ದಾರೆ. ಹಿಂದೂಗಳ ಜೊತೆ ಸಾಮರಸ್ಯದಿಂದ ಬದುಕುತ್ತಿರುವ ಮುಸ್ಲಿಮರಿಗೂ ಮೋದಿ ಅಚ್ಚುಮೆಚ್ಚು.
ಇದರ ನಡುವೆ : ಉತ್ತರ ಪ್ರದೇಶದ (Uttar Pradesh) ಸಂಶೋಧಕಿ ನಜ್ಮಾ ಪರ್ವೀನ್ (Najma Parveen) ಪ್ರಧಾನಿ ಮೋದಿ ಕುರಿತು ಪಿಎಚ್‌ಡಿ (Phd) ಮಾಡಿದ್ದಾರೆ. ಈ ಮೂಲಕ ಮೋದಿ ಕುರಿತ ಪಿಎಚ್‌ಡಿ ಅಧ್ಯಯನ ಮಾಡಿದ ಮೊದಲ ಮುಸ್ಲಿಂ ಮಹಿಳೆ ಇವರೇ ಎಂದು ಹೇಳಲಾಗಿದೆ. ಪ್ರಧಾನಿ ಮೋದಿಯ ಸ್ವಕ್ಷೇತ್ರ ವಾರಾಣಸಿಯವರೇ ಆದ ಈ ಮಹಿಳೆ ಮೋದಿಯ ರಾಜಕೀಯ ಜೀವನದ ಕುರಿತು ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.
ಉತ್ತರ ಪ್ರದೇಶದ ವಾರಾಣಸಿಯ ಲಲ್ಲಾಪುರದ ನಿವಾಸಿಯಾಗಿರುವ ಸಂಶೋಧಕಿ ನಜ್ಮಾ ಪರ್ವೀನ್ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (Banaras Hindu University) (ಬಿಎಚ್‌ಯು) ರಾಜ್ಯಶಾಸ್ತ್ರ ವಿಭಾಗದಿಂದ ‘ನರೇಂದ್ರ ಮೋದಿ ಅವರ ರಾಜಕೀಯ ನಾಯಕತ್ವ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ಶೀರ್ಷಿಕೆಯಡಿಯಲ್ಲಿ ಭಾರತದ ಪ್ರಧಾನಿ ಕುರಿತು ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.
ಈ ಮೂಲಕ ಪ್ರಧಾನಿ ಮೋದಿಯವರ ಬಗ್ಗೆ ಸಂಶೋಧನೆ ನಡೆಸಿದ ದೇಶದ ಮೊದಲ ಮುಸ್ಲಿಂ ಮಹಿಳೆ ಎನಿಸಿಕೊಂಡಿದ್ದಾರೆ ನಜ್ಮಾ ಪರ್ವೀನ್. ಇದರಲ್ಲಿ ಅವರು ಪ್ರಧಾನಿ ಮೋದಿಯನ್ನು ರಾಜಕೀಯದ ‘ಮೆಗಾಸ್ಟಾರ್’ (megha star) ಎಂದು ಬಣ್ಣಿಸಿದ್ದಾರೆ. ಪರ್ವೀನ್ 2014 ರಲ್ಲಿ ಸಂಶೋಧನೆಗೆ ಸೇರಿಕೊಂಡರು ಮತ್ತು ಪ್ರೊಫೆಸರ್ ಸಂಜಯ್ ಶ್ರೀವಾಸ್ತವ ಅವರ ಮೇಲ್ವಿಚಾರಣೆಯಲ್ಲಿ 8 ವರ್ಷಗಳಲ್ಲಿ ತನ್ನ ಪ್ರಾಜೆಕ್ಟ್ ಪೂರ್ಣಗೊಳಿಸಿದರು. ಆದರೆ ಅವರ ಪ್ರಬಂಧದ ಬಾಹ್ಯ ಪರೀಕ್ಷಕರು ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಬಂದಿದ್ದರು.
