Saturday, June 14, 2025
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಕರು ಹಾಕಿಲ್ಲ.. ದಿನಕ್ಕೆ 4 ಲೀಟರ್‌ ಹಾಲು ಕೊಡುವ ಹಸು : ಏನಿದು ಪವಾಡ..?

SpeciallU by SpeciallU
October 29, 2024
in News
0 0
0
ಕರು ಹಾಕಿಲ್ಲ.. ದಿನಕ್ಕೆ 4 ಲೀಟರ್‌ ಹಾಲು ಕೊಡುವ ಹಸು : ಏನಿದು ಪವಾಡ..?

ಹಸುವೇ ಆಗಲಿ, ಯಾವುದೇ ಪ್ರಾಣಿಯಾಗಲಿ.. ಹಾಲು ಕೊಡಬೇಕು ಎಂದರೆ ಅದು ತಾಯಿಯಾಗಬೇಕು. ಆದರೆ, ತಾಯಿಯಾಗದೆಯೇ ಹಾಲು ಕೊಡುವ ವಿಚಿತ್ರವೊಂದು ಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ. ಉತ್ತರ ಪ್ರದೇಶದ ಬಹ್ರೈಚ್​ನಲ್ಲಿ ಒಂದು ಅದ್ಭುತವಾದ ಹಸುವಿದೆ. ಈ ಹಸು ಇದುವರೆಗೂ ಒಮ್ಮೆಯೂ ಗರ್ಭ ಧರಿಸಿಲ್ಲ. ಆದರೂ ಪ್ರತಿದಿನ 4 ಲೀಟರ್ ಹಾಲು ಕೊಡುತ್ತಿದೆ. ಈ ಹಸು ಪಶುವೈದ್ಯರನ್ನೇ ಬೆರಗುಗೊಳಿಸಿದೆ. ಜನರ ಕಣ್ಣಿಗಂತೂ ಇದು ಕಾಮಧೇನುವೇ ಆಗಿದೆ. ಪೂಜೆ ಪುನಸ್ಕಾರಗಳೂ ನಡೆಯುತ್ತಿವೆ.

ಆರಂಭದಲ್ಲಿ ಈ ಹಸು ಕೇವಲ 250 ಮಿಲಿ ಲೀಟರ್ ಹಾಲು ಕೊಡುತ್ತಿತ್ತಂತೆ. ಕ್ರಮೇಣ ದಿನ ಕಳೆದಂತೆ 4 ಲೀಟರ್‌ʻವರೆಗೂ ಹಾಲು ಕೊಡುತ್ತಿದೆ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಪಯಾಗ್‌ಪುರ ತೆಹಸಿಲ್‌ನ ಗಂಗಾ ತಿವಾರಿ ಪುರ್ ಗ್ರಾಮದಲ್ಲಿ ಈ ಹಸು ಇದೆ. ಈ ಹಸುವಿನ ಮಾಲೀಕ ನಿವೃತ್ತ ಪ್ರಾಧ್ಯಾಪಕ ಡಾ. ಓಂಕಾರನಾಥ್ ತ್ರಿಪಾಠಿ ಎಂಬುವವರು. ಅವರು ತಮ್ಮ ಜೀವನವನ್ನೇ ಹಸುಗಳಿಗಾಗಿ ಸಮರ್ಪಿಸಿಕೊಂಡಿರುವ ವ್ಯಕ್ತಿ. ಅಂದಹಾಗೆ ಇದು ನಾಟಿ ಹಸು ಅಲ್ಲ. ಹೈಬ್ರಿಡ್ ಹಸು.

Related posts

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗೋದು ಪಕ್ಕಾ : ನೂತನ ಜಿಲ್ಲಾಧ್ಯಕ್ಷರ ಪಟ್ಟಿ ನೋಡಿ..!

ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳಾಗುವುದು ಮುಸ್ಲಿಮರಲ್ಲಿ : ಹಿಂದೂಗಳ ಸ್ಥಾನ ಎಲ್ಲಿ..?

