ಹಾವಿನ ದ್ವೇಷ.. 12 ವರ್ಷ ಅಂತಾರೆ. ಅದು ಕನ್ನಡದ ಗಾದೆ ಮಾತು ಕೂಡಾ ಹೌದು. ಆದರೆ.. ಹಾವಿಗೆ ನೆನಪಿನ ಶಕ್ತಿ ಇರಲ್ಲ ಎನ್ನುವುದು ವಿಜ್ಞಾನ. ಸೈಂಟಿಸ್ಟುಗಳ ಪ್ರಕಾರ ಹಾವಿಗೆ ಮೆದುಳಿರುತ್ತೆ. ಆದರೆ ಹಾವಿಗೆ ನೆನಪಿನ ಶಕ್ತಿ ಇರುವುದಿಲ್ಲ. ಈ ವಾದವನ್ನು ಕೆಲವರು ಒಪ್ಪೋದಿಲ್ಲ. ಮೆದುಳು ಇರುತ್ತೆ ಅನ್ನೋದು ಸತ್ಯವಾದರೆ, ನೆನಪಿನ ಶಕ್ತಿಯೂ ಇರಬೇಕಲ್ವಾ ಎಂದು ಪ್ರಶ್ನೆ ಮಾಡ್ತಾರೆ.
ವಿಜ್ಞಾನಿಗಳ ಪ್ರಕಾರ ಹಾವು ಹಾಲು ಕುಡಿಯಲ್ಲ. ಹಾವಿಗೆ ಕಿವಿಗಳೇ ಇಲ್ಲ. ಪುಂಗಿಯ ಸೌಂಡಿಗೆ ಹೆಡೆ ಆಡಿಸುವುದು ಕೇವಲ ಮೂವ್ʻಮೆಂಟ್ ನೋಡಿಕೊಂಡು ಮಾತ್ರ.. ಕಿವಿಗಳೇ ಇಲ್ಲದೆ ಹಾವಿಗೆ ಶಬ್ಧ ಕೇಳಿಸುವುದಿಲ್ಲ. ಅದೆಲ್ಲ ಮೌಢ್ಯ ಕಣ್ರೀ.. ನೆನಪಿನ ಶಕ್ತಿಯೇ ಇಲ್ಲದ ಹಾವು ದ್ವೇಷ ಕಾರೋದು ಹೇಗೆ ಸಾಧ್ಯ ಅನ್ನೋ ಪ್ರಶ್ನೆಗೆ ಸವಾಲಾಗುವಂತ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.
24 ವರ್ಷದ ವಿಕಾಸ್ ದುಬೆ ಎನ್ನುವ ಯುವಕನೊಬ್ಬ, 40 ದಿನಗಳ ಅಂತರದಲ್ಲಿ ವಿಷಕಾರಿ ಹಾವಿನಿಂದ ಬರೋಬ್ಬರಿ 7 ಸಲ ಕಚ್ಚಿಸಿಕೊಂಡಿದ್ದಾನೆ. ಅಲ್ಲದೇ ಪ್ರತಿ ಶನಿವಾರ ಹಾವು ಕಡಿದಿದೆ. ಪ್ರತಿ ಶನಿವಾರ ಹಾವಿನ ಕಡಿತಕ್ಕೆ ಒಳಗಾಗುವ ಯುವಕ ಒಂದೇ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ. ಅಲ್ಲದೇ ಆಸ್ಪತ್ರೆಗೆ ದಾಖಲಾದ ಒಂದೇ ದಿನದಲ್ಲಿ ಗುಣಮುಖನಾಗುತ್ತಿದ್ದ ಹಾವು ಕಚ್ಚಿದ ಬಳಿಕ ಆತ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಹಣಕಾಸು ನೆರವನ್ನೂ ಕೇಳಿದ್ದ.
