ಡಿಂಪಲ್ ಹಯಾತಿ. ವಯಸ್ಸಿನ್ನೂ 24 ವರ್ಷ. ನಟಿಸಿರೋದು ಕೆಲವೇ ಕೆಲವು ಚಿತ್ರಗಳು. ಗಲ್ಫ್, ರಾಮಬನಂ ಚಿತ್ರಗಳು. ಇಷ್ಟೊತ್ತಿಗಾಗಲೇ ಒಂದು ಕಿರಿಕ್ ಮಾಡಿಕೊಂಡು ಪರ್ಸನಲ್ ಲೈಫ್‍ನ್ನು ಬೀದಿಗೆ ತಂದುಕೊಂಡಿದ್ದಾರೆ.
ಹಯಾತಿ ಅವರು ವಿಕ್ಟರ್ ಡೇವಿಡ್ ಎನ್ನುವವರ ಜೊತೆ ಲಿವ್ ಇನ್ ರಿಲೇಷನ್`ಶಿಪ್ಪಿನಲ್ಲಿದ್ದರು. ಒಂದೇ ಅಪಾರ್ಟ್‍ಮೆಂಟಿನಲ್ಲಿ, ವಾಸವಿದ್ದರು. ಅದೇ ಅಪಾರ್ಟ್‍ಮೆಂಟಿನಲ್ಲಿ ರಾಹುಲ್ ಹೆಗ್ಡೆ ಎನ್ನುವ ಐಪಿಎಸ್ ಆಫೀಸರ್ ಕೂಡಾ ವಾಸವಿದ್ದರು. ಆದರೆ ಕಾರ್ ಪಾರ್ಕಿಂಗ್ ಮಾಡುವ ವಿಷಯಕ್ಕೆ ರಾಹುಲ್ ಹೆಗ್ಡೆಯವರ ಜೊತೆ ಗಲಾಟೆ ಮಾಡಿಕೊಂಡ ಹಯಾತಿ ಇದೀಗ ಪರ್ಸನಲ್ ಲೈಫ್ ಬೀದಿಗೆ ಬಂದ ಕಾರಣ ಸಂಕಷ್ಟಕ್ಕೀಡಾಗಿದ್ದಾರೆ. ವಿನಾಕಾರಣ ಕಿರಿಕ್ ಮಾಡಿದ್ದ ಆರೋಪ ಹೊತ್ತಿದ್ದ ಹಯಾತಿ, ಆನಂತರ ರಾಹುಲ್ ಹೆಗ್ಡೆ ಅವರ ಕಾರ್`ಗೆ ಡ್ಯಾಮೇಜ್ ಮಾಡಿದ್ದರು. ಇದು ಸಾಕ್ಷಿ ಸಮೇತ ಸಿಕ್ಕಿಬಿದ್ದಿತ್ತು.
ರಾಹುಲ್ ಹೆಗ್ಡೆ, ಹಯಾತಿ ಹಾಗೂ ವಿಕ್ಟರ್ ಡೇವಿಡ್ ಇಬ್ಬರ ವಿರುದ್ದವೂ ಕೇಸ್ ದಾಖಲಿಸಿದ್ದಾರೆ. ಯಾವಾಗ ಅಧಿಕೃತವಾಗಿ ಕೇಸ್ ದಾಖಲಾಯಿತೋ ಹಯಾತಿ-ವಿಕ್ಟರ್ ಸಂಬಂಧ ಜಗಜ್ಜಾಹೀರಾಗಿದೆ. ಬಾಯ್ಫ್ರೆಂಡ್ ಹೆಸರು ಲೀಕ್ ಆಗಿರುವ ವಿಚಾರದಲ್ಲಿ ಡಿಂಪಲ್ ಹಯಾತಿ ಚಿಂತೆಗೆ ಒಳಗಾಗಿದ್ದಾರೆ. ಇಷ್ಟು ವರ್ಷ ಮುಚ್ಚಿಟ್ಟ ಸತ್ಯ ಈಗ ಹೊರ ಬಂದಿದೆ. ಈ ಬಗ್ಗೆ ಅನೇಕರು ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇಷ್ಟು ವರ್ಷ ಈ ವಿಚಾರ ಮುಚ್ಚಿಟ್ಟಿದ್ದೇಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಇದರಿಂದ ಡಿಂಪಲ್ ಹಯಾತಿ ಅಪ್ಸೆಟ್ ಆಗಿದ್ದಾರೆ.