ಸಂಶೋಧಕಿ ನ್ಜಾಮ ಪರ್ವೀನ್ ಸಾಮಾನ್ಯ ನೇಕಾರ ಕುಟುಂಬದಿಂದ ಬಂದವರು ಮತ್ತು ಹಲವಾರು ವರ್ಷಗಳ ಹಿಂದೆ ತನ್ನ ಹೆತ್ತವರನ್ನು ಕಳೆದುಕೊಂಡಿದ್ದರು. ಕಷ್ಟಗಳನ್ನು ಎದುರಿಸಿ, ವಿಶಾಲ ಭಾರತ ಸಂಸ್ಥಾನದ ಸಂಸ್ಥಾಪಕ ಪ್ರೊಫೆಸರ್ ರಾಜೀವ್ ಶ್ರೀವಾಸ್ತವ ಅವರ ಆರ್ಥಿಕ ಬೆಂಬಲದೊಂದಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಿದರು.
ಇನ್ನು, ಮೋದಿಯನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದಕ್ಕೆ ಉತ್ತರಿಸಿದ ನಜ್ಮಾ ಪರ್ವೀನ್, ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿಯ ಮಾದರಿಯನ್ನು ರಚಿಸಿದ್ದರಿಂದ ನಾನು ಈ ವಿಷಯವನ್ನು ಆಯ್ಕೆ ಮಾಡಿದ್ದೇನೆ. ಬಳಿಕ, ಅವರ ಜನಪ್ರಿಯತೆ ಹೆಚ್ಚಾಯಿತು ಮತ್ತು ಅವರು ದೇಶದ ಪ್ರಧಾನಿಯಾದರು.
ಅಲ್ಲದೆ, 2014 ರ ಸಾರ್ವತ್ರಿಕ ಚುನಾವಣೆಗಳು ದೇಶದ ಸಂಪೂರ್ಣ ರಾಜಕೀಯ ಭೂದೃಶ್ಯವನ್ನು ಪರಿವರ್ತಿಸಿದವು. ಭಾರತೀಯ ಜನತಾ ಪಕ್ಷದ ಗೆಲುವು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವವನ್ನು ಗಣನೀಯವಾಗಿ ಕಡಿಮೆ ಮಾಡಿತು. ಪ್ರಧಾನಿಯಾಗಿ ಮೋದಿ ಕ್ರಿಯಾತ್ಮಕ ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ದೇಶದ ಅಭಿವೃದ್ಧಿ ಹಾಗೂ ಬಡವರ ಕಲ್ಯಾಣಕ್ಕಾಗಿ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡರು. ಅದಕ್ಕಾಗಿಯೇ ನಾನು ಈ ವಿಷಯವನ್ನು ಆಯ್ಕೆ ಮಾಡಿಕೊಂಡೆ ಎಂದು ಅವರು ಹೇಳಿದರು.
ಆರಂಭದಲ್ಲಿ ಕೆಲವರು ತನ್ನ ನಿರ್ಧಾರವನ್ನು ವಿರೋಧಿಸಿದರು. ಆದರೆ ನಾನು ನನ್ನ ಆಲೋಚನೆಯಲ್ಲಿ ದೃಢವಾಗಿದ್ದೆ, ಹಾಗೂ ಸಂಶೋಧನೆಗೆ ಮುಂದಾದೆ ಎಂದೂ ಪರ್ವೀನ್ ಹೇಳಿದರು. ಅಲ್ಲದೆ, ಮೋದಿಯವರಂತೆ ರಾಜಕಾರಣಿಯಾಗುವ ಕನಸು ಹೊತ್ತಿರುವ ಪರ್ವೀನ್, ತಾನು ಈಗಾಗಲೇ ಅಧ್ಯಕ್ಷೆಯಾಗಿರುವ ಭಾರತೀಯ ಅವಾಮ್ ಪಕ್ಷ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದೇನೆ ಎಂದೂ ಹೇಳಿದ್ದಾರೆ.