ಹೈಬ್ರಿಡ್ ಸಾಹಿವಾಲ್ ಹಸು ಸುಮಾರು 6 ತಿಂಗಳ ಹಿಂದೆ ಹಾಲು ಉತ್ಪಾದಿಸಲು ಪ್ರಾರಂಭಿಸಿದಾಗಿ ಹಸುವಿಗೆ ಎರಡೂವರೆ ವರ್ಷವಾಗಿತ್ತು. ಆರಂಭದಲ್ಲಿ, ಇದು ಕೇವಲ 250 ಮಿ.ಲೀ. ಇಳುವರಿಯನ್ನು ನೀಡುತ್ತಿತ್ತು. ಆದರೆ ನಿಯಮಿತ ಹಾಲುಕರೆಯುವ ಅಭ್ಯಾಸ ರೂಢಿಸಿಕೊಂಡ ನಂತರ ಹಾಲಿನ ಉತ್ಪಾದನೆಯು ದಿನಕ್ಕೆ 4 ಲೀಟರ್‌ಗೆ ಹೆಚ್ಚಿದೆ.

ಹಾಗಂತ ಈ ಹಸುವಿಗೆ ಏನೇನೂ ವಿಶೇಷ ಮುತುವರ್ಜಿ ವಹಿಸಿರಲಿಲ್ಲ. ಯಾವುದೇ ಸಾಮಾನ್ಯ ಹಸುವಿನಂತೆಯೇ ಮೇವು ಮತ್ತು ನೀರನ್ನು ನೀಡುತ್ತಾರೆ. ಕುತೂಹಲದ ಅಂಶ ಎಂದರೆ ತನ್ನ ಆರೈಕೆಯಲ್ಲಿರುವ ಕರುವನ್ನು ಪೋಷಿಸಲು ಹಸುವಿನ ಹಾಲನ್ನೇ ಬಳಸ್ತಾರೆ. ಹಾಗಾದರೆ ಹಸುವಿನ ಈ ಪವಾಡಕ್ಕೆ ಕಾರಣ ಹಸುವಿಗೆ ಹಸುವಿನ ಹಾಲನ್ನೇ ಕುಡಿಸುವುದಾ..? ಗೊತ್ತಿಲ್ಲ. ಏಕೆಂದರೆ ಈ ಹಸುವಿನ ತಾಯಿ ಮೃತಪಟ್ಟಾಗ ಹಸುವನ್ನು ಸಾಕುವುದಕ್ಕಾಗಿ ಹಸುವಿನ ಹಾಲನ್ನೇ ಕುಡಿಸಿ ಬೆಳೆಸಿದ್ದರಂತೆ.

ಹಸುವಿನ ಹಾಲು ಕಡಿಮೆಯಾಗದೆ ಹಾಗೇ ಉಳಿದಿದ್ದರೂ ಅದರ ಕೊಬ್ಬಿನಂಶವು ಬೇರೆ ಹಸುಗಳ ಹಾಲಿನ ಸರಾಸರಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸ್ಥಳೀಯ ಪಶುವೈದ್ಯರ ಆಸಕ್ತಿಯನ್ನು ಕೆರಳಿಸಿದೆ.

ಪ್ರಾಣಿ ವಿಜ್ಞಾನಿಗಳು ಗರ್ಭಧಾರಣೆಯಿಲ್ಲದೆ ಹಸುವಿನಲ್ಲಿ ಹಾಲು ಉತ್ಪಾದನೆಯು ಹಾರ್ಮೋನ್ ಅಸಮತೋಲನದಿಂದ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹಾರ್ಮೋನ್‌ ವ್ಯತ್ಯಾಸವಾದರೆ ಕರು ಹಾಕದ ಎಲ್ಲ ಹಸುಗಳೂ ಹಾಲು ಕೊಡಲು ಸಾಧ್ಯವೇ ಎಂಬ ಪ್ರಶ್ನೆಗೆ ಪ್ರಾಣಿ ತಜ್ಞರಲ್ಲೂ ಉತ್ತರ ಇಲ್ಲ.

