ಮುಸ್ಲಿಮರು (muslims) ಅಲ್ಲಾನನ್ನು (Allah ho akbar) ಬಿಟ್ಟು ಬೇರೆ ದೇವರನ್ನು ನಂಬುವುದಿಲ್ಲ. ಆದರೆ ಭಾರತದಲ್ಲಿ ಮುಸ್ಲಿಮರಾಗಿದ್ದರೂ, ಹಿಂದೂ ದೇವರು, ಧಾರ್ಮಿಕ ಆಚರಣೆ ನಡೆಸುವವರಿಗೇನೂ ಕೊರತೆ ಇಲ್ಲ. ಅಂತಹ ಮುಸ್ಲಿಮರಿರುವ ಕಾರಣಕ್ಕೇ ಇವತ್ತಿಗೂ ಹಿಂದೂ-ಮುಸ್ಲಿಂ ಸಾಮರಸ್ಯ ಉಳಿದುಕೊಂಡಿದೆ ಎಂದರೂ ತಪ್ಪಲ್ಲ. ಮುಸ್ಲಿಮರು ದೇವಸ್ಥಾನಕ್ಕೆ ಹೋಗುವುದು, ಪೂಜೆ ಮಾಡಿಸುವುದು ಹೊಸದೇನಲ್ಲ. ಉತ್ತರ ಕರ್ನಾಟಕದಲ್ಲಿ ಹಿಂದೂ ದೇವರ ಸರ್ನೇಮ್ ಇಟ್ಟುಕೊಂಡಿರುವ ಸಾವಿರಾರು ಮುಸ್ಲಿಮರು ಸಿಗುತ್ತಾರೆ. ಗಣೇಶ ಹಬ್ಬ, ದೀಪಾವಳಿಗಳನ್ನು ಆಚರಿಸುವವರೂ ಇದ್ಧಾರೆ. ಗ್ರಾಮಗಳಲ್ಲಿ ಹಿಂದೂ ದೇವರ ಉತ್ಸವಗಳನ್ನು ಮುಂದೆ ನಿಂತು ನಡೆಸುವವರೂ ಇದ್ಧಾರೆ. ಆದರೆ ಹಿಂದೂ ಧರ್ಮದ ಆಚರಣೆಗಳನ್ನು ಆಚರಿಸುವವರ ಸಂಖ್ಯೆ ಕಡಿಮೆ. ಆದರೆ ಅಂತಹದ್ದೊಂದು ಅಪರೂಪದ ಪ್ರಕರಣ ಗೋಕರ್ಣದಲ್ಲಿ ನಡೆದಿದೆ. ಮುಸ್ಲಿಮರ ಕುಟುಂಬವೊಂದು ಹಿಂದೂ ಸಂಪ್ರದಾಯದಂತೆ ಪಿತೃ ಕಾರ್ಯ ನೆರವೇರಿಸಿದೆ.
ಧಾರವಾಡದ (dharawada) ಶಂಸಾದ್ ಕುಟುಂಬವು (shamsad family) ಮೊದಲಿನಿಂದಲೂ ಕುಂಡಲಿ, ಜಾತಕ, (jataka kundali) ಹಿಂದೂ ಸಂಪ್ರದಾಯದ (hindu trediton) ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ. ಹಿಂದೂ ಸಂಪ್ರದಾಯಗಳನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತಾ ಬಂದಿದ್ದಾರೆ. ಗದಗಿನ ವೀರನಾರಾಯಣ ದೇವಸ್ಥಾನದ ಹತ್ತಿರ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರ ಜೊತೆಯಲ್ಲಿಯೇ ಈ ಕುಟುಂಬ ಹೆಚ್ಚು ಒಡನಾಟ ಹೊಂದಿದೆ. ಶಂಸಾದ್ರ ತಮ್ಮನಿಗೆ ಮದುವೆ ಸಂಬಂಧವು ಸರಿಯಾಗಿ ಕೂಡಿ ಬರುತ್ತಿರಲಿಲ್ಲ, ಹೆಣ್ಣು ಸಿಕ್ಕಿಲ್ಲ ಅಂತಾ ಜ್ಯೋತಿಷಿಯ ಮೊರೆ ಹೋಗಿದ್ದರಂತೆ. ಆಗ ಅವರು ಶಂಸಾದ್ರ ಅಜ್ಜ ಹುಸೇನ್ ಸಾಬ್ ಸತ್ತು ಹಲವು ವರ್ಷಗಳಾದರೂ ಅವರ ಆತ್ಮಕ್ಕೆ ಇನ್ನೂ ಶಾಂತಿ ಸಿಕ್ಕಿಲ್ಲ. ಹೀಗಾಗಿ ನಿಮ್ಮ ಕುಟುಂಬಕ್ಕೆ ಅದರ ಕಾಟ ಶುರುವಾಗಿದೆ. ನೀವು ಪಿತೃಪಿಂಡ ಕಾರ್ಯ ಮಾಡಿ ಅಂತಾ ತಿಳಿಸಿದ್ದರಂತೆ.
ಅವರ ಸಲಹೆಯಂತೆ ನಡೆದು ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗದಲ್ಲಿ ಏಳಿಗೆ ಸಿಗಲಿ ಎಂಬ ಉದ್ಧೇಶದಿಂದ ಈ ಕಾರ್ಯ ಮಾಡಿದ್ದೇವೆ ಎಂದು ಶಂಸಾದ್ ಹೇಳಿದ್ದಾರೆ. ಜ್ಯೋತಿಷಿ ತೋರಿದ ಮಾರ್ಗದರ್ಶನದಂತೆ ಗೋಕರ್ಣಕ್ಕೆ (Gokarna) ಬಂದು, ಕ್ಷೇತ್ರ ಪುರೋಹಿತರಾದ ವೇದಬ್ರಹ್ಮ ನಾಗರಾಜ ಭಟ್ ಹಾಗೂ ಸುಬ್ರಹಣ್ಯ ಚಿತ್ರಿಗೆಮಠ ಇವರ ನೇತೃತ್ವದಲ್ಲಿ ಎಲ್ಲಾ ಕಾರ್ಯಗಳನ್ನು ನೆರವೇರಿಸಿದ್ದಾರೆ. ಗೋಕರ್ಣದಲ್ಲಿGokarna ಕ್ರಿಶ್ಚಿಯನ್ ಸಮುದಾಯದವರು (ಗೋವಾ ಮತ್ತು ವಿದೇಶಿಗರು) ಇಂತಹ ಪಿತೃಕಾರ್ಯ ನೆರವೇರಿಸುವ ಅನೇಕ ಉದಾಹರಣೆಗಳಿವೆ.