ಮೋದಿ ಕುರಿತ ಪ್ರಬಂಧವನ್ನು ಐದು ಅಧ್ಯಾಯಗಳಾಗಿ ವಿಂಗಡಿಸಲಾಗಿದೆ ಮತ್ತು ಪರ್ವೀನ್ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಲು 20 ಹಿಂದಿ ಪುಸ್ತಕಗಳು ಮತ್ತು ಪಿಎಂ ಮೋದಿ ಅವರ ಜೀವನಚರಿತ್ರೆ ಸೇರಿದಂತೆ 79 ಇಂಗ್ಲಿಷ್ ಪುಸ್ತಕಗಳನ್ನು ಉಲ್ಲೇಖಿಸಿದ್ದಾಗಿ ಹೇಳುತ್ತಾರೆ. ಅಲ್ಲದೆ, ಅವರು 37 ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಈ ಸಮಯದಲ್ಲಿ ಪ್ರಧಾನಿ ಮೋದಿಯವರ ಸಹೋದರ ಪಂಕಜ್ ಮತ್ತು ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್ ಅವರನ್ನು ಭೇಟಿಯಾದರು. ತ್ರಿವಳಿ ತಲಾಖ್ ವಿರುದ್ಧದ ಆಂದೋಲನ, ಕಾಶಿಯಿಂದ ಮುಸ್ಲಿಂ ಮಹಿಳೆಯರು ಪ್ರಧಾನಿ ಮೋದಿಗೆ ರಾಖಿಗಳನ್ನು ಕಳುಹಿಸುವುದು ಮತ್ತು ಮೋದಿಗೆ ಭಾರತೀಯ ಅವಾಮ್ ಪಕ್ಷದ ಬೆಂಬಲವನ್ನು ಸಂಶೋಧನೆಯಲ್ಲಿ ಪ್ರಮುಖವಾಗಿ ಸೇರಿಸಲಾಗಿದೆ ಎಂದು ಪರ್ವೀನ್ ಹೇಳಿದರು.
ರಾಜಕೀಯೇತರ ಮತ್ತು ಸರಳ ಕುಟುಂಬಕ್ಕೆ ಸೇರಿದ ನರೇಂದ್ರ ಮೋದಿಯವರು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿಯಾದ ನಂತರ ಇತಿಹಾಸವನ್ನು ಸೃಷ್ಟಿಸಲಾಯಿತು. ಆದ್ದರಿಂದ, ಪರ್ವೀನ್ ತನ್ನ ಸಂಶೋಧನೆಗಾಗಿ ಬಹಳ ಸೂಕ್ತವಾದ ವಿಷಯವನ್ನು ಆರಿಸಿಕೊಂಡಿದ್ದು, ಇದರಲ್ಲಿ ಕಲ್ಯಾಣ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಮೋದಿ ಅವರು ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿಯಾಗಿ ಮಾಡಿದ ವಿವಿಧ ಕ್ಷೇತ್ರಗಳಲ್ಲಿನ ಸುಧಾರಣೆಗಳನ್ನು ಒಳಗೊಂಡಿದೆ, ಎಂದು ರಾಜೀವ್ ಶ್ರೀವಾಸ್ತವ ಮೋದಿ ಕುರಿತ ಪ್ರಬಂಧದ ಬಗ್ಗೆ ಹೇಳಿದರು.
ತ್ರಿವಳಿ ತಲಾಖ್ (Triple Talaq) ವಿರುದ್ಧದ ಚಳವಳಿಯಲ್ಲಿ ಪರ್ವೀನ್ ಸಕ್ರಿಯರಾಗಿದ್ದರು. ಮೋದಿ ಸರ್ಕಾರವು ಈ ಆಚರಣೆಯ ವಿರುದ್ಧ ಕಾನೂನನ್ನು ರೂಪಿಸಿದಾಗ, ಅವರು ಪ್ರಧಾನಿಗೆ ಧನ್ಯವಾದ ಹೇಳಿದ ಮೊದಲ ಮುಸ್ಲಿಂ ಮಹಿಳೆಯರಲ್ಲಿ ಒಬ್ಬರು.