ಆರು ಬಾರಿ ಯುವಕನಿಗೆ ಏನೂ ಆಗಲಿಲ್ಲ. ಆದರೆ ಏಳನೇ ಬಾರಿಗೆ ಹಾವು ಕಚ್ಚಿದಾಗ ಯುವಕನ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿದೆ. ಯುವಕನಿಗೆ ಮೂರನೇ ಬಾರಿ ಹಾವು ಕಚ್ಚಿದಾಗ ಅವನಿಗೂ ಅದರ ಬಗ್ಗೆ ಕನಸು ಬಿದ್ದ ಬಗ್ಗೆಯೂ ಯುವಕ ಹೇಳಿದ್ದಾನೆ. ಕನಸಲ್ಲಿ, ‘ನಾನು ನಿನ್ನನ್ನು 9 ಬಾರಿ ಕಚ್ಚುತ್ತೇನೆ’ ಎಂದು ಹೇಳಿತಂತೆ! ಮುಂದುವರಿದು, ಎಂಟನೆಯ ಬಾರಿ ಕಚ್ಚಿದಾಗಲೂ ನೀನು ಸಾಯುವುದಿಲ್ಲ. ಆದರೆ ಒಂಬತ್ತನೇ ಬಾರಿಗೆ ಯಾವುದೇ ಶಕ್ತಿ, ಯಾವುದೇ ತಂತ್ರಿ ಅಥವಾ ವೈದ್ಯರು ನಿನ್ನನ್ನು ಉಳಿಸಲು ಸಾಧ್ಯವಿಲ್ಲ. ನಾನು ನಿನ್ನನ್ನು ನನ್ನೊಂದಿಗೆ ಕರೆದುಕೊಂಡು ಹೋಗುತ್ತೇನೆ. ಅಚ್ಚರಿ ಎಂದರೆ ಪ್ರತಿ ಬಾರಿ ಶನಿವಾರ ಮತ್ತು ಭಾನುವಾರ ದಿನದಂದೇ ಯುವಕ ಹಾವು ಕಚ್ಚಿಸಿಕೊಂಡಿದ್ದಾನೆ. ಈ ಬಾರಿ ಶನಿವಾರ ಬಾಲಾಜಿ ದೇವಸ್ಥಾನಕ್ಕೆ ಹೋಗುವ ಬಗ್ಗೆ ಚರ್ಚೆ ನಡೆದಿದೆ ಎಂದು ಸಂತ್ರಸ್ತೆಯ ಚಿಕ್ಕಪ್ಪ ತಿಳಿಸಿದ್ದಾರೆ. ಆದರೆ ಗುರುವಾರ ರಾತ್ರಿಯೇ ಹಾವು 7ನೇ ಬಾರಿಗೆ ಕಚ್ಚಿದೆ. ಈ ಪ್ರಕರಣ ನೋಡಿ ಯುವಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಅಚ್ಚರಿಗೊಂಡಿದ್ದಾರೆ.
ಯುವಕರು ಮತ್ತು ಅವರ ಕುಟುಂಬ ಸದಸ್ಯರು ಹೇಳುವಂತೆ, ಪ್ರತಿ ಬಾರಿ ಹಾವು ಕಚ್ಚುವ ಮೊದಲು ಭಯಗೊಂಡಿದ್ದಾನೆ. ತಪ್ಪಿಸಿಕೊಳ್ಳಲು ತನ್ನ ಚಿಕ್ಕಮ್ಮ ಅಥವಾ ಚಿಕ್ಕಪ್ಪನ ಮನೆಗೆ ಹೋಗಿದ್ದಾನೆ. ಆದರೆ ಅಲ್ಲಿಯೂ ಹಾವು ಕಚ್ಚಿದೆ. ಯುವಕ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದು ಹೇಗೆ ಸಾಧ್ಯ ಎಂದು ಅಲ್ಲಿನ ವೈದ್ಯರೂ ಆಶ್ಚರ್ಯ ಪಡುತ್ತಿದ್ದಾರೆ. ಈಗಾಗಲೇ ಏಳು ಬಾರಿ ಹಾವು ಕಚ್ಚಿದೆ. ಒಂಭತ್ತನೇ ಬಾರಿ ಯಾರಿಂದಲೂ ಉಳಿಸಲು ಸಾಧ್ಯವಿಲ್ಲ ಎಂದಿರುವ ಹಾವು. ಇಂತಹ ಸನ್ನಿವೇಶದಲ್ಲಿ ಇದು ನಿಜವಾದರೆ? ಎಂದು ಪೋಷಕರು ಆತಂಕಕ್ಕೀಡಾಗಿದ್ದಾರೆ.
ಆದರೆ ವೈದ್ಯರು ಮಾತ್ರ.. ನಿಜವಾಗಿಯೂ ಹಾವು ಕಚ್ಚುತ್ತಿದೆಯೇ ಎಂಬುದನ್ನು ನಾವು ಲೆಕ್ಕಾಚಾರ ಮಾಡಬೇಕು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯರ ಸಾಮರ್ಥ್ಯವನ್ನು ನೋಡಬೇಕಿದೆ. ಪ್ರತಿ ಶನಿವಾರ ಒಬ್ಬ ವ್ಯಕ್ತಿಗೆ ಹಾವು ಕಚ್ಚುತ್ತದೆ. ಮತ್ತು ಅವನು ಒಂದೇ ಆಸ್ಪತ್ರೆಗೆ ದಾಖಲಾಗಿಸಲಾಗುತ್ತದೆ. ಒಂದೇ ದಿನದಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಾನೆ. ಇದು ಆಶ್ವರ್ಯಕರ. ಹೀಗಾಗಿ ಹೆಚ್ಚಿನ ತನಿಖೆಗೆ ಮುಖ್ಯ ವೈದ್ಯಾಧಿಕಾರಿ ಮೂವರು ವೈದ್ಯರ ತಂಡ ರಚಿಸಲಾಗಿದೆ ಎಂದಿದ್ದಾರೆ.



