ಸುದೀಪ್ (Kichcha Sudeep) ಮತ್ತು ಕುಮಾರ್ ನಡುವಿನ ಕಿತ್ತಾಟ ಇನ್ನೊಂದು ಹಂತಕ್ಕೆ ತಿರುಗಿದೆ. ಅತ್ತ ಸುದೀಪ್ (Kichcha Sudeep) ಮತ್ತು ಕುಮಾರ್ ನಡುವೆ ರವಿಚಂದ್ರನ್ ಸಂಧಾನಕ್ಕೆ ಪ್ರಯತ್ನ ಪಡುತ್ತಿದ್ದರೆ, ಇತ್ತ ಅವರ ಹಿಂದಿರುವವರು ಶರಂಪರ ಜಗಳಾಡುತ್ತಿದ್ದಾರೆ. ಕುಮಾರ್ ಪರವಾಗಿ ನಿಂತಿದ್ದ ಸೂರಪ್ಪ ಬಾಬು, ಸುದೀಪ್ (Kichcha Sudeep) ಪರವಾಗಿದ್ದ ಚಂದ್ರಚೂಡ್ (Chakravarhi Chandrachud) ಇಬ್ಬರೂ ಬೈದಾಡಿಕೊಳ್ಳುತ್ತಿದ್ದಾರೆ. ಚಂದ್ರಚೂಡ್ (Chakravarhi Chandrachud) ಅವರನ್ನು ಶಿಖಂಡಿ, ಎರಡು ಮದುವೆಯಾಗಿ ಕೈಕೊಟ್ಟವನು ಎಂದೆಲ್ಲ ಸೂರಪ್ಪ ಬಾಬು (SoorappaBabu) ಮಾತನಾಡಿದರೆ, ಚಂದ್ರಚೂಡ್ (Chakravarhi Chandrachud) ಹೆಂಡತಿ, ಮಕ್ಕಳು ಇದ್ದ ಮಾತ್ರಕ್ಕೇ ಗಂಡಸ್ತನ ಬರಲ್ಲ. ಕಾಲ್‍ಶೀಟ್‍ಗಾಗಿ ಮಗಳನ್ನು ಕಳಿಸಿದ್ದು ಏಕೆ ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ.
ನಿರ್ಮಾಪಕ ಎಂಎನ್ ಕುಮಾರ್ ಹಾಗೂ ಸೂರಪ್ಪ ಬಾಬು (SoorappaBabu) ಮಧ್ಯೆ ಆರಂಭ ಆಗಿರುವ ಜಟಾಪಟಿ ಕೊನೆಯ ಹಂತ ತಲುಪಿದೆ. ಈ ಪ್ರಕರಣ ಕೊನೆಗೊಳ್ಳಬಾರದು ಎಂಬ ಉದ್ದೇಶ ಸೂರಪ್ಪ ಬಾಬು (SoorappaBabu) ಅವರದ್ದು ಎಂದು ಆರೋಪಿಸಿರುವ ಚಂದ್ರಚೂಡ್, ಸೂರಪ್ಪ ಬಾಬು ಜೊತೆಯಲ್ಲಿದ್ದವರಿಗೇ ಹೀಗೆಲ್ಲ ಮಾಡೋದು. ಸೂರಪ್ಪ ಬಾಬು ಒಬ್ಬ ಸ್ಯಾಡಿಸ್ಟ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂರಪ್ಪ ಬಾಬು ನಿನಗೆ ಗೌರವ ನೀಡುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದೀಯಾ. ನನಗೆ ಎರಡು ಡಿವೋರ್ಸ್ ಆಗಿದೆ. ಅದು ಎಲ್ಲರಿಗೂ ಗೊತ್ತಿದೆ. ಪತ್ರಕರ್ತರಿಗೆ ಸೂರಪ್ಪ ಬಾಬು ಆಮಿಷಡವೊಡ್ಡಿದ್ದಾನೆ. ಅದರ ದಾಖಲೆಗಳನ್ನು ನೀಡುತ್ತೇನೆ ಎಂದಿರುವ ಚಂದ್ರಚೂಡ್, ನಾನು ನಿನಗೆ ಕೆಲಸ ಕೊಡುತ್ತೇನೆ. ನನಗೆ ಸೆಕ್ಯೂರಿಟಿ ಗಾರ್ಡ್ಬೇಕು. ಬಾ ನಿನಗೆ ಕೆಲಸ ಕೊಡುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಸುದೀಪ್ ಅವರನ್ನು ನನ್ನ ಅಣ್ಣ ಎಂದು ಸಂಬೋಧಿಸಿರುವ ಚಂದ್ರಚೂಡ್, ಸುದೀಪ್ ಎಷ್ಟು ನೊಂದುಕೊಂಡಿದ್ದಾರೆ ಅಂತ ಗೊತ್ತಾ? ಈಗ ಈ ಸಮಸ್ಯೆ ಬಗೆಹರಿಯುತ್ತಿದೆ. ಶಿವಣ್ಣ, ರವಿ ಸರ್ ಬಂದು ಬಗೆ ಹರಿಸ್ತಿದ್ದಾರೆ. ಆದರೆ, ಇದನ್ನು ಜೀವಂತವಾಗಿ ಇಡಲು ಪ್ರಯತ್ನ ಮಾಡ್ತಿದ್ದಾನೆ. ಸೂರಪ್ಪ ಬಾಬು ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾನೆ ಎಂದು ಟೀಕಿಸಿದ್ದಾರೆ.
‘ಸುದೀಪ್ ಅವರಿಗೆ ಸೂರಪ್ಪ ಬಾಬು ಏಳು ಕೋಟಿ ರೂಪಾಯಿ ಕೊಡಬೇಕು. ನಾನು ಕೇಳೇ ಕೇಳ್ತೀನಿ. ಸಮಯ ಬಂದಾಗ ಸುದೀಪ್ ಅವರು ಕೂಡ ಒಂದು ದಿನ ಇದನ್ನು ಕೇಳೆ ಕೇಳ್ತಾರೆ’ ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್.
ನನಗೆ ಮಗಳು ಇದ್ದಾಳೆ ನಾನು ಸೂರಪ್ಪ ಬಾಬು ಮಗಳ ಬಗ್ಗೆ ಮಾತಡಲ್ಲ. ಕೋಟಿಗೊಬ್ಬ ಡೇಟ್ ಗಾಗಿ ಸೂರಪ್ಪ ಬಾ ಮಗಳನ್ನ ಯಾಕೆ ಕಳಿಸಿದ್ರು ಎಂದು ಪ್ರಶ್ನೆ ಮಾಡಿರುವ ಚಂದ್ರಚೂಡ್ ಸುದೀಪ್ ಸರ್ ಕ್ಷಮಿಸಬಹುದು ಅದ್ರೆ ನಾನು ಕ್ಷಮಿಸಲ್ಲ. ಹೇಡಿ ಸೂರಪ್ಪ ಬಾಬು ಅವ್ರಿಂದಲೇ ಸಹಾಯ ಪಡೆದು ಅವ್ರಿಗೆ ವಂಚನೆ ಮಾಡ್ತೀರಾ ಅಂದ್ರೆ ನಿಮ್ದು ಲಜ್ಜೆಗೇಡಿತನ ಎಂದು ಕಿಡಿಕಾರಿದ್ದಾರೆ.