ಕರುವಿಗೆ ಜನ್ಮ ನೀಡಿದೆ ಹಾಲು ನೀಡುತ್ತಿರುವ ಈ ಹಸು ಇದೀಗ ಗ್ರಾಮದ ತುಂಬಾ ಭಾರಿ ಸುದ್ದಿಯಾಗಿದೆ. ಹೀಗಾಗಿ ಪ್ರತಿ ದಿನ ಗ್ರಾಮಸ್ಥರು ಓಂಕಾರನಾಥ್ ಮನೆಗೆ ಆಗಮಿಸುತ್ತಿದ್ದಾರೆ. ಪೂಜೆ ಮಾಡುತ್ತಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ. ಹಲವರು ಇದು ಸಾಕ್ಷಾತ್ ಕಾಮಧೇನು ಎಂದು ಹೇಳುತ್ತಿದ್ದಾರೆ. ಪೂಜೆ ಮಾಡಿದ ಬಳಿಕ ಗ್ರಾಮಸ್ಥರು, ಹಣ್ಣು ಹಂಪಲುಗಳನ್ನು ಹಸುವಿಗೆ ಅರ್ಪಿಸುತ್ತಿದ್ದಾರೆ.

Tags: Cow miracleಉತ್ತರಪ್ರದೇಶ ಬಹ್ರೈಚ್ಕರು ಹಾಕದ ಹಸುಕಾಮೇಧೇನುಗರ್ಭ ಧರಿಸದ ಹಸುಪವಾಡಹಾಲು ಕೊಟ್ಟಾಗ
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಹೆಚ್.ಡಿ. ಕುಮಾರಸ್ವಾಮಿಯ ಆಪ್ತರಕ್ಷಕ ಯಾರು? ನನಗೆ 3ನೇ ಜನ್ಮ ಸಿಕ್ಕಿದೆ ಎಂದಿದ್ದೇಕೆ ಕುಮಾರಣ್ಣ?

    0 shares
    Share 0 Tweet 0
  • ಕುಮಾರಸ್ವಾಮಿ ಕೆಲಸಗಳಿಗೆ ನರೇಂದ್ರ ಮೋದಿ ಫುಲ್‌ ಹ್ಯಾಪಿ..!

    0 shares
    Share 0 Tweet 0

Follow us on social media:

Recent News

  • ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗೋದು ಪಕ್ಕಾ : ನೂತನ ಜಿಲ್ಲಾಧ್ಯಕ್ಷರ ಪಟ್ಟಿ ನೋಡಿ..!
  • ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳಾಗುವುದು ಮುಸ್ಲಿಮರಲ್ಲಿ : ಹಿಂದೂಗಳ ಸ್ಥಾನ ಎಲ್ಲಿ..?
  • ಊಟದಲ್ಲಿ ಪದೇ ಪದೇ ಕೂದಲು ಸಿಗುತ್ತಿದ್ದರೆ.. ಎಚ್ಚರಿಕೆ. ಅದು ಮೂರು ಪ್ರಮಾದಗಳ ಮುನ್ಸೂಚನೆ..!

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗೋದು ಪಕ್ಕಾ : ನೂತನ ಜಿಲ್ಲಾಧ್ಯಕ್ಷರ ಪಟ್ಟಿ ನೋಡಿ..!

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗೋದು ಪಕ್ಕಾ : ನೂತನ ಜಿಲ್ಲಾಧ್ಯಕ್ಷರ ಪಟ್ಟಿ ನೋಡಿ..!

June 12, 2025
ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳಾಗುವುದು ಮುಸ್ಲಿಮರಲ್ಲಿ : ಹಿಂದೂಗಳ ಸ್ಥಾನ ಎಲ್ಲಿ..?

ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳಾಗುವುದು ಮುಸ್ಲಿಮರಲ್ಲಿ : ಹಿಂದೂಗಳ ಸ್ಥಾನ ಎಲ್ಲಿ..?

June 12, 2025
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
Manage options Manage services Manage {vendor_count} vendors Read more about these purposes
View preferences
{title} {title} {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.